ಕನ್ನಡ ಸಾಹಿತ್ಯ ಪರಿಷತ್ತು – ಧಾರವಾಡ ಜಿಲ್ಲಾ ಘಟಕ
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ – 2021
ಚುನಾವಣೆ ದಿನಾಂಕ: 21.11.2021
ಸಮಯ: ಬೆಳಿಗ್ಗೆ ೮ ರಿಂದ ಸಾಯಂಕಾಲ 4 ರ ವರೆಗೆ
ಸನ್ಮಾನ್ಯ ಸಾಹಿತ್ಯ ಪ್ರಿಯರೇ,
ನಾನು ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾ ಅಧ್ಯಕ್ಷ ಸ್ಥಾನದ ಸೇವಾ ಆಕಾಂಕ್ಷಿ
ವಿಜಯಕುಮಾರ ಈಶ್ವರ ಕಮ್ಮಾರ ಬಿ. ಈ (ಮೆಕ್ಯಾನಿಕಲ್ ಇಂಜನೀಯರಿಂಗ್)
ಅಂತರಾಷ್ಟ್ರೀಯ “ಬಸವ ತತ್ವ” ಪ್ರಚಾರಕರು ಮತ್ತು ಸಾಹಿತಿಗಳು
ತಮ್ಮ ಅಮೂಲ್ಯವಾದ ಮತವನ್ನು ನೀಡಿ ಕನ್ನಡಾಂಬೆಯ ಸೇವೆಗೆ ಅವಕಾಶ ಮಾಡಿಕೊಡಬೇಕಾಗಿ ವಿನಂತಿಸುತ್ತೇನೆ.
ಕಿರು ಪರಿಚಯ:
ಹೆಸರು : ವಿಜಯಕುಮಾರ ಈಶ್ವರ ಕಮ್ಮಾರ
ತಂದೆ : ಲಿಂ. ಶ್ರೀ ಈಶ್ವರ ಕಮ್ಮಾರ.
ಖ್ಯಾತ ಮಕ್ಕಳ ಸಾಹಿತಿಗಳು.
ನಿರ್ದೇಶಕರು (ನಿ), ಪ್ರಸಾರಾಂಗ,
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ತಾಯಿ : ಶ್ರೀಮತಿ ಮಲ್ಲಮ್ಮ ಈಶ್ವರ ಕಮ್ಮಾರ
ಖ್ಯಾತ ಜನಪದ ಕಲಾವಿದರು.
ಆಕಾಶವಾಣಿಯ ಶ್ರೇಣೀಕೃತ ಜಾನಪದ ಕಲಾವಿದರು.
ವಿದ್ಯಾಭ್ಯಾಸ : ಬಿ. ಈ (ಮೆಕ್ಯಾನಿಕಲ್ ಇಂಜನೀಯರಿಂಗ್)
ಅಗಸ್ಟ್-1988
ಕೆ. ಎಲ್. ಈ ಇಂಜನೀಯರಿಂಗ್ ಕಾಲೇಜು, ಬೆಳಗಾವಿ,
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ವೃತ್ತಿ : ಗ್ಲೋಬಲ್ ಮಾರ್ಕೆಟಿಂಗ್ ಡೈರೆಕ್ಟರ್-ಮ್ಯಾಕ್ ಇಂಟರನ್ಯಾಶನಲ್
ಕಾರ್ಪೋರೇಶನ್, ಹೊಸೂರು.
ಮಾರ್ಕೇಟಿಂಗ್ ಹೆಡ್ – ಅಕ್ಯುಟೆಕ್ ಎಂಟರಪ್ರೈಜಿಸ್, ಬೆಂಗಳೂರು.
ಡಿ. ಜಿ. ಎಮ್ – ಸೈಡರ್ ಫೋರ್ಜ್ ಲಿಮಿಟೆಡ್, ಮೈಸೂರು.
ಪ್ರವೃತ್ತಿ:
ಪ್ರತೀ ವರ್ಷ ಸುಮಾರು ಅಕ್ಟೋಬರ್, ನವೆಂಬರ್, ಡಿಸೆಂಬರ್‌ಗಳಲ್ಲಿ, ಗ್ರಾಮೀಣ ಪರಿಸರದಲ್ಲಿ ಪ್ರಾಚೀನ ಭಾರತದ ತಂತ್ರಜ್ಞಾನ, ಜಾನಪದ ಸಂಸ್ಕೃತಿ ಮತ್ತು ಜನಜೀವನದ ಬಗ್ಗೆ ಅಭ್ಯಾಸ ಮಾಡುವದಕ್ಕೋಸ್ಕರ ಭಾರತದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದೆವು. ಭಾರತದಲ್ಲಿ ಒಟ್ಟು 6 ಲಕ್ಷ 83 ಸಾವಿರ ಹಳ್ಳಿಗಳಿವೆ. ಅದರಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಹಳ್ಳಿಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ವಿವರಗಳನ್ನು ಅಭ್ಯಾಸ ಮಾಡಿದ್ದೇವೆ. ಸರಿ ಸುಮಾರು 25 ವರ್ಷ ಪ್ರವಾಸ ಮಾಡಿದ್ದೇವೆ. ಗ್ರಾಮೀಣ ಪರಿಸರದಲ್ಲಿ ಕಂಡುಬಂದ ಅಗಾಧ ತತಂತ್ರಜ್ಞಾನ, ಜಾನಪದ ಸಂಸ್ಕೃತಿ, ಆರ್ಥಿಕ ಮಾದರಿಗಳು ಅತ್ಯಂತ ಶ್ರೇಷ್ಠ ಮಟ್ಟದ ವಿಷಯ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದವು. ಪ್ರಪಂಚದಲ್ಲಿಯೇ ಪ್ರಪ್ರಥಮವಾಗಿ ಸ್ಟೀಲನ್ನು ತಯಾರಿಸಿದ್ದು ಮಧ್ಯಪ್ರದೇಶದ ಅಗರಿಯಾ ಎನ್ನುವ ಕಮ್ಮಾರರು. ಮ್ಯಾಗ್ನೇಶಿಯಮ್ ತಯಾರಿಸುವ ತಂತ್ರಜ್ಞಾನವನ್ನು ವಿಕಾಸ ಮಾಡಿದವರು ಕೂಡ ಇದೇ ಸಮುದಾಯದ ಪೂರ್ವಜರು. ಆದರೆ ಇದನ್ನು ಜಗತ್ತಿಗೆ ತಿಳಿಸುವಲ್ಲಿ ನಾವು ಎಡವಿದ್ದೇವೆ.
ಭಾರತದ ಪರಂಪರೆಯಲ್ಲಿ ಗ್ರಾಮೀಣ ಪರಿಸರದ ಜಾನಪದ ಸಂಸ್ಕೃತಿ ಅನುಪಮ, ಅಲೌಕಿಕ, ಅತ್ಯುನ್ನತ ಪರಂಪರೆ ಮತ್ತು ಮಹೋನ್ನತವಾದದ್ದು. ಇವುಗಳಲ್ಲಿ
ಕರ್ನಾಟಕದ ದೊಡ್ಡಾಟ, ಸಣ್ಣಾಟ, ರಂಗಭೂಮಿ, ಶ್ರೀಕೃಷ್ಣ ಪಾರಿಜಾತ, ಸೋಬಾನೆ ಪದಗಳು, ಯಕ್ಷಗಾನ.
ಆಂಧ್ರಪ್ರದೇಶದಲ್ಲಿ ಕರ್ನಾಟಕೀ ಸಂಗೀತ ಮತ್ತು ಭರತ ನಾಟ್ಯಗಳು.
ಬಿಹಾರದ ಮೈಥಿಲಿ ಸಂಗೀತ ಮತ್ತು ಸಾಹಿತ್ಯ, ವಾಸ್ತುಶಿಲ್ಪಕಲೆ.
ಗೋವಾದ ಪಾಶ್ಯಾತ್ ಸಂಗೀತ ಮತ್ತು ನೃತ್ಯಗಳು.
ಮಧ್ಯಪ್ರದೇಶದ ಪಾಂಡವಾಣಿ.
ಮಹಾರಾಷ್ಟ್ರದ ಲಾವಣಿ.
ಪಂಜಾಬಿನ ಭಾಂಗ್ರಾ ನೃತ್ಯ.
ಆಸ್ಸಾಮ್ ರಾಜ್ಯದ ಆದಿವಾಸಿಗಳ ಬಿಹು ನೃತ್ಯ, ಬುಗುರುಂಬಾ (ಬೋಡೋ) ನೃತ್ಯ, ದಿಯೋರಾಣಿ (ಸರ್ಪನೃತ್ಯ).
ಮಣಿಪುರದ ಕುಕಿ ಚೆನ್ ಮಿಝೊ ಎನ್ನುವ ಸಂಕ್ರಾಂತಿ ಹಬ್ಬ.
ನಾಗಾಲ್ಯಾಂಡಿನ ಕ್ಷತ್ರೀಯ ಪರಂಪರೆಯ ಯುದ್ಧ ನೃತ್ಯಗಳು.
ಗುಜರಾತಿನ ಗರ್ಭಾ ನೃತ್ಯ
ತಮಿಳುನಾಡಿನ ಕರ್ನಾಟಕಿ ಸಂಗೀತ ಮತ್ತು ಭರತನಾಟ್ಯ.
ಕೇರಳದ ಕಥಕ್ಕಳಿ, ಮೋಹಿನಿಯಾಟ್ಟಮ್.
ಓಡಿಸಾದ ಕರಮಾ, ದಲಖಾಯ್ ಮತ್ತು ಕಥಕ್ ನೃತ್ಯಗಳು ಸುಪ್ರಸಿದ್ಧ.
ಸಂಭಾಲಪುರದ ಕರಮಾ ಮತ್ತು ದಲಖಾಯ್ಗಳು ಬಹುಸುಂದರವೂ ಪ್ರಸಿದ್ಧವೂ ಆಗಿವೆ.
ರಾಜಸ್ಥಾನದ ಘೂಮರ್ ಮತ್ತು ಭಾವೈ ನೃತ್ಯ ಶ್ಯಲಿಗಳು ಅದ್ಭುತ.
ಉತ್ತರ ಪ್ರದೇಶದ ಕಜರಿ ಹಾಡುಗಳು.
ಪಶ್ಚಿಮ ಬಂಗಾಳದ ಕಥಕ್ ಸಮ್ಮೋಹನ ನೃತ್ಯ ಪ್ರಾಕಾರ ಅದ್ಭುತ.
ಇಂಥ ಅದ್ಭುತ ಜಾನಪದ ಪರಂಪರೆಯನ್ನು ಕಣ್ಣಾರೆ ಕಂಡು ದಾಖಲಿಸುವ ಅವಕಾಶ ನಮಗೆ ಸಿಕ್ಕಿದ್ದು ಕೂಡಲಸಂಗಮನ ಪ್ರಸಾದ ಮತ್ತು ಬಸವಣ್ಣನವರ ಆಶೀರ್ವಾದ. ಇದು ಭಾರತದ ಪರಂಪರೆ, ಸಂಸ್ಕೃತಿ, ಪ್ರಾಚೀನ ತಂತ್ರಜ್ಞಾನದ ಅತ್ಯಂತ ಕಿರು ಪರಿಚಯ.
ನನ್ನ ಹೃದಯಕ್ಕೆ ಹತ್ತಿರವಾದಂಥ ಮತ್ತು ನಾನು ಅತ್ಯಂತ ಇಷ್ಟಪಡುವ ಸಾಹಿತ್ಯ ಅಂದರೆ ವಚನ ಸಾಹಿತ್ಯ. ಬಸವಾದಿ ಶರಣರ ಸಾಹಿತ್ಯವನ್ನು ಪ್ರಪಂಚದಾದ್ಯಂತ ಪ್ರಸಾರ ಮಾಡುವ ನಿಟ್ಟಿನಲ್ಲಿ ಸುಮಾರು 20 ವರ್ಷ ವಿವಿಧ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸುಮಾರು 89 ಉಪನ್ಯಾಸಗಳನ್ನು ಕೈಗೊಂಡಿದ್ದೇನೆ. ಇದಕ್ಕೆ ಗದಗ ತೋಂಟದಾರ್ಯ ಶ್ರೀ ಮಠದ ಲಿಂಗೈಕ್ಯ ಶ್ರೀ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಮತ್ತು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ ಆಶೀರ್ವಾದಗಳು ಮತ್ತು ಅನುಗ್ರಹ ಎರಡೂ ಇದ್ದವು. ಈ ಉಪನ್ಯಾಸಗಳಲ್ಲಿ ಪ್ರಮುಖ ವಿಷಯ ಆಧುನಿಕತೆಯಲ್ಲಿ ವಚನಗಳು ಹೇಗೆ ಇಂದಿಗೂ ಪ್ರಸ್ತುತ ಎನ್ನುವುದು.
ಅವುಗಳಲ್ಲಿ ಕೆಲವು ಉಪನ್ಯಾಸಗಳನ್ನು ಉಲ್ಲೇಖ ಮಾಡುತ್ತೇನೆ.
Micro-Socio-Economic Revolution in 12th Century.
Magnitude of Agriculture Economics in Vachanas.
BASAVANNA: The Management Guru.
BASAVANNA: The World Leader.
Graphic Poetry in Vachanas.
Magna Carta.
Culture in Economics: The Way of Basavanna.
ಶರಣ ಸಾಹಿತ್ಯದಲ್ಲಿ ಮಾಂಸಾಹಾರ: ಒಂದು ಅಧ್ಯಯನ ಮತ್ತು ವಿಶ್ಲೇಷಣೆ.
ಬಸವ ಯುಗದ ಶರಣರ ಪರಿಚಯ ಮಾಲಿಕೆ.
ನವೋದಯ ಯುಗದ ಸಾಹಿತಿಗಳು ಕಂಡ ವಚನ ಸಾಹಿತ್ಯ.
ವಚನ ಸಾಹಿತ್ಯದಲ್ಲಿ ಕೃಷಿ ಮತ್ತು ಸಂಸ್ಕೃತಿ.
ಶೂನ್ಯ ಸಂಪಾದನೆಯಲ್ಲಿ ಮುಕ್ತಾಯಕ್ಕನ ಸಂಪಾದನೆಗಳು.
ಶೂನ್ಯ ಸಂಪಾದನೆಯಲ್ಲಿ ಅಕ್ಕಮಹಾದೇವಿಯವರ ಸಾಂಗತ್ಯ.
ಬಸವ ತತ್ವ ಸಾಗಿ ಬಂದ ದಾರಿ.
“ಶರಣರು ಕಂಡ ಬಸವಣ್ಣ” ಮಾಲಿಕೆಗಳು.
“ಬಸವಾದಿ ಶರಣರ ದೃಷ್ಟಿಯಲ್ಲಿ ಅಷ್ಟಾವರಣಗಳು” ಲೇಖನ ಮಾಲಿಕೆಗಳು.
“ಬಸವಾದಿ ಶರಣರ ದೃಷ್ಟಿಯಲ್ಲಿ ಪಂಚಾಚಾರಗಳು” ಲೇಖನ ಮಾಲಿಕೆಗಳು.
Forging, Casting & CNC Machining Presentations.
Understanding the factors influencing fuel price rise.
ದೇಶ-ವಿದೇಶಗಳಲ್ಲಿ ಉಪನ್ಯಾಸಗಳ ಮೂಲಕ ಸಾಹಿತ್ಯ ಮತ್ತು ವಚನ ಸಾಹಿತ್ಯ ಸೇವೆ
Lectures on “Micro-Socio-Economic Revolution” in Vachana Literure at various countries.
Understanding “Modern Management Science” through Vachana Literature.
ನಾಗರೀಕ ಸೇವಾ ಪರೀಕ್ಷೆ (IAS / IPS) ತರಬೇತುದಾರರು.
ದೂರದರ್ಶನ ವಾಹಿನಿಗಳಲ್ಲಿ ಉಪನ್ಯಾಸ ಮಾಲಿಕೆಗಳು.
ಪತ್ರಿಕೆಗಳಲ್ಲಿ ಅಂಕಣಕಾರರು.
“Tradition & Culture in Economics” Comparative Study of Medieval & Modern Literature.
Lecture on “Marketing & Business Management” in 89 Universities in India and Abroad.
Technical Lectures on “Forging & Casting” in Engineering Colleges in India and Abroad.
ವಿಜಯಕುಮಾರ ಕಮ್ಮಾರ
“ಮಲ್ಲಮ್ಮ ನಿಲಯ”
ಸವದತ್ತಿ ರಸ್ತೆ, ಮರೇವಾಡ ಕ್ರಾಸ್,
ಧಾರವಾಡ – 581 201
ಮೋಬೈಲ್ ಸಂಖ್ಯೆ: 9741 357 132 / 9741 889 684.
ಈ-ಮೇಲ್ ವಿಳಾಸ: vijikammar@gmail.com