ಒನಕೆ ಓಬವ್ವರ ಜಯಂತಿ, ಸರ್ಕಾರ ನಿರ್ಧಾರ ಸ್ವಾಗತಾರ್ಹ –ಪ್ರತಾಪಗೌಡ

ಒನಕೆ ಓಬವ್ವರ ಜಯಂತಿ, ಸರ್ಕಾರ ನಿರ್ಧಾರ ಸ್ವಾಗತಾರ್ಹ –ಪ್ರತಾಪಗೌಡ

e-ಸುದ್ದಿ ಮಸ್ಕಿ

ಮಸ್ಕಿ: ಚಿತ್ರದುರ್ಗದ ಕೋಟೆ ಮೇಲೆ ಹೈದರಾಲಿ ಸೈನ್ಯ ದಾಳಿ ಮಾಡಿದಾಗ ತನ್ನ ಒನಕೆಯಿಂದ ನೂರಾರು ಶತೃ ಸೈನಿಕರನ್ನು ಸದೆಬಡೆದ ಒನಕೆ ಓಬವ್ವರ ಜಯಂತಿಯನ್ನು ಸರ್ಕಾರದಿಂದಲೇ  ಆಚರಿಸಲು ಕೈಗೊಂಡ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಒನಕೆ ಓಬವ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ‘ಕನ್ನಡ ನಾಡಿನ ವೀರ ವನಿತೆ ಒನಕೆ ಓಬವ್ವ ತನ್ನ ಪರಕ್ರಮದ ಮೂಲಕ ಶತೃ ಸೈನ್ಯದ ವಿರುದ್ಧ ಹೋರಾಟ ಮಾಡಿದರು ಎಂದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ, ಬಸಪ್ಪ ಬ್ಯಾಳಿ,   ಪಂಪಾಪತಿ  ಹೂವಿನಬಾವಿ, ಸಂಗಮೇಶ ಹತ್ತಿಗುಡ್ಡ,  ಮಸ್ಕಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜ ಯಂಬಲದ, ಮಲ್ಲಯ್ಯ ಅಂಬಾಡಿ , ಮೌನೇಶ ನಾಯಕ,  ಮಂಜುನಾಥ ಉಪ್ಪಾರ,  ಉಸ್ಮಾನ್ ಸಾಬ್,  ಹನುಮನಗೌಡ ಆರ್. ಕೆ ನಾಯಕ,   ಬಾಲಸ್ವಾಮಿ ಜಿನ್ನಾಪುರ,  ಮೌನೇಶ ಬಳಗಾನೂರ, ಮಲ್ಲಪ್ಪ ಗೋನಾಳ,  ಯಮುನಪ್ಪ ಮಸ್ಕಿ,  ಶ್ರೀನಿವಾಸ. ವಿ ಮಸ್ಕಿ  ಬಸವರಾಜಪ್ಪ ಗೌಡನಬಾವಿ, ಅಯ್ಯಪ್ಪ ಗೌಡನಬಾವಿ ಸೇರಿದಂತೆ ಪಕ್ಷದ ವಿವಿಧ ಮೊರ್ಚಗಳ ಪದಾಧಿಕಾರಿಗಳು ಇದ್ದರು.

Don`t copy text!