ಸಂಡೆ ಫಾರ್ ಸೋಷಿಯಲ್ ವರ್ಕ್ ಅಭಿಯಾನ
ಮಸ್ಕಿ ಸರ್ಕಾರಿ ಆಸ್ಪತ್ರೆ ಆವರಣ ಸ್ವಚ್ಚಗೊಳಿಸಿದ ಯುವಕರ ತಂಡ
e-ಸುದ್ದಿ ಮಸ್ಕಿ
ಮಸ್ಕಿ: ಸ್ಥಳೀಯ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆರಂಭಿಸಿರುವ ಸಂಡೆ ಫಾರ್ ಸೋಷಿಯಲ್ ವರ್ಕ್ ಸ್ವಚ್ಚತಾ ಅಭಿಯಾನ ಅಂಗವಾಗಿ ಭಾನುವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ನಡೆದಿದರು.
ಮಸ್ಕಿ ಪಟ್ಟಣದ ಸಿಂಧನೂರು ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಪ್ರತಾಪಗೌಡ ಪಾಟೀಲ್ ಪೌಂಡೇಶನ್ ಪದಾಧಿಕಾರಿಗಳ ಹಾಗೂ ಪುರಸಭೆ ಸಿಬ್ಬಂದಿಗಳ ಸಹಯೋಗದಲ್ಲಿ
ಬೆಳಿಗ್ಗೆಯಿಂದ ಆಸ್ಪತ್ರೆಯ ಆವರಣ ಸೇರಿದಂತೆ ಆಸ್ಪತ್ರೆಯ ಸುತ್ತಮುತ್ತ ಬಿದ್ದಿರುವ ಕಸವನ್ನು ಸ್ವಚ್ಛಗೊಳಿಸಿದರು. ಮಸ್ಕಿ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ:ಬಸವಶ್ರೀ,
ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ, ಪ್ರತಾಪಗೌಡ ಪಾಟೀಲ್ ಪೌಂಡೇಶನ್ ಅಧ್ಯಕ್ಷ ಪ್ರಸನ್ನ ಪಾಟೀಲ್, ಮಸೂದ್ ಪಾಷಾ, ಹಾಗೂ ಪದಾಧಿಕಾರಿಗಳು, ನೆಹರು ಯುವ ಕೇಂದ್ರ ರಾಯಚೂರಿನ ಸ್ವಯಂ ಸೇವಕರು, ಅಭಿನಂದನ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸರಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿಗಳು, ಪುರಸಭೆ ಸಿಬ್ಬಂದಿಗಳು ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.