ಮಸ್ಕಿ : ಈಶಾನ್ಯ ಶಿಕ್ಷಕರ ಮತಕ್ಷೆತ್ರದ ಚುನಾವಣೆಯ ಅಂತಿಮ ದಿನಗಳು ಸಮೀಪಿಸುತ್ತಿದ್ದಂತೆ ಅಭ್ಯಾರ್ಥಿಗಳಲ್ಲಿ ಒಳ ಬೇಗುದಿ ಶುರುವಾಗಿದೆ.
ಬಿಜೆಪಿಯಿಂದ ಶಶೀಲ ನಮೋಶಿ, ಕಾಂಗ್ರೆಸ್‍ನಿಂದ ಶರಣಪ್ಪ ಮಟ್ಟೂರು ಹಾಗೂ ಜೆಡಿಎಸ್‍ನಿಂದ ತಿಮ್ಮಯ್ಯ ಪುರ್ಲೇ ಅಖಾಡದಲ್ಲಿದ್ದು ಈಗಾಗಲೇ ಶಶೀಲ್ ನಮೋಶಿ ಮತ್ತು ಶರಣಪ್ಪ ಮಟ್ಟೂರು ವಿಧಾನ ಪರಿಷತ್‍ಗೆ ಆಯ್ಕೆಯಾಗಿದ್ದರೆ, ಇದೇ ಮೊದಲ ಬಾರಿಗೆ ನಿವೃತ್ತ ಉಪನ್ಯಾಸಕ ತಿಮ್ಮಯ್ಯ ಪುರ್ಲೆ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ.
ಬಿಜೆಪಿಯ ರಾಜ್ಯ ಅಧ್ಯಕ್ಷ ನಳೀನ ಕುಮಾರ ಕಟೀಲ್ ಮಸ್ಕಿಯ ಬಹಿರಂಗ ಸಭೆಯಲ್ಲಿ ಶಶೀಲ್ ನಮೋಶಿ ಗೆದ್ದಾಗಿದೆ. ಫಲಿತಾಂಶ ಘೋಷಣೆ ಬಾಕಿ ಇದೆ ಎಂದು ಹೇಳಿರುವದು ಚರ್ಚೆಗೆ ಗ್ರಾಸವಾಗಿದೆ.
ಶರಣಪ್ಪ ಮಟ್ಟೂರು ನೇರ ಮತ್ತು ನಿಷ್ಠುರ ಮಾತುಗಳು ಅವರಿಗೆ ಈ ಬಾರಿ ಗೆಲುವಿಗೆ ತೊಡಕಾಗಿವೆ ಎಂದು ಅವರ ಮೇಲೆ ವಿಶ್ವಾಸವಿಟ್ಟುಕೊಂಡ ಶಿಕ್ಷಕರು ಹೇಳುತ್ತಿದ್ದಾರೆ.
ತಿಮ್ಮಯ್ಯ ಪೂರ್ಲೆ ಮೂಲತಃ ಉಪನ್ಯಾಸಕರಾಗಿದ್ದು ಉಪನ್ಯಾಸಕರ ಸಮಸ್ಯೆಗಳ ಪರಿಹಾರಕ್ಕಾಗಿ ಮಾಡಿದ ಪ್ರಯತ್ನ ಫಲ ಕೊಡುವ ಭರವಸೆಯಲ್ಲಿ ತಿಮ್ಮಯ್ಯ ಪುರ್ಲೆ ಇದ್ದಾರೆ.
28 ಸಾವಿರ ಕ್ಕು ಅಧಿಕ ಶಿಕ್ಷಕರು ಮತದಾನ ಮಾಡಲು ಹೆಸರು ನೊಂದಾಯಿಸಿದ್ದಾರೆ. ಸರ್ಕಾರ 30 ರವರೆಗೆ ರಜೆ ಘೋಷಿಸಿರುವದು ಮತದಾನಕ್ಕೆ ಅಡ್ಡಿಯಾಗಿದೆ. ಬಹುತೇಕ ಶಿಕ್ಷಕರು ಹಬ್ಬಕ್ಕಾಗಿ ರಜೆ ಇರುವದರಿಂದ ತಮ್ಮ ತಮ್ಮ ಊರಿಗಳಿಗೆ ತೆರಳಿದ್ದಾರೆ. ಮತದಾನದ ಪ್ರಮಾಣ ಕಡಿಮೆಯಾಗುವ ಸಾಧತ್ಯೆ ಹೆಚ್ಚಿದೆ.
ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೇ ಇರಲಿ ಃ ಈಗಾಗಲೇ ನಮೋಶಿ ಮತ್ತು ಮಟ್ಟೂರು ವಿಧಾನ ಪರಿಷತ್‍ಗೆ ಆಯ್ಕೆಯಾಗಿದ್ದು ಈ ಬಾರಿ ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕ ಆಯ್ಕೆಯಾದರೆ ಒಳ್ಳೆಯದು ಎಂದು ತಿಮ್ಮಯ್ಯ ಪೂರ್ಲೆ ಕಡೆ ಅಭಿಮಾನ ತೊರಿಸುವವರ ಸಂಖ್ಯೆ ಹೆಚ್ಚಿದೆ.
ಕುರುಡು ಕಾಂಚಣ ಃ ಸುಶೀಕ್ಷತ ಶಿಕ್ಷಕರ ಮತ ಕ್ಷೇತ್ರದ ಮೇಲೂ ಕುರುಡು ಕಾಂಚಣ ಪ್ರಭಾವ ಬೀರತೊಡಗಿದೆ. ವಿಶೇಷವಾಗಿ ಅನುದಾನ ರಹಿತ ಶಿಕ್ಷಕರಿಗೆ ಹಣದ ಆಮಿಷ ಒಡ್ಡುತ್ತಿದ್ದು 1000 ದಿಂದ 5000 ವರೆಗೆ ಹಣ ಹಂಚಿಕೆ ನಡೆಯುತ್ತಿದೆ ಎಂದು ಎರಡು ಪಕ್ಷದ ಕಾರ್ಯಕರ್ತರು ಮಾತಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ವೇತನ ಪಡೆಯುತ್ತಿರುವ ಶಿಕ್ಷಕರಲ್ಲಿ ಹಣ ವರ್ಗಾವಣೆ ನಡೆದಿದೆ ಎಂದು ತಿಳಿದು ಬಂದಿದೆ.
ಕಾಲೇಜು ಉಪನ್ಯಾಸಕರು ಮತ್ತು ಅನುದಾನಿತ ಶಿಕ್ಷಕರು ತಿಮಯ್ಯ ಪೂರ್ಲೆ ಕಡೆ ಮನಸ್ಸು ಮಾಡುತ್ತಿದ್ದಾರೆ ಎಂಬುದು ಗುಪ್ತಗಾಮಿನಿಯಾಗಿದ್ದು ನಮೋಶಿ ಮತ್ತು ಮಟ್ಟೂರು ಬೆಂಬಗಲಿಗು ಮತಯಾಚನೆ ಮಾಡುವಾಗ ನಮಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಪೂರ್ಲೆಗೆ ಎರಡನೇ ಪ್ರಾಶಸ್ತ್ಯದ ಮತ ನೀಡಿ ಎಂದು ಪ್ರಚಾರ ಮಾಡುತ್ತಿರುವದು ಕಂಡು ಬಂದಿದೆ. ವಿಜಯ ಮಾಲೆ ಯಾರ ಕೊರಳಿಗೆ ಎಂಬುದು ಕಾದು ನೋಡಬೇಕು