ಶ್ರೀದೇವಿ ಪುರಾಣ ಮಹಾ ಮಂಗಲ

ಮಸ್ಕಿ : ತಾಲೂಕಿನ ಬಳಗಾನೂರು ಪಟ್ಟಣದ ಮ್ಯಾಗಳಪ್ಯಾಟಿ ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹಾನವಮಿ ಆಚರಣೆ ಹಾಗೂ ಶ್ರೀದೇವಿ ಪುರಾಣ ಪ್ರವಚನ ಮಹಾ ಮಂಗಲ ಕಾರ್ಯಕ್ರಮ ಭಾನುವಾರ ವೈಭವದಿಂದ ಜರುಗಿತು.
ಬೆಳಿಗ್ಗೆ ಸುಮಂಗಲೆಯರು ಬನ್ನಿಮಹಾಂಕಾಳಿಗೆ ಪೂಜೆ ಸಲ್ಲಿ ವ್ರತ ಆಚರಿಸಿದರು. ಶ್ರೀ ಚೌಡೇಶ್ವರಿಗೆ ವಿಶೇಷ ಪೂಜೆಯೊಂದಿಗೆ ಪುಷ್ಪಾಧಿಗಳಿಂದ ವಿಶೆಷ ಅಂಲಕಾರ ಮಾಡಲಾಗಿತ್ತು. ಸುಮಂಲೆಯರಿಂದ ಕುಂಕುಮಾರ್ಚನೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಶ್ರೀದೇವಿ ಪುರಾಣವನ್ನು ಪಲ್ಲಕ್ಕಿಯ ಉತ್ಸವದಲ್ಲಿಟ್ಟು ಶ್ರೀದೇವಿ ಭಾವಚಿತ್ರ ಮೆರವಣಿಗೆ ಜರುಗಿತು.
ಪ್ರವಚನಕಾರರಾದ ಶಿವಶಂಕರ ಕÀರಡಕಲ್ ಮತ್ತು ಪಪಂ ಸದಸ್ಯ ಮಂಜುನಾಥ, ಅರ್ಚಕ ರಾಜಣ್ಣ, ಮುಖಂಡರಾದ ಮಲ್ಲಯ್ಯ ಕರಡಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಯ ಮಾಜಿ ಅಧ್ಯಕ್ಷ ಬಸವರಾಜ, ದೇವಾಂಗ ಸಮುದಾಯದ ಮುಖಂಡರು ಇದ್ದರು.


ಮಸ್ಕಿ ಃ ಪಟ್ಟಣದ ಭ್ರಮರಾಂಬ ದೇವಿಗುಡಿಯಲ್ಲಿ ಮತ್ತು ದೇವಾಂಗ ಸಮಾಜದ ಕಲ್ಗುಡಿಯ ಚೌಡೇಶ್ವರಿ ದೇವಾಲಯದಲಲಿ ಭಾನುವಾರ ದೇವಿ ಪುರಾಣವನ್ನು ಸಂಪನ್ನಗೊಳಿಸಲಾಯಿತು. ಕರೊನಾ ಹಿನ್ನಲೆಯಲ್ಲಿ ಈ ಬಾರಿ ದೇವಿ ಪುರಾಣವನ್ನು ಸರಳವಾಗಿ ಆಚರಿಸಿಕೊಂಡು ಬಂದರು.
ಪ್ರಕಾಶ ಧಾರಿವಾಲ, ಸಿದ್ದಲಿಂಗಯ್ಯ ಗಚ್ಚಿನ ಹಿರೇಮಠ, ಮಲ್ಲಪ್ಪ ನಾಯಿಕೊಡೆ, ನಾಗರಾಜ ಸಜ್ಜನ್, ಮಲ್ಲಿಕಾರ್ಜುನ ಕ್ಯಾತ್ನಟ್ಟಿ, ಸಿದ್ದಣ್ಣ ಮುಳ್ಳುರು, ಶಿವಶಂಕ್ರಪ್ಪ ಹಳ್ಳಿ, ಅಮರಪ್ಪ ಕೊಪ್ಪರದ, ಮಂಜುನಾಥ ಮಾಳ್ಗಿ, ಮಂಜುನಾಥ ಬಿಜ್ಜಳ, ಚಿದಾನಂದ ಹಂಪರಗುಂದಿ ಹಾಗೂ ಇತರರು ಇದ್ದರು.

Don`t copy text!