ಇದು ಆರಂಭ
ವರುಷದ ದೀರ್ಘ ಕಹಳೆಗೆ
ಬೆಚ್ಚಿ ಬಿತ್ತು ಸರಕಾರ
ರಾತ್ರೋ ರಾತ್ರಿ ಬದಲಿಸಿದರು
ರೈತ ನೀತಿಯನ್ನ
ಗುಡುಗು ಹಾಕಿದರು
ನೆಲದ ಧ್ವನಿ
ಮುಗಿಲು ಮುಟ್ಟಿತು ನೋಡಿ
ಮೌನದಲಿ ಹೊರಟವರ
ಮೇಲೆ ಗಾಡಿ ಸವಾರಿ
ಕೊಂದರು ನನ್ನವರ
ಸಾವಿರು ಸಾವಿರು
ಪುಂಗಿ ಊದಿದವು
ಟಿವಿ ಮಾಧ್ಯಮಗಳು
ಹರಿಯಿತು ರಕ್ತಕೋಡಿ
ನೆಲ ನುಂಗುವ ರಕ್ಕಸರಿಗೆ
ಎಚ್ಚರಿಕೆ ಘಂಟೆ
ಕೊನೆಗೂ ಗೆದ್ದರು
ಕಪ್ಪು ನೆಲದ ರೈತರು
ಗೆದ್ದೆವೆಂದು ಬೀಗ ಬೇಡಿ
ಅಲ್ಲ ಇದು ಅಂತ್ಯ
ಕಸವ ಕಿತ್ತೆಸೆಯಲು
ಈಗ ಇದು ಆರಂಭ
–ಡಾ ಶಶಿಕಾಂತ ಪಟ್ಟಣ ಪುಣೆ