ಮನಸ್ಸು—ಮಲ್ಲಿಗೆ
ಮೊಗ್ಗು ಮಲ್ಲಿಗೆ ಅರಳಲು ಬೇಡ
ದುಂಬಿಯ ತುಳಿತಕ್ಕೊಳಗಾದ ಬೇಡ
ಎದೆಯ ರಕ್ತ ಹೀರುವುದು ಬೇಡ
ಚಿವುಟುವ ಕೈಗೆ ಬಲಿಯಾಗಬೇಡ
ಹೆಂಗೆಳೆಯರ ಮುಡಿಯಲಿ ಮಡಿಬೇಡ
ದೇವರ ಪಾದದಲಿ ಮರಣಿಸಬೇಡ
ಭ್ರಷ್ಟರ ಕೊರಳಿಗೆ ಹಾರವಾಗ ಬೇಡ
ಬಲಿಕೊಡುವ ಪ್ರಾಣಿಗೆ ನೀ ಹೂವಾಗಬೇಡ
ಅರಳಿದರೂ ಸುವಾಸನೆ ಬೀರದಿರು
ಮೂಸಿಸಿ ಎಸೆಯುವ ಕಸವಾಗದಿರು
ಅತ್ಯಾಚಾರಿಗಳ ತುಳಿತಕೆ ಒಳಗಾಗದಿರು
ಸಿಕ್ಕ ಸಿಕ್ಕವರಿಗೆ ಮಾರಾಟವಾಗದಿರು
ಹೆಣದ ಶೃಂಗಾರಕೆ ನಿನ್ನ ಬಳಿಕೆ ಬೇಕು
ಮಠಾಧೀಶರ ಪಾದ ಪೂಜೆಗೆ ಬೇಕು
ಯಾರಿಗಾಗಿ ನಂಬಿ ನಿನ್ನ ಈ ಬದುಕು
ನಂಬಿ ನಂಬಿ ನೀ ಸತ್ತಿದ್ದು ಇನ್ನು ಸಾಕುು
–ಆರ್.ಆರ್.ಪಟ್ಟಣ
ಮುಳಗುಂದ.