ಡಾ.ಶಿವಶರಣಪ್ಪ ಇತ್ಲಿ ಫೌಂಡೇಶನ್ ಕಾರ್ಯರಂಭ
e-ಸುದ್ದಿ ಮಸ್ಕಿ
ಮಸ್ಕಿ ಹಿರಿಯ ವೈದ್ಯ ಡಾ.ಶಿವಶರಣಪ್ಪ ಇತ್ಲಿ ಅವರ ಹೆಸರಿನಲ್ಲಿ ಅವರ ಕುಟುಂಬ ವರ್ಗದವರು ಫೌಂಡೇಶನ್ ಪ್ರಾರಂಭಿಸಿದ್ದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ಮುಂದಾಗಿದ್ದಾರೆ.
ಡಾ.ಶಿವಶರಣಪ್ಪ ಇತ್ಲಿ ಅವರು ಮೂಲತಃ ರಾಯಚೂರಿನವರು. ಕಳೆದ ೫೦ ವರ್ಷಗಳ ಹಿಂದೆ ಮಸ್ಕಿಗೆ ಬಂದು ಆಸ್ಪತ್ರೆ ಆರಂಭಿಸಿ ವೈದ್ಯಕೀಯ ಸೇವೆಯಲ್ಲಿ ತೊಡಗಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ವೈದ್ಯರನ್ನು ದೇವರೆಂದೆ ಪರಿಗಣಿಸುತ್ತಾರೆ. ಡಾ.ಶಿವಶರಣಪ್ಪ ಇತ್ಲಿ ಅವರನ್ನು ಕೂಡ ಗ್ರಾಮೀಣ ಭಾಗದ ಜನರು ದೇವರಂತೆ ಪರಿಗಣಿಸುತ್ತಾರೆ.
ಡಾ.ಶಿವಶರಣಪ್ಪ ಇತ್ಲಿ ಅವರು ತಮ್ಮ ಜೀವನದೂದ್ದಕ್ಕು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅವರ ಸಮಾಜ ಸೇವೆಯನ್ನು ಮನಗಂಡಿರುವ ಅವರ ಮಕ್ಕಳು, ಸೊಸೆಯಂದಿರು, ಕುಟುಂಬದ ಪರಿವಾರದವರು ಡಾ.ಶಿವಶರಣಪ್ಪ ಇತ್ಲಿ ಫೌಂಡೇಶನ್ ಪ್ರಾರಂಭಿಸಿದ್ದು ಸಿಂಧನೂರಿನ p.w.d. ಕ್ಯಾಂಪ್ ನಲ್ಲಿ ಇರುವ ಆಶಾ ಕಿರಣ ಅನಾಥ ಮತ್ತು ಬಡ ಮಕ್ಕಳ ಸಂಸ್ಥೆಯಲ್ಲಿರುವ ವಿದ್ಯಾರ್ಥಿ ಗಳಿಗೆ ಊಟ ಮಾಡಿಸುವ ಮೂಲಕ ಡ.ಶಿವಶರಣಪ್ಪ ಇತ್ಲಿ ಫೌಂಡೇಷನ್ ಗೆ ಚಾಲನೆ ನೀಡಿದ್ದಾರೆ.