ಸಾಹಿತ್ಯ ಲೋಕದ ಹೊಸ ಪ್ರತಿಭೆ ಶ್ರೀಹರ್ಷ ಸಾಲಿಮಠ
ಇತ್ತೀಚೆಗೆ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರು ಪ್ರೀತಿಯಿಂದ ಕಳಸಿದ ಒಂದು ಪುಸ್ತಕಗಳ ಪಟ್ಟಿ ಅಂಚೆಗೆ ಬಂದಿತು. ಆ ಪಟ್ಟಿಯಲ್ಲಿ ಎರಡು ಪುಸ್ತಕಗಳು ಇದ್ದವು. ಒಂದು ಶೀಹರ್ಷ ಸಾಲಿಮಠರ ‘ಉದಕ ಉರಿದು’ ಮತ್ತು ಹನುಮಂತ ಹಾಲಿಗೇರಿಯವರ ‘ಆಲೈದೇವ್ರು’ ಮತ್ತು ಮತ್ತಿತರ ನಾಟಕಗಳು. ಆ ಪೈಕಿ ಈಗ ನಾನು ಮೊದಲು ಶ್ರೀಹರ್ಷ ಸಾಲಿಮಠರ ಪುಸ್ತಕ ‘ಉದಕ ಉರಿದು’ ಎಂಬುದರ ಬಗೆಗೆ ಬರೆಯಬೇಕಾಗಿತ್ತು. ಆದರೆ ಮೊದಲು ಈ ನಮ್ಮ ಶ್ರೀಹರ್ಷ ಸಾಲಿಮಠರು ಅವರನ್ನು ಪರಿಚಯಿಸುವ ಲೇಖನ ಮಾಡುತ್ತೇನೆ. ಆನಂತರ ಈ ಹರ್ಷ ಸಾಲಿಮಠರ ಈ ‘ಉದಕ ಉರಿದು’ ಪುಸ್ತಕದ ಕುರಿತು ಒಂದು ಪರಿಚಯಾತ್ಮಕ ಲೇಖನ ಮಾಡುತ್ತೇನೆ.
# ಯ್ಯಾರೀ ಶ್ರೀಹರ್ಷ ಸಾಲಿಮಠರು.?!
ಈ ಶ್ರೀಹರ್ಷ ಸಾಲಿಮಠರು ಎಂಬ ಅನಿವಾಸಿ ಭಾರತೀಯ ಲೇಖಕರು. ಮೂಲತಃ ಕಥೆಗಾರರು. ಕನ್ನಡದ ಜನಪ್ರಿಯ ಕಥೆಗಾರರಲೊಬ್ಬರು. ಏಕೆಂದರೆ ಈ ಲೇಖಕ ಶ್ರೀಹರ್ಷ ಸಾಲಿಮಠರು, ತಾವೊಬ್ಬ ಲೇಖಕರು ಎಂಬ ಗುರುತರವಾದ ಜವಾಬ್ದಾರಿಯನ್ನು ಹೊರಲು ಬಹು ಸಂಕೋಚ ಪಟ್ಟವರು. ಇಂತಹ ಲೇಖಕ ಶ್ರೀಹರ್ಷ ಸಾಲಿಮಠರನ್ನು ಹುರುದುಮ್ಮಿಸಿ, ನೀವೊಬ್ಬ ಲೇಖಕರು ಅಲ್ಲದೇ ಕಥೆಗಾರರು ಎಂಬುದನ್ನು ಗುರುತಿಸಿ ಮತ್ತು ಸಾಹಿತ್ಯ ರಚನೆಗೆ ಹಚ್ವಿದವರು ಮತ್ತು ಒಂದು ಪುಸ್ತಕ ರೂಪದಲ್ಲಿ ಈ ‘ಉದಕ ಉರಿದು’ ಎಂಬ ಕಥೆಗಳ ಸಂಗ್ರಹ ತರಲು ಹಚ್ಚಿದ್ದು ಸಾಹಿತಿ ಹನುಮಂತ ಹಾಲಿಗೇರಿಯವರು.
ಏಕೆಂದರೆ ಅಲ್ಲಿಯ ವರಗೆ ಶ್ರೀಹರ್ಷ ಸಾಲಿಮಠ ಈ ‘ಉದಕ ಉರಿದು’ ಎಂಬ ಪುಸ್ತಕವನ್ನು ಹೊರತಂದಿರಲೇ ಇಲ್ಲ. ತಮ್ಮೊಳಗೆ ಒಬ್ಬ ಸಾಹಿತಿ ಇದ್ದಾನೆ ಎಂದು ಹೇಳಿಕೊಳ್ಳಲೂ ಸಂಕೋಚ ಪಟ್ಟ ಮತ್ತು ಪಡುತ್ತಿದ್ದ ಶ್ರೀಹರ್ಷ ಸಾಲಿಮಠರನ್ನು ಗುರುತಿಸಿ ನೀನೂ ಒಬ್ಬ ಸಾಹಿತಿ ಎನ್ನುಸುವಷ್ಟರ ಮಟ್ಟಿಗೆ ಈ ಶ್ರೀಹರ್ಷ ಸಾಲಿಮಠರನ್ನು ಪುಸಲಾಯಿಸಿ ಇಂತಹದೊಂದು ಅಂದರೆ ‘ಉದಕ ಉರಿದು’ ಎಂಬ ಸಾಹಿತ್ಯ ರಚನೆಗೆ ಆ ಮತ್ತು ಪುಸ್ತಕ ಹೊರಬರಲು ಕಾರಣರಾದವರೊಬ್ಬರಲ್ಲಿ ಸಾಹಿತಿ ಹನುಮಂತ ಹಾಲಿಗೇರಿ ಎಂಬುದಂತು ನಿಜವಾದ ಸತ್ಯ.
ಇಂತಹ ಈ ಶ್ರೀಹರ್ಷ ಸಾಲಿಮಠ ಬಾಲ್ಯ ಕಳೆದದ್ದು ದಾವಣಗೆರೆಯಲ್ಲಿ. ಅಲ್ಲದೇ ಅಲ್ಲಿಯೇ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ದು. ಮೈಸೂರಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದು. ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಮೇಲೆ ಕೆಲಸದ ನಿಮಿತ್ತವಾಗಿ ಎರಡು ವರ್ಷಗಳ ವರೆಗೂ ಚೆನೈನಲ್ಲಿ ಇದ್ದರು ಸಾಹಿತಿ ಶ್ರೀಹರ್ಷ ಸಾಲಿಮಠರು. ಅಲ್ಲಿಂದ ಮುಂದೆ ಟ್ರಿವೆಂಡ್ರಮ್ ನಲ್ಲಿ ಕೆಲಸಕ್ಕೆ ಸೇರಿದರು ಸಾಹಿತಿ ಶ್ರೀಹರ್ಷ ಸಾಲಿಮಠರು. ಅದಕ್ಕೂ ಮೊದಲು ಬೆಂಗಳೂರಿನಲ್ಲಿ ಹತ್ತು ವರ್ಷಗಳ ಕಾಲ ಇದ್ದರು ಮತ್ತು ಅಲ್ಲಿಯೇ ಕೆಲಸವನ್ನೂ ಮಾಡಿದರು. ಈಗ ಸದ್ಯಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವೃತ್ತಿ ಮತ್ತು ಜೀವನ ನಡೆಸುತ್ತಿದ್ದತ್ತಿದ್ದಾರೆ.
ಇಂತಹ ಈ ಶ್ರೀಹರ್ಷ ಸಾಲಿಮಠರು ಕನ್ನಡದ ಅನೇಕಾನೇಕ ತಾಂತ್ರಿಕ ಸಾಧನಗಳಿಗೆ ಕೊಡುಗೆಯನ್ನು ನೀಡಿದ್ದಾರೆ. ಇವರಿಗೆ ಬಾಲ್ಯದಿಂದಲೂ ಓದು ಮತ್ತು ಬರಹದ ಕಡೆಗೆ ಆಸಕ್ತಿ ಇದ್ದದ್ದು ಈ ಶ್ರೀಹರ್ಷ ಸಾಲಿಮಠರನ್ನು ಒಬ್ಬ ಬರಹಗಾರರನ್ನಾಗಿಸಿತು. ಇವರ ವೈಯಕ್ತಿಕ ಲೈಬ್ರರಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಾಕಿದ್ದಾರೆ ಎಂಬುದೇ ಒಂದು ವಿಶೇಷವಾಗಿದೆ. ಇಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದವರು ಇಷ್ಟೊಂದು ಸಾಹಿತ್ಯಕ ಪುಸ ಸಾಕಿರುವುದಿಲ್ಲ. ಆದರೆ ಈ ಶ್ರೀಹರ್ಷ ಸಾಲಿಮಠರಿಗೆ ಮೊದಲಿಂದಲೂ ಸಾಹಿತ್ಯದ ಗೀಳು ಇತ್ತೆಂಬುದಕ್ಕೆ ಇವರ ಸಾಹಿತ್ಯ ಆಚಾರ ವಿಚಾರ ಮತ್ತು ಆ ಸಾಹಿತ್ಯದ ವಿನಿಮಯದ ರೂಢಿ ಇತ್ತೆಂಬುದಕ್ಕೆ ಸಾಕ್ಷಿ ಆಗಿದೆ.
ಮುಖ್ಯವಾಗಿ ಈ ಶ್ರೀಹರ್ಷ ಸಾಲಿಮಠರು ಬರೆದ ಅನೇಕಾನೇಕ ಬರಹಗಳು ನಾಡಿನ ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ‘ಕನ್ನಡ ಪ್ರಭಾ’ದಲ್ಲಿ ಒಂದು ವಿಜ್ಞಾನ ಅಂಕಣವನ್ನು ಬರೆದವರು. ನೂರಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಬರೆದವರು. ಅಲ್ಲದೇ ಸಾಹಿತ್ಯದ ಬರಹಗಳ ‘ಕೆಂಡಸಂಪಿಗೆ’ಯಲ್ಲಿ ಒಂದು ಅಂಕಣವನ್ನೂ ಬರೆದಿದ್ದಾರೆ. ಇವರ ತಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಕೊರೆಯುತ್ತಿದ್ದ ಅನೇಕಾನೇಕ ಕಥೆಗಳಲ್ಲಿ ಒಂದಿಷ್ಟು ಪ್ರಮುಖವಾದವುಗಳನ್ನು ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರ ಮತ್ತು ಕೆಲ ಗೆಳೆಯರ ಒತ್ತಾಯಕ್ಕೆ ಇಳಿದು, ಆ ಕಥೆಗಳೆಲ್ಲಾ ಒಂದು ಪುಸ್ತಕದ ರೂಪಕ್ಕಿಳಿದಿವೆ.
ಆ ಕಥೆಗಳ ಸಂಗ್ರಹವೇ ‘ಉದಕ ಉರಿದು’ ಎಂಬ ಕಥೆಗಳ ಸಂಕಲನವಾಗಿದೆ.
ಇಲ್ಲಿಯ ವರೆಗೆ ಸುಮಾರು ಅಧಿಕೃತವಾಗಿ ಶ್ರೀಹರ್ಷ ಸಾಲಿಮಠರು ಬೇರೆ ಬೇರೆ ಆನ್ ಲೈನ್ ಪತ್ರಿಕೆಗಳಲ್ಲಿ ಬರೆದದ್ದು ಸಾವಿರ ಪುಟಗಳಷ್ಟು ಆಗಬಹುದು. ಇವುಗಳಲ್ಲಿ ಸೃಜನಶೀಲ ಬರೆವಣಿಗೆ ಅಂತ ಬರೆದದ್ದು ತುಸು ಕಮ್ಮಿಯೇ ಅನ್ನುತ್ತಾರೆ ಸಾಹಿತಿ ಶ್ರೀಹರ್ಷ ಸಾಲಿಮಠರು. ಆದರೆ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರು ಹೇಳುತ್ತಾರೆ ಈ ಶ್ರೀಹರ್ಷ ಸಾಲಿಮಠರು ಕನ್ನಡದ ಒಬ್ಬ ಸೃಜನಶೀಲ ಬರಹಗಾರರು ಎಂದು. ಅದಕ್ಕಾಗಿಯೇ ಈ ಶ್ರೀಹರ್ಷ ಸಾಲಿಮಠರ ಈ ಒಂದು ಕಥೆಗಳ ಸಂಕಲನವನ್ನು ಹೊರತರುತ್ತಿದ್ದೇವೆ ಎಂದು.
ಹೀಗೆಯೇ ಹೇಳುವ ಈ ನಮ್ಮ ಸಾಹಿತಿ ಹನುಮಂತ ಹಾಲಿಗೇರಿಯವರು ಏನೇಯಾಗಲಿ ಕನ್ನಡಕ್ಕೊಬ್ಬ ನವನವೀನ ಸಾಹಿತಿಯನ್ನಂತೂ ತರುತ್ತಿರುವುದು ಸ್ವಾಗತಾರ್ಹವಾಗಿದೆ.
ಮುಂದೆ ಈ ಕಥೆಗಳ ಸಂಕಲನದ ಕುರಿತು ಒಂದು ವಿಮರ್ಶೆಯನ್ನು ಮಾಡೋಣ. ಈಗ ಬರೀ ಈ ಶ್ರೀಹರ್ಷ ಸಾಲಿಮಠರು ಯಾರು ಎಂಬುದಕ್ಕೆ ಪುರಾವೆಗೆ ಈ ಲೇಖನ.!
–ಕೆ.ಶಿವು.ಲಕ್ಕಣ್ಣವರ