ಶ್ರೀಮತಿ ಸರೋಜಾ ಶ್ರೀಕಾಂತ ಅಮತಿ ಮುಂಬೈ ಅವರಿಗೆ ಗುರುಕುಲ ಕಲಾ ಕೌಸ್ತುಭ ಪ್ರಶಸ್ತಿ ಪ್ರಧಾನ

ಶ್ರೀಮತಿ ಸರೋಜಾ ಶ್ರೀಕಾಂತ ಅಮತಿ ಮುಂಬೈ ಅವರಿಗೆ ಗುರುಕುಲ ಕಲಾ ಕೌಸ್ತುಭ ಪ್ರಶಸ್ತಿ ಪ್ರಧಾನ

e-ಸುದ್ದಿ, ತುಮಕೂರು

ಗುರುಕುಲ ಕಲಾ ಪ್ರತಿಷ್ಠಾನ ತುಮಕುರು ಅವರು ಕೊಡ‌ಮಾಡುವ ಗುರುಕುಲ ಕಲಾ ಕೌಸ್ತುಭ ಪ್ರಶಸ್ತಿಗೆ e-ಸುದ್ದಿ ತಂಡದ ಬರಹಗಾರ್ತಿ ಮುಂಬೈನ ಶ್ರೀಮತಿ ಸರೋಜಾ ಅಮತಿ ಅವರಿಗೆ ಲಭಿಸಿದೆ.
ಇತ್ತೀಚಿಗೆ ತುಮಕೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ
ಶ್ರೀ ಟಿ.ಎಸ್.ನಾಗಾಭರಣ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು,ನಿರ್ದೇಶಕರು ಹಾಗೂ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಕರ್ನಾಟಕ ಸರ್ಕಾರ ಇವರು ಗುರುಕುಲ ಕಲಾ ಕೌಸ್ತುಭ ಪ್ರಶಸ್ತಿ ಪ್ರಧಾನ ಮಾಡಿದರು.

ಗುರುಕುಲ ಕಲಾ ಪ್ರತಿಷ್ಠಾನ (ರಿ) ತುಮಕೂರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಹುಲಿಯೂರು ದುರ್ಗ ಲಕ್ಷ್ಮೀನಾರಾಯಣ ಸರ್ ಮತ್ತು ಕಾರ್ಯದರ್ಶಿ ಶ್ರೀಯುತ ಡಾ.ಶಿವರಾಜ್ ಗೌಡ ಸರ್ ಮತ್ತು ಬಳಗದ ಸರ್ವ ಪದಾಧಿಕಾರಿಗಳು ಭಾಗವಹಿಸಿದ್ದರು.

ಗುರುಕುಲವೆಂಬ ಕನ್ನಡದ ಜಾತ್ರೆಯ ಸರ್ವಾಧ್ಯಕ್ಷರಾದ ವಿದ್ಯಾವಾಚಸ್ಪತಿ ಶ್ರೀಯುತ ಕವಿತಾ ಕೃಷ್ಣ ಗುರುಗಳ ಪ್ರತಿ ನುಡಿಗಳು,ಅವರ ಭಾಷಾ ವೈಖರಿ ಮಂತ್ರ ಮುಗ್ಧಗೊಳಿಸಿದವು. ಶ್ರೀಯುತ ಲಕ್ಷ್ಮೀನಾರಾಯಣ ಸರ್ ಮತ್ತು ಶ್ರೀಯುತ ಡಾ. ಶಿವರಾಜ್ ಗೌಡ ಸರ್ ಅವರ ದಕ್ಷ ಕಾರ್ಯಕ್ಷಮತೆಯಲ್ಲಿ ಅತ್ಯಂತ ಯಶಶ್ವಿಯಾಗಿ ಬಹಳ ಅದ್ಧೂರಿಯಾಗಿ ಗುರುಕುಲ ಕಲಾ ಪ್ರತಿಷ್ಠಾನದ ಪ್ರಥಮ ಸಾಹಿತ್ಯ ಸಮ್ಮೇಳನ ಜರುಗಿತು.
ಶ್ರೀ ಸಿದ್ಧಗಂಗಾ ಮಠದ ಪುಣ್ಯ ಕ್ಷೇತ್ರದಲ್ಲಿ ಕನ್ನಡದ ಜಾತ್ರೆ ಸರಾಗವಾಗಿ,ಬಹಳ ಸರಳ ಮತ್ತು ಸುಂದರವಾಗಿ ನಡೆಯಿತು.ಇಂತ ಅದ್ಭುತ ಕಾರ್ಯಕ್ರಮಕ್ಕೆ ಕರೆಯಿತ್ತು,ಗುರುಕುಲ ಕಲಾ ಕೌಸ್ತುಭ ಪ್ರಶಸ್ತಿ ನೀಡಿ ಸನ್ಮಾನಿಸಿದ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದರು.

Don`t copy text!