ಮಂಕನಹಳ್ಳಿ RIDGE_stone ವಿಸ್ಮಯ
ಕುಕ್ಕೆ ಸುಬ್ರಹ್ಮಣ್ಯದಿಂದ ಬಿಸ್ಲೆ ಘಾಟ್ ರಸ್ತೆಯಲ್ಲಿ ಬಂದಾಗ ಕೂಡುರಸ್ತೆ ಎಂಬ ಕೇಂದ್ರ ಸಿಗುತ್ತದೆ.
ಅಲ್ಲಿಂದ ಒಂದು ಕಡೆ ಹೋದರೆ ಹಾಸನ ತಲುಪಬಹುದು, ಮತ್ತೊಂದು ಕಡೆ ಹೋದರೆ ಮಡಿಕೇರಿ ತಲುಪಬಹುದು, ಮತ್ತೊಂದು ರಸ್ತೆ ಹಿಡಿದರೆ ಅರಕಲಗೂಡು – ಹೊಳೆನರಸೀಪುರ ಮೂಲಕ ಬೆಂಗಳೂರಿಗೆ ಬರಬಹುದು.
ಕೂಡು ರಸ್ತೆಗೆ 8 ಕಿಲೋಮೀಟರು ಮುನ್ನ ಮಂಕನಹಳ್ಳಿ ಎಂಬ ಗ್ರಾಮವಿದೆ.
ಅಲ್ಲಿನ ಈ ಕಲ್ಲಿನ ಬಗ್ಗೆ ನಾನು ಬಹಳ ಕೇಳಿದ್ದೆ. ಇದನ್ನು RIDGE_stone ಎಂದು ಕರೆಯುತ್ತಾರೆ. ಇದು ಅತ್ಯಂತ ಎತ್ತರ ಪ್ರದೇಶದಲ್ಲಿ ನೆಡಲ್ಪಟ್ಟಿರುವ ಕಲ್ಲು.
ಈ ಕಲ್ಲು ಕಂಬದ ಬಳಿ ಬೀಳುವ ಮಳೆ ನೀರು ಎರಡು ಭಾಗವಾಗಿ ಪೂರ್ವ ಭಾಗಕ್ಕೆ ಮತ್ತು ಪಶ್ಚಿಮ ಭಾಗಕ್ಕೆ ಹರಿಯುತ್ತದೆ.
ಪೂರ್ವ ಭಾಗಕ್ಕೆ ಹರಿದು ಹೋಗುವ ನೀರು ಬಂಗಾಳಕೊಲ್ಲಿ ( Bay of Bengal) ಸೇರುತ್ತದೆ. ಹಾಗೆ ಪಶ್ಚಿಮ ಭಾಗಕ್ಕೆ ಹರಿದು ಹೋಗುವ ಮಳೆ ನೀರು ಅರಬ್ಬಿ ಸಮುದ್ರಕ್ಕೆ ( Arabian Sea) ಗೆ ಸೇರುತ್ತದೆ.
ಬ್ರಿಟಿಷರ ಕಾಲದಲ್ಲಿ ನೆಟ್ಟಿರುವ ಈ ಕಲ್ಲು , “RIDGE” ಒಂದು ಅದ್ಭುತ ಸ್ಥಳವೇ ಸರಿ.
ಅಲ್ಲೇ ಇದ್ದ ಒಂದು ಅಂಗಡಿ ಹತ್ತಿರ ಕುಳಿತಿದ್ದ ಸ್ಥಳೀಯ ಗ್ರಾಮಸ್ಥರಾದ ವಿಶ್ವನಾಥ್ ಬಳಿ ಈ ಸಂಗತಿಯ ಬಗ್ಗೆ ಕೇಳಿದಾಗ ಅವರು ಬೇರೆ ಬೇರೆ ದಿಕ್ಕುಗಳಲ್ಲಿ ಹರಿದು ಹೋಗುವ ನೀರಿನ ಕುರಿತು ತಮ್ಮ ಅನುಭವದ ಮಾತು ಹೇಳಿದರು.
ಆದರೆ ಈ ಸ್ಥಳದ ಮಹತ್ವ ಗೊತ್ತಿಲ್ಲದ ನಮ್ಮ ಜನ ಆ ನಡುಗಂಬದ ಸುತ್ತಲೂ ಹಾಕಿರುವ ಸರಪಳಿಯನ್ನು ಜೋಕಾಲಿಯಂತೆ ಉಪಯೋಗಿಸುತ್ತಾರೆ ಎಂದು ಖೇದದಿಂದ ಹೇಳಿದರು.
ಅಲ್ಲೇ ಇದ್ದ ಮಾಹಿತಿಯ ಫಲಕವನ್ನೂ ಸಹ ಕಿತ್ತು ಹಾಕಲಾಗಿದೆ.
–ಸುರೇಶ ಕುಮಾರ ಮಾಜಿ ಸಚಿವರು ಬೆಂಗಳೂರು
(ಸುರೇಶಕುಮಾರ ಅವರ ವಾಲ್ ನಿಂದ ಪಡೆದದ್ದು-ಸಂಪಾದಕ)