ಶಾಂತಿ
ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ,
ದೊರೆಯದು ಶಾಂತಿ,
ಪೊಜೆ, ಪುನಸ್ಕಾರ,ಸಂತರ್ಪಣೆ,
ನೀಡದು ಬಯಸುವ ಶಾಂತಿ.
ಭವಿಷ್ಯದ ಚಿಂತೆಯಲ್ಲಿ,
ಹಾಳಾಗುತ್ತಿದೆ ಶಾಂತಿ,
ಭೂತವ ನೆನೆದು ಕೊರಗಿದರೆ,
ಹೊಂದಲಾಗದು ಶಾಂತಿ.
ಅರಸುತ ಸಾಗಿದರೆ ದೂರ,
ನಿನ್ನದಾಗದು ಶಾಂತಿ,
ಇರುವುದರಲ್ಲೇ ತೃಪ್ತಿ ಪಡಲು,
ಸಿಗಬಹುದೇನೋ ಶಾಂತಿ.
ವಾಸ್ತವವ ಅರಿತರೆ,
ಅಂತರಾಳದಿ ಶಾಂತಿ,
ನಿನ್ನೊಳಗೆ ನಿನ್ನ ಹುಡುಕಲು,
ಸಿಗದೆ ಇರಲಾರದು ಶಾಂತಿ.
– ಮಂಜುಶ್ರೀ ಬಸವರಾಜ ಹಾವಣ್ಣವರ