ಕನ್ನಡ ಸಾಹಿತ್ಯ ಪರಿಷತ್ತು – ಧಾರವಾಡ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ – 2021

ಕನ್ನಡ ಸಾಹಿತ್ಯ ಪರಿಷತ್ತು – ಧಾರವಾಡ ಜಿಲ್ಲಾ ಘಟಕ
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ – 2021

ಚುನಾವಣೆ ದಿನಾಂಕ: 21.11.2021
ಸಮಯ: ಬೆಳಿಗ್ಗೆ ೮ ರಿಂದ ಸಾಯಂಕಾಲ 4 ರ ವರೆಗೆ

ಸನ್ಮಾನ್ಯ ಸಾಹಿತ್ಯ ಪ್ರಿಯರೇ,

ನಾನು ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ.

 

ವಿಜಯಕುಮಾರ ಈಶ್ವರ ಕಮ್ಮಾರ ಬಿ. ಈ (ಮೆಕ್ಯಾನಿಕಲ್‌ ಇಂಜನೀಯರಿಂಗ್)
ಅಂತರಾಷ್ಟ್ರೀಯ “ಬಸವ ತತ್ವ” ಪ್ರಚಾರಕರು ಮತ್ತು ಸಾಹಿತಿಗಳು

ತಮ್ಮ ಅಮೂಲ್ಯವಾದ ಮತವನ್ನು ನೀಡಿ ಕನ್ನಡಾಂಬೆಯ ಸೇವೆಗೆ ಅವಕಾಶ ಮಾಡಿಕೊಡಬೇಕಾಗಿ ವಿನಂತಿಸುತ್ತೇನೆ.

ಸಂಕಲ್ಪಗಳು (ಗುರಿಗಳು ಮತ್ತು ಧೇಯೋದ್ದೇಶಗಳು) 
೧) ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಕಾರ್ಯ ಪ್ರವೃತ್ತವಾಗುವುದು. ಈ ಮೂಲಕ ಕನ್ನಡಾಂಬೆಯ ಸೇವೆಯನ್ನು ಮಾಡಲಿಚ್ಛಿಸುವ ಎಲ್ಲ ಕನ್ನಡಿಗರಿಗೆ ಜಿಲ್ಲಾ ಸಾಹಿತ್ಯ ಪರಿಷತ್ತು “ತೆರೆದ ಬಾಗಿಲು” ಎನ್ನುವ ಭಾವನೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.

೨)  ವಿದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಇತ್ತೀಚಿನವರೆಗೂ ಕಡೆಗಣಿಸಿದ್ದನ್ನು ನನ್ನ ಹಲವಾರು ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಕಂಡಿದ್ದೇನೆ. ಈ ನಿಟ್ಟಿನಲ್ಲಿ ಹೊರನಾಡು ಕನ್ನಡಿಗರಿಗೆ ಜಿಲ್ಲಾ ಸಾಹಿತ್ಯ ಪರಿಷತ್ತು “ತವರು ಮನೆ” ಎನ್ನುವ ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗುವುದು.
೩) ಹೊರನಾಡು ಕನ್ನಡಿಗರನ್ನು ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳುವ ಪ್ರಯತ್ನ ಮಾಡಲಾಗುವುದು.
೪)  ಧಾರವಾಡ ಮತ್ತು ತಾಲೂಕು ಕೇಂದ್ರಗಳಲ್ಲಿ ಅತ್ಯಾಧುನಿಕ ಗಣಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಇರುವ ಕನ್ನಡ ಭವನ ನಿರ್ಮಾಣ. ಅಂತರ್ಜಾಲ ಉಪನ್ಯಾಸಗಳ ಮೂಲಕ ಚರ್ಚೆ, ಸಂವಾದ, ಅನುಸಂಧಾನಗಳನ್ನು ನಿಯಮಿತವಾಗಿ ನಡೆಸುವುದು.
೫)  ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಆಜೀವ ಸದಸ್ಯರನ್ನು ಮಾಡುವ ಮೂಲಕ ಬಲಪಡಿಸಲಾಗುವುದು.
೬) ಎಲೆಮರೆ ಕಾಯಿಯಂತಿರುವ ಉದಯೋನ್ಮುಖ ಸಾಹಿತಿಗಳಿಗೆ ಪ್ರೋತ್ಸಾಹ ನೀಡಲು ಕಾರ್ಯಕ್ರಮಗಳನ್ನು ರೂಪಿಸುವುದು.
೭) ವಚನ ಸಾಹಿತ್ಯದಿಂದ ಹಿಡಿದು ಇತ್ತೀಚಿನ ನವೋದಯ ಸಾಹಿತ್ಯದವರೆಗೆ ಮಹಿಳಾ ಲೇಖಕಿಯರ ಪಾತ್ರ ಅಮೋಘವಾದದ್ದು. ಮಹಿಳಾ ಲೇಖಕಿಯರಿಗೆ ಪ್ರಥಮ ಪ್ರಾಶಸ್ತ್ಯ ನೀಡುವುದು.
೮)  ಸಾಹಿತ್ಯದ ಎಲ್ಲ ಪ್ರಾಕಾರಗಳನ್ನು ಗಮನದಲ್ಲಿರಿಸಿಕೊಂಡು ಉಪನ್ಯಾಸ ಕಾರ್ಯಕ್ರಮಗಳನ್ನು ರೂಪಿಸುವುದು. ಎಲ್ಲ ಸಾಹಿತ್ಯ ಪ್ರಿಯರು ಭಾಗವಹಿಸುವಂತೆ ಆಕರ್ಷಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಸಮ್ಮೇಳನಗಳು 
o ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ
o ಮಕ್ಕಳ ಸಾಹಿತ್ಯ ಸಮ್ಮೇಳನ
o ಮಹಿಳಾ ಸಾಹಿತ್ಯ ಸಮ್ಮೇಳನ
o ಯುವ ಸಾಹಿತ್ಯ ಸಮ್ಮೇಳನ
o ವಚನ ಸಾಹಿತ್ಯ ಸಮ್ಮೇಳನ
o ದಾಸ ಸಾಹಿತ್ಯ ಸಮ್ಮೇಳನ
o ಜಾನಪದ ಸಾಹಿತ್ಯ ಸಮ್ಮೇಳನ
o ತತ್ವಪದ ಸಾಹಿತ್ಯ ಸಮ್ಮೇಳನ
o ಸಂಗೀತ ಸಮ್ಮೇಳನ
* ಸಂಗೀತ ಕ್ಷೇತ್ರ ಅತ್ಯಂತ ಮಹತ್ವದ ಕ್ಷೇತ್ರ. ಎಲ್ಲ ಕಲಾವಿದರಿಗೆ ಅವಕಾಶ ಕೊಡುವುದು. ಇದರ ಬಗ್ಗೆ ವಿದ್ವಾಂಸರಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು.
* ಅನುದಾನ ಕ್ರೋಢೀಕರಿಸಿ ಅಪ್ರಕಟಿತ ಇಲ್ಲವೇ ಔಟ್‌ ಆಫ್‌ ಪ್ರಿಂಟ್‌ ಆಗಿರುವ ಅತ್ಯುತ್ತಮ ಗ್ರಂಥಗಳ ಪ್ರಕಟಣೆಗೆ ಪ್ರಯತ್ನಿಸಲಾಗುವುದು.
*  ಒಂದೇ ಬೆರಳಿನಿಂದ ಒಂದು ಗುಂಡಿಯನ್ನು ಒತ್ತುವುದರ ಮೂಲಕ ಇಡೀ ವಿಶ್ವವನ್ನು ಕ್ಷಣ ಮಾತ್ರದಲ್ಲಿ ತಲುಪುವ ಶಕ್ತಿ ಅಂತರ್ಜಾಲ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಇದೆ. ಅಂತರ್ಜಾಲ ಮತ್ತು ಮಾಹಿತಿ ತಂತ್ರಜ್ಞಾನ ಆಧುನಿಕ ಯುಗದ ಆವಶ್ಯಕ ಮಾಧ್ಯಮ.
* ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ತಿನ “ಸ್ವತಂತ್ರ ಅಂತರ್ಜಾಲ ಜಾಲತಾಣ” ವನ್ನು ನಿರ್ಮಿಸಿ ಅದರ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ಇಡೀ ವಿಶ್ವಕ್ಕೆ ತಲುಪಿಸುವ ವ್ಯವಸ್ಥೆ ಮಾಡುವ ಸಂಕಲ್ಪ.

ವಿಜಯಕುಮಾರ ಕಮ್ಮಾರ
“ಮಲ್ಲಮ್ಮ ನಿಲಯ”
ಸವದತ್ತಿ ರಸ್ತೆ, ಮರೇವಾಡ ಕ್ರಾಸ್‌,
ಧಾರವಾಡ – 581 201
ಮೋಬೈಲ್‌ ಸಂಖ್ಯೆ: 9741 357 132 / 9741 889 684.
ಈ-ಮೇಲ್‌ ವಿಳಾಸ: vijikammar@gmail.com

Don`t copy text!