ಮಸ್ಕಿ ಜಲಾಶಯಕ್ಕೆ ಹೆಚ್ಚಿದ ಒಳ ಹರಿವು ಹಳ್ಳಕ್ಕೆ ನೀರು

ಮಸ್ಕಿ ಜಲಾಶಯಕ್ಕೆ ಹೆಚ್ಚಿದ ಒಳ ಹರಿವು ಹಳ್ಳಕ್ಕೆ ನೀರು
e- ಸುದ್ದಿ ಮಸ್ಕಿ
ಮಸ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು ಶನಿವಾರ ಮಸ್ಕಿ ಹಳ್ಳ ಹಾಗೂ ಕಾಲುವೆಗಳಿಗೆ ೩೦೦ ಕ್ಯೂಸೆಕ್ ನೀರು ಹರಿ ಬಿಡಲಾಗಿದೆ ಎಂದು ಜಲಾಶಯದ ಎಇ ದಾವುದ್ ತಿಳಿಸಿದ್ದಾರೆ.
 ಶುಕ್ರವಾರ ಮತ್ತು ಶನಿವಾರ ಜಲಶಾಯದ ಮೇಲಭಾಗದಲ್ಲಿ ಸತತ ಸುರಿದ ಮಳೆಯಿಂದಾಗಿ ಜಲಾಶಯಕ್ಕೆ ೨೦೦ ಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬಂದಿದ್ದು ಜಲಾಶಯ ಭರ್ತಿಯಾದ ಕಾರಣ ೨೯ ಅಡಿ ನೀರು ಶೇಖರಣೆಯಾಗಿದೆ. ಹೆಚ್ಚುವರಿ ನೀರನ್ನು ಹಳ್ಳಕ್ಕೆ ಹರಿ ಬಿಡಲಾಗಿದೆ.
ಈಗಾಗಲೇ ರೈತರ ಬೆಳೆಗಳಿಗೆ ಅನುಕೂಲವಾಗಲು ಎಡ ಮತ್ತು ಬಲದಂಡೆ ಕಾಲುವೆ ನೀರು ಹರಿಸುತ್ತಿದ್ದು ಮಳೆ ಅಧಿಕವಾಗಿದ್ದರಿಂದ ನೀರನ್ನು ಹಳ್ಳಕ್ಕೆ ಬಿಟ್ಟಿರುವದಾಗಿ ಎಇ ದಾವುದ್ ತಿಳಿಸಿದರು.
ಹಳ್ಳದ ದಂಟೆಗುಂಟ ಇರುವ ಗ್ರಾಮಸ್ಥರು ಎಚ್ಚರದಿಂದ ಇದ್ದು ಹಳ್ಳಕ್ಕೆ ಜನ ಜಾನುವಾರುಗಳು ಹೋಗದಂತೆ ಎಚ್ಚರದಿಂದ‌ ಇರಲು ಮಸ್ಕಿ, ಬಳಗಾನೂರು ಪುರಸಭೆ, ಅಧಿಕಾರಿಗಳಿಗೆ ಹಾಗೂ ಗ್ರಾ ಪ.ಪಂ ಪಿಡಿಒ ಗಳಿಗೆ ಮಾಹಿತಿ ನೀಡಿದ್ದು ಯಾರು ಹಳ್ಳಕ್ಕೆ ಹೋಗಬಾರದೆಂದು ಎಇ ದಾವುದ್ ಮನವಿ‌ ಮಾಡಿದ್ದಾರೆ.
Don`t copy text!