ಮಳೆಗೆ ಸಂತೆ ಯಡವಟ್ಟು
e-ಸುದ್ದಿ ಮಸ್ಕಿ
ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ೩ ಗಂಟೆಗೆ ಏಕಾಏಕಿ ಸುರಿದ ಮಳೆಯಿಂದಾಗಿ ಸಂತೆಯಲ್ಲಿದ್ದ ಕಾಯಿಪಲ್ಲೆ ತೊಯ್ದು ತೊಪ್ಪಡಿಯಾಗಿ ಅಸ್ತವ್ಯಸ್ತವಾದ ಘಟನೆ ಜರುಗಿದೆ.
ಮಾಧ್ಯಾಹ್ನದ ನಂತರವೇ ಹಳ್ಳಿಯ ಜನ ಸಂತೆಗೆ ಬಂದು ಧವಸ ಧಾನ್ಯ, ಕಾಳು ಕಡಿ, ತರಕಾರಿ ಖರೀದಿಸುತ್ತಿದ್ದರು. ಅದರಂತೆ ಇಂದು ಮಧ್ಯಾಹ್ನ ಸಂತೆಯಲ್ಲಿ ಜನ ಜಂಗುಳಿಯಿಂದ ಕೂಡಿತ್ತು. ಮಳೆ ಸುರಿಯುತ್ತಿದ್ದಂತೆ ಜನರು ದಿಕ್ಕು ಪಾಲಾಗಿ ಓಡಿ ಹೊದರು. ಮಳೆಯಿಂದ ರಕ್ಷಿಸಲು ವ್ಯಾಪಾರಸ್ಥರು ತರಕಾರಿ ರಕ್ಷಣೆಯಲಿ ತೊಡಗಿದರು. ಮಳೆಯಿಂದಾಗಿ ರಸ್ತೆಗಳೆಲ್ಲ ಚರಂಡಿಗಳಂತಾಗಿತ್ತು.