ಜನರ ಸಮಸ್ಯೆ ಆಲಿಸಿದ ತಾಲೂಕು ಆಡಳಿತ, ಪರಿಹಾರ ಸೂಚಿಸಿದ ಶಾಸಕ ಬಸನಗೌಡ ತುರ್ವಿಹಾಳ
e-ಸುದ್ದಿ ಮಸ್ಕಿ
ತಾಲೂಕಿನ ಜಾಲವಾಡಗಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಜರುಗಿತು.
ಮಸ್ಕಿ ಕ್ಷೇತ್ರದ ಶಾಸಕ ಆರ್ ಬಸನಗೌಡ ತುರ್ವಿಹಾಳ ಹಾಗೂ ಮಸ್ಕಿ ತಹಸೀಲ್ದಾರ್ ಕವಿತಾ. ಆರ್ ಜೋತಿ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿದರು.
ಗ್ರಾಮದ ಜನರ ಸಮಸ್ಯೆಗಳಿಗೆ ಶಾಸಕ ಬಸನಗೌಡ ತುರ್ವಿಹಾಳ ಹಾಗೂ ತಹಸೀಲ್ದಾರ್ ಕವಿತಾ ಆರ್ ಸ್ಪಂದಿಸಿ ಸ್ಥಳದಲ್ಲಿ ಪರಿಹಾರ ಸೂಚಿಸಿದರು.
ಇಡೀ ದಿನ ಜಾಲವಾಡಗಿ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಕುಂದು ಕೊರತೆ ಆಲಿಸಿದರು. ನಂತರ ಗ್ರಾಮದ ಅಂಗನವಾಡಿ ಕೇಂದ್ರ, ಹಾಗೂ ಸಾರ್ವಜನಿಕ ಶೌಚಾಲಯ, ಸೇರಿದಂತೆ ಇತರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ಸಂದರ್ಭದಲ್ಲಿ ಗ್ರಾಮಸ್ಥರ ನೀಡಿದ ಅಹವಾಲುಗಳನ್ನು ಸ್ವೀಕರಿಸಿದರು. ಲಿಖಿತ ರೂಪದ ಅರ್ಜಿಗಳನ್ನು ಸ್ಥಳದಲ್ಲಿಯೇ ಪಡೆದುಕೊಂಡರು.
ಅಂಗನವಾಡಿಗೆ ಭೇಟಿ ನೀಡಿದಾಗ ಕರೊನಾ ಹಿನ್ನಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರ ಧಾನ್ಯಗಳನ್ನು ಮನೆ ಮನೆಗೆ ವಿತರಿಸುವತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದರು. ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಮೊಟ್ಟೆ ವಿತರಿಸಲು ಸೂಚಿಸಿದರು. ಲಸಿಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಒಟ್ಟು 70 ಅರ್ಜಿಗಳು ಬಂದಿದ್ದು ಪರಿಹಾರ ಕಂಡುಕೊಂಡರು.
ಪ್ರತಿಯೊಂದು ಅರ್ಜಿಗಳ ಬಗ್ಗೆ ವೇದಿಕೆ ಮೇಲೆ ಚರ್ಚಿಸಿ ಸಂಬಂಧಪಟ್ಟದ ಅಧಿಕಾರಿಗಳ ಮೂಲಕ ಬಗೆಯರಿಸುವ ಕೆಲಸ ಮಾಡಲಾಯಿತು. ಅಲ್ಲದೇ ಸ್ವೀಕೃತವಾದ ಅರ್ಜಿಗಳಲ್ಲಿ ಸಿಸಿ ರೋಡ, ಹೆಚ್ಚುವರಿ ಅಂಗನವಾಡಿ ಬೇಡಿಕೆ, ಶೌಚಾಲಯ, ಸ್ಮಶಾನ ಜಾಗ, ಕೆರೆ ತುಂಬಿಸುವುದು, ಕೆರೆ ನಿರ್ಮಾಣ, ವಿರಸಾ ಪೋತಿ ಆಧಾರ, ವಿಧವಾವೇತನ,ಬಸ್ಸಿನ ಸೌಕರ್ಯ, ಸೇರಿದಂತೆ ಇತರೆ ಸಮಸ್ಯೆಗಳು ಒಳಗೊಂಡಿದ್ದವು.
ಗೌಡನಭಾವಿ ಗ್ರಾಮಪಂಚಾಯ್ತಿ ಅಧ್ಯಕ್ಷ ದುರ್ಗಮ್ಮ, ಉಪಾಧ್ಯಕ್ಷರಾದ ರವಿಕುಮಾರ್ ಗ್ರಾಮ ಪಂಚಾಯಿತಿ ಸದಸ್ಯ ಮಾಂತೇಶ ಜಾಲವಾಡಗಿ, ಎಸ್ ವಿ ಪಾಟೀಲ್ ಸಾರಿಗೆ ವ್ಯವಸ್ಥಾಪಕರು ಮಸ್ಕಿ, ಭೂ ದಾಖಲೆಗಳ ಇಲಾಖೆ ಅಧಿಕಾರಿ ಶಿವಕುಮಾರ್, ತಾಲ್ಲೂಕು ಪಂಚಾಯ್ತಿ , ಕೃಷಿ ಅಧಿಕಾರಿ ಶಿವದತ್ತ, ಪುರಸಭೆ ಮುಖ್ಯ ಅಧಿಕಾರಿ ಹನುಮಂತಮ್ಮ ನಾಯಕ್, ಬಳಗಾನೂರು ಉಪತಹಸೀಲ್ದಾರ ನಾಗಲಿಂಗಪ್ಪ ಪತ್ತಾರ್, ಕಂದಾಯ ನಿರೀಕ್ಷಕ ಕರಿಬಸವ, ಗೌಡನಬಾವಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿಕಾಂತ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.