ಕಸಾಪ ಚುನಾವಣೆ : ಒಂದು ಸ್ಪಷ್ಟೀಕರಣ
ಶತಮಾನ ಮೀರಿದ ಇತಿಹಾಸವುಳ್ಳ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಮೊಟ್ಟ ಮೊದಲ ಬಾರಿಗೆ ಏಕೈಕ ಮಹಿಳೆಯೊಬ್ಬಳ ಸ್ಪರ್ಧೆ. ಸಹಜವಾಗಿ ಕೆಲವರಲ್ಲಿ ಅಸಹಿಷ್ಣುತೆಯ ಅಸೂಯೆಯ ಜೊಲ್ಲು ಸೋರತೊಡಗಿದೆ. ಅದರಲ್ಲೂ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತೆಯಾದ ನನ್ನ ಪ್ರಬುದ್ಧ ಸ್ಪರ್ಧೆ ಸಹಿಸದ ಕೆಲವು ಎದುರಾಳಿಗಳು ತಮ್ಮ ಸೋಲಿನ ಭಯದಿಂದಾಗಿ ಅಪ ಪ್ರಚಾರಕ್ಕಿಳಿದಿದ್ದಾರೆ. ನನ್ನ ಸ್ಪರ್ಧೆಯನ್ನು ಹೀಗಳೆಯುವ ” ಅವರಿವರನ್ನು ಸೋಲಿಸುವ ಮತ್ತು ಮತ್ತೊಬ್ಬರನ್ನು ಗೆಲ್ಲಿಸುವ, ಕೇವಲ ಮತ ವಿಭಜನೆಗಾಗಿ ನನ್ನ ಸ್ಪರ್ಧೆ ” ಎಂಬ ಕುಹಕದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ನನ್ನ ಸಾಹಿತ್ಯ ಮತ್ತು ರಂಗಭೂಮಿ ಬದುಕಿನ ಅರ್ಧ ಶತಮಾನದಷ್ಟು ಕಾಲ ಕನ್ನಡ ಸಂಸ್ಕೃತಿ ಮತ್ತು ಮಹಿಳಾ ಅಸ್ಮಿತೆಯ ಹೋರಾಟದ ಗಟ್ಟಿಧ್ವನಿಯಾಗಿ ಜನಪರತೆಯನ್ನು ಬದುಕಿದವಳು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನನ್ನ ಸ್ಪರ್ಧೆ ಒಂದು ಐತಿಹಾಸಿಕ ಆಯಾಮದ ಸೃಷ್ಟಿಶೀಲ ಕನಸಿನ ಅನುಸಂಧಾನ. ನನ್ನನ್ನು ಗೆಲ್ಲಿಸುವ ಮೂಲಕ ಅದರ ಅನುಷ್ಠಾನಕ್ಕೆ ಬನ್ನಿ ನಾವೆಲ್ಲ ಅಣಿಯಾಗೋಣ. ನನ್ನ ಗೆಲುವು ಮಹಿಳಾ ಕುಲದ ಗೆಲುವು. ಮಹಿಳೆಯನ್ನು ಗೆಲ್ಲಿಸಿದ ಕೀರ್ತಿ ತಮ್ಮದಾಗಲಿ.
-ಡಾ. ಸರಸ್ವತಿ ಶಿವಪ್ಪ ಚಿಮ್ಮಲಗಿ*
ಕೇಂದ್ರ ಕ.ಸಾ.ಪ. ಚುನಾವಣೆ ಅಧ್ಯಕ್ಷ ಸ್ಥಾನದ ಏಕೈಕ ಮಹಿಳಾ ಅಭ್ಯರ್ಥಿ.