ಕನ್ನಡ ನುಡಿ ಚೆಂದ

ಕನ್ನಡ ನುಡಿ ಚೆಂದ
ಕರ್ನಾಟಕ ಇನ್ನೂ ಚೆಂದ
ಕನ್ನಡಿಗರು ಮತ್ತೂ ಚೆಂದ
ಜೈ ಕರ್ನಾಟಕ

ದಾಸ ಸಾಹಿತ್ಯ ಅಂದ
ಶರಣರ ವಚನಗಳು ಚೆಂದ
ರಗಳೆಗಳು ಅದಿನ್ನೂ ಅಂದ
ಜೈ ಭುವನೇಶ್ವರಿ

ಸಹ್ಯಾದ್ರಿ ಪರ್ವತ ಶ್ರೇಣಿ
ಭೀಮೇಯ ತೀರದ ಖನಿಜ
ಕಾವೇರಿ ನದಿ ತಿರುವು
ಜೈ ಕರ್ನಾಟಕ

ಮುತ್ತಿನ ಅಕ್ಷರಗಳಮಾಲೆ
ನೋಡಲು ತುಂಬಾ ಚೆನ್ನಾಗಿದೆ
ಕರಳು ಬಳ್ಳಿಯ ಭಾಷೆ
ಜೈ ಕರ್ನಾಟಕ

ಪ್ರಣವ್ ಮಳಗಿ

Don`t copy text!