ಪ್ರತಿಭಾವಂತರನ್ನು ಸೃಷ್ಟಿಸುವ ಆಶಾ ಎಸ್ ಯಮಕನಮರಡಿ

ಪ್ರತಿಭಾವಂತರನ್ನು ಸೃಷ್ಟಿಸುವ ಆಶಾ ಎಸ್ ಯಮಕನಮರಡಿ

ನನ್ನ ಗುರುಮಾತೆಯಾದ ಶ್ರೀಮತಿ ಆಶಾ ಎಸ್. ಶಿವಾನಂದ ಯಮಕನಮರಡಿ ಅವರು ಮೂಲತಃ ಜಮಖಂಡಿ ಅವರು.ಬೆಳಗಾವಿಲ್ಲೇ ಇವರ ಈಗೀನ ನಿವಾಸ.ಇವರು ರಾಜ್ಯ ಶಾಸ್ತ್ರದಲ್ಲಿ ಬಿ.ಎ ಪದವಿ ಪಡೆದಿದ್ದಾರೆ.ಕವನಗಳಿಗೆ ರಾಗ‌ ಸಂಯೋಜನೆ ಮಾಡಿ ಅತಿ ಸುಶ್ರಾವ್ಯವಾಗಿ ಹಾಡುತ್ತಾರೆ.ನನ್ನ ” ಹೆಣ್ಣು” ಎಂಬ ಕವನಕ್ಕೆ ಕೂಡಾ ದನಿಯಾಗಿ,ನನ್ನ ಅಕ್ಷರಗಳಿಗೆ ಜೀವ ತುಂಬಿದ್ದಾರೆ.

ಅಂಚೆ ಚೀಟಿ ಸಂಗ್ರಹ ಮತ್ತು ನಾಣ್ಯಗಳ ಸಂಗ್ರಹ ಮುಂತಾದವು ಇವರ ಹವ್ಯಾಸಗಳು. ಸಮಾಜಿಕ ಕಳಕಳಿ ಹೊಂದಿದ್ದು ಜಿಲ್ಲೆಯ ಮಹೇಶ ಪೌಂಡೇಶನ್ ಹಾಗೂ ಆಶ್ರಯ ಪೌಂಡೇಶನ್ ಗಳಿಗೆ ಸಹಾಯಹಸ್ತ ತೋರಿ, ಬೆನ್ನೆಲುಬಾಗಿ ನಿಂತು, ಮಾನವಿಯತೆ ಮೆರೆದಿದ್ದಾರೆ.
ಆಶಾ ಅಮ್ಮನವರು ಬರೆದ ಹಲವಾರು ಲೇಖನಗಳು, ಕಥೆಗಳು, ಕವನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಅಷ್ಟೇ ಅಲ್ಲದೆ ಆಧ್ಯಾತ್ಮದ ಬಗ್ಗೆ ಒಲವು ಇದ್ದು ಆಧುನಿಕ ವಚನಗಳನ್ನು ರಚಿಸಿ, ಆಧುನಿಕ ವಚನಗಾರ್ತಿ ಎಂದು ಕೂಡಾ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.ಹಲವಾರು ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.ಹಲವಾರು ಜಿಲ್ಲಾಮಟ್ಟದ, ರಾಜ್ಯಮಟ್ಟದ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಪ್ರಕಟಿತ ಕೃತಿಗಳು
ಭಾವಬಂಧ, ಚಿಂಚನಾ, ಬೆಡಗಿನ ನವಿಲುಗರಿ, ಮುಂತಾದವು.

ಇದರೊಂದಿಗೆ “ಕಾವ್ಯ ಕೂಟ ಬಳಗ “ ದ ಎಲ್ಲ ಸದಸ್ಯರ ನ್ಯಾನೋ ಕಥೆಗಳ ಕಥಾ ಸಂಕಲನ ಬಿಡುಗಡೆಯನ್ನು ೧೩ರ ೨೦೨೧ರಂದು ಮಾಡಿ, ಪ್ರಪ್ರಥಮ ಬಾರಿಗೆ ವಾಟ್ಸಪ್ ಗ್ರೂಪಿನಲ್ಲಿ ಬರೆಯುವ ಎಲ್ಲ ಲೇಖಕರ ನ್ಯಾನೋ ಕಥೆಗಳು ಬಿಡುಗಡೆಯಾಗಲು ಕೂಡಾ ಇವರೇ ಮೂಲ ಕಾರಣ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ತಂದ ವಿಷಯ.

ನಿರ್ವಹಿಸುತ್ತಿರುವ ಕಾರ್ಯಕ್ಷೇತ್ರಗಳು:
೧.ಕಿತ್ತೂರು ರಾಣಿ ಚೆನ್ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೆಳಗಾವಿ -ಅಧ್ಯಕ್ಷರು.
೨.ಸಿರಿಗನ್ನಡ ವೇದಿಕೆ ಬೆಳಗಾವಿ ಜಿಲ್ಲೆ ಮಹಿಳಾ ಘಟಕ- ಸಹಕಾರ್ಯದರ್ಶಿ.
೩.ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ- ಸದಸ್ಯೆ,ಪದಾಧಿಕಾರಿ.
೪. ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯತ್ವ.
೫. ಜಿಲ್ಲಾ ಬರಹಗಾರರ ಸಂಘ ಸದಸ್ಯತ್ವ.
೬. ಆಶ್ರಯ ಪೌಂಡೇಶನ್ ಸಂಸ್ಥೆಯ ಸಲಹಾ ಸಮಿತಿಯ ಸದಸ್ಯತ್ವ.
೭. ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಸದಸ್ಯತ್ವ.
೮. ೨೦೧೮ – ೨೦೧೯ ಎರಡು ಸಾಲಿನ ಅವಧಿಗೆ ಜಗಜ್ಯೋತಿ ಬಸವೇಶ್ವರ ಉತ್ಸವ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಣೆ.

ತರಬೇತಿ ಹಾಗೂ ಕಾರ್ಯಕ್ರಮಗಳು ನೀಡಿದ ವಿವರ:
* ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ
* ಬೆಳಗಾವಿ ಬಾನುಲಿ ಕೇಂದ್ರ ವೇಣು ಧ್ವನಿಯಲ್ಲಿ ಸಾಹಿತ್ಯ-ಸಂಗೀತ ಚರ್ಚೆ ಸಂದರ್ಶನ ಕುರಿತು ಕಾರ್ಯಕ್ರಮ ನೀಡಿದ್ದಾರೆ.
* ಉದಯ ಟಿವಿ ಮಹಿಳೆರಿಗಾಗಿ ನಡೆಸಿಕೊಡುವ “ಸಿರಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಉಲನ್ ಹೆಣಿಕೆ ಯಲ್ಲಿ ಸ್ವೆಟರ್ ತಯಾರಿಕೆ ಕುರಿತು ಕಾರ್ಯಕ್ರಮ ನೀಡಿದ್ದಾರೆ.
* ನಾಟಕ ರೂಪಕಗಳಲ್ಲಿ ಭಾಗವಹಿಸಿ ರೊಂದಿಗೆ ನಿರ್ದೇಶಕರಾಗಿ, ನಿರೂಪಕರಾಗಿ, ನಿರ್ವಾಹಕರಾಗಿ ಕಾರ್ಯನಿರ್ವಹಣೆ.
* ತಳಿಯ ಬಾನುಲಿ ಕೇಂದ್ರ ವೇಣು ಧ್ವನಿಯಲ್ಲಿ ಮಕ್ಕಳಿಗಾಗಿ ಸ್ವರಚಿತ ನಾಟಕ ನಿರ್ದೇಶನದೊಂದಿಗೆ ಪ್ರಯೋಗ ಮುಂತಾದವು.

ಸೇವೆಗೆ ಸಂದ ಸನ್ಮಾನ:

* ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸ್ಪೂರ್ತಿ ಮಹಿಳಾಮಂಡಳದಿಂದ ಗೌರವ ಸನ್ಮಾನ.
*  ಬೆಳಗಾವಿ ರಾಜ್ಯ ಸರಕಾರಿ ನೌಕರ ಸಂಘದಿಂದ ‌ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಸಾಹಿತ್ಯ ಸೇವೆಗೆ ರಾಜ್ಯಮಟ್ಟದ ಗೌರವ ಪ್ರಶಸ್ತಿ ಹಾಗೂ ಸನ್ಮಾನ.೨೦೧೭
* ಮ .ಗು. ಘೀವಾರಿ ಸಾಹಿತ್ಯ”, ಪ್ರಶಸ್ತಿ ಹಾಗೂ ಸನ್ಮಾನ.೨೦೧೮
* ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ” ಕನ್ನಡ ಸೇವಾ ರತ್ನ ಪ್ರಶಸ್ತಿ.೨೦೧೯.
* ಚಿನ್ಮಯ ಪ್ರಕಾಶನ ಅಥಣಿಯವರಿಂದ ” ಬಸವ ಚೇತನ ಪ್ರಶಸ್ತಿ.೨೦೧೯.
* ಜಮಖಂಡಿ ತಾಲೂಕಿನ ಹುನ್ನೂರ-ಮದುರಖಂಡಿಯ ಬಸವ ಗುರುಕುಲಾಶ್ರಮದ ವತಿಯಿಂದ ಶರಣ ಡಾಕ್ಟರ್ ಈಶ್ವರ್ ಮಂಟೂರವರ ವ್ಯಕ್ತಿಚಿತ್ರಣ ” ಗೌರವದ ಕರಿ” ಕವನ ಸಂಕಲನಕ್ಕೆ ಗೌರವ ಸನ್ಮಾನ.

ವ್ಯವಹಾರ ಕುಶಲತೆ-
* ಸ್ವೆಟರ್ ತಯಾರಿಕಾ ಘಟಕ
* ಫ್ಯಾಬ್ರಿಕ್ ಪರ್ಸ್ ಗಳ ತಯಾರಿಕೆತಯಾರಿಕೆ.
ಉಲನ್ ಬಳಸಿ ಮಕ್ಕಳ ಪರಿಕರಗಳ ತಯಾರಿಕೆ ಇತ್ಯಾದಿ.

ಇಷ್ಟೆ ಅಲ್ಲದೆ ನನ್ನಂತಹ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುವ ಮಕ್ಕಳಿಗೆ,ತಿದ್ದಿ ತೀಡಿ ಎದ್ದು ನಿಲ್ಲುವ ಅವಕಾಶಗಳನ್ನು ಕೂಡಾ ಕಲ್ಪಿಸಿ ಕೊಡುತ್ತಿದ್ದಾರೆ.ಇವತ್ತಿನ ನನ್ನ ಸಣ್ಣ, ಪುಟ್ಟ ಸಾಧನೆಗಳಿಗೆ ಇವರೇ ಮೂಲ ಕಾರಣ.

ಒಟ್ಟಾರೆ ‌ಹೆತ್ತಮ್ಮ ಭೂಮಿಗೆ
ತಂದ ದೇವರಾದರೆ, ಸಾಹಿತ್ಯದಲ್ಲಿ ನನ್ನನ್ನು ಬೆಳಸುತ್ತಿರುವ ಹೊತ್ತಮ್ಮ ದೇವರು.


ಮಂಜುಶ್ರೀ ಬಸವರಾಜ ಹಾವಣ್ಣವರ.
ಅಸಿಸ್ಟೆಂಟ್ ಪ್ರೊಫೆಸರ್
ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಬೆಳಗಾವಿ.

Don`t copy text!