ನಿರೀಕ್ಷೆಯಲಿ…

ನಿರೀಕ್ಷೆಯಲಿ…

ಬದುಕಿನ ಇಳಿಸಂಜೆಯಲಿ
ಕಾಯುತಿರುವೆ ನನ್ನೊಡಲ ಕುಡಿಗಾಗಿ
ರಾಮನ ಶಬರಿಯಂತೆ..
ಹೊತ್ತು ಹೆತ್ತು ಕೈ ತುತ್ತು ಉಣಿಸಿ
ಮಳೆ ಚಳಿ ಬಿಸಿಲು ತಾಗದಂತೆ
ಸೆರಗು ಹೊದಿಸಿ ಬೆಳೆಸಿ
ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿ
ಸಂತಸಪಟ್ಟ ನನ್ನೊಡಲಿಗೇ
ಒದೆದು ಹೋದ ಮಗನಿಗಾಗಿ
ಕಾಯುತಿರುವೆ ಅಹಲ್ಯೆಯಂತೆ..
ಕಂಬನಿ ಸುರಿಸಿ ಸುರಿಸಿ
ಬತ್ತಿದ ಕಂಗಳೆರಡು
ಮಂಜಾದರೂ ಕಾಣಬಯಸಿದೆ
ತಾಯ ನಾಚಿಕೆ ಇಲ್ಲದ ಕರುಳು
ಬಂದೇ ಬಂದಾನು ‘ ಅವ್ವಾ ‘ ಎಂದು ,
ನಿರುಕಿಸುತಿರುವೆ ಹಗಲಿರುಳು ನಿರಂತರ
ದೂರದ ಭರವಸೆಯ ದಾರಿಯೆಡೆಗೆ..

ರಚನೆ : ಹಮೀದಾಬೇಗಂ ದೇಸಾಯಿ ಸಂಕೇಶ್ವರ 

Don`t copy text!