ಇಳಿ ಸಂಜೆ
ಬದುಕುಬಲು ಭಾರ
ಈ ಇಳಿವಯಸು ಭಾರ
ಇಳಿಸಂಜೆ ಮನ ಭಾರ
ಮೌನ ಇನ್ನೂ ಭಾರ
ಭಾರದ ಹೊತ್ತು
ಬಾರದ ಹೊತ್ತು
ನಡೆದನು ಸಂಜೆ ಹೊತ್ತು
ಹಾಗೇ ನೊಂದನು
ಮಕ್ಕಳಿಗಾಗಿ ಸವೇದನು
ನೊಂದನು ಹಾತೊರೆದನು
ಒಲವಿಗಾಗಿ ಹಲಬಿದನು
ಕೊರಗಿ ಮರಗಿದನು
ಇಳಿ ವಯಸ್ಸಿನಲ್ಲಿ
ಇಳಿ ಸಂಜೆಯಲ್ಲಿ
ಭಾರದ ಹೃದಯದಿ
ಮರಗಿ ಕೊರಗಿ ನಿರಾಸೆಯಲ್ಲಿ
ದಾರಿ ಕಾಣದೆ ನಿಂತನು
ದಿಕ್ಕು ತೋಚದೆ ಸೋತನು
ದಿನ ನಿತ್ಯ ಜೀವನ
ಅದೇ ರೀತಿ ಸೋಲಿನ ಹಂದರ
–ಕವಿತಾ ಮಳಗಿ