ಬೀದರ : ಬಿಜೆಪಿಯ ಪ್ರಕಾಶ ಖಂಡ್ರೆ V/S ಕಾಂಗ್ರೆಸ್ ನ ಭೀಮರಾವ್ ಪಾಟೀಲರ ಮದ್ದೆ  ಗೆಲ್ಲುವರು ಯಾರು?

ಬೀದರ : ಬಿಜೆಪಿಯ ಪ್ರಕಾಶ ಖಂಡ್ರೆ V/S ಕಾಂಗ್ರೆಸ್ ನ ಭೀಮರಾವ್ ಪಾಟೀಲರ ಮದ್ಧೆ  ಗೆಲ್ಲುವರು ಯಾರು?

ವಿಧಾನ ಪರಿಷತ್ತಿಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ಚುನಾವಣೆಯಲ್ಲಿ ಬೀದರನಲ್ಲಿ ಜೆಡಿಎಸ್‌ ಸ್ಪರ್ಧಿಸದೇ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅನುಕೂಲಕರವಾಗಿ ಪರಿಣಮಿಸಿದೆ. ರಾಷ್ಟ್ರೀಯ ಪಕ್ಷಗಳ ಮಧ್ಯೆಯೇ ನೇರ ಹಣಾಹಣಿ ನಡೆಯುವುದು ಸ್ಪಷ್ಟವಾಗಿ ಕಂಡು ಬರುತ್ತಿರುವುದರಿಂದ ಎರಡೂ ಪಕ್ಷಗಳು ಗ್ರಾಮ ಪಂಚಾಯಿತಿ ಸದಸ್ಯರ ಮೇಲೆಯೇ ಕಣ್ಣು ಇಟ್ಟಿವೆ.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳು ವಿಸರ್ಜನೆಯಾಗಿರುವ ಕಾರಣ ಸದಸ್ಯರು ಮತ ಹಕ್ಕು ಕಳೆದುಕೊಂಡಿದ್ದಾರೆ. ಮತದಾರರಲ್ಲಿ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರೇ ಅತ್ಯಧಿಕ ಸಂಖ್ಯೆಯಲ್ಲಿ ಇದ್ದಾರೆ. ನಾಮಪತ್ರಗಳು ಕ್ರಮಬದ್ಧವಾಗಿರುವುದನ್ನು ಜಿಲ್ಲಾ ಚುನಾವಣಾಧಿಕಾರಿ ಘೋಷಣೆ ಮಾಡುತ್ತಿದ್ದಂತೆಯೇ ಮತದಾರರನ್ನು ಓಲಿಸುವ ಕಾರ್ಯ ಶುರುವಾಗಿದೆ.

ಜಿಲ್ಲೆಯಲ್ಲಿ ಒಟ್ಟು 3,495 ಮತದಾರರು ಇದ್ದಾರೆ. ನಗರ, ಪಟ್ಟಣಗಳಲ್ಲಿ 257 ಹಾಗೂ ಗ್ರಾಮೀಣ ಪ್ರದೇಶದಲ್ಲಿ 3,238 ಮತದಾರರು ಇದ್ದಾರೆ. ನಗರಸಭೆ, ಪುರಸಭೆಗಳ 23 ನಾಮ ನಿರ್ದೇಶಿತ ಸದಸ್ಯರಿಗೂ ಮತ ಹಕ್ಕು ಕಲ್ಪಿಸಲಾಗಿದೆ.

ಬೀದರ್ ತಾಲ್ಲೂಕಿನಲ್ಲಿ 691, ಭಾಲ್ಕಿಯಲ್ಲಿ 646, ಬಸವಕಲ್ಯಾಣದಲ್ಲಿ 606, ಹುಮನಾಬಾದ್‌ನಲ್ಲಿ 416, ಔರಾದ್ 416, ಹುಲಸೂರಲ್ಲಿ 129, ಕಮಲನಗರದಲ್ಲಿ 280 ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ 308 ಮತದಾರರು ಇದ್ದಾರೆ. ಬೀದರ್, ಭಾಲ್ಕಿ ಹಾಗೂ ಬಸವಕಲ್ಯಾಣ ತಾಲ್ಲೂಕಿನಲ್ಲೇ ಅತಿ ಹೆಚ್ಚು ಮತದಾರರು ಇರುವ ಕಾರಣ ರಾಜಕೀಯ ಪಕ್ಷಗಳು ಈ ತಾಲ್ಲೂಕುಗಳಲ್ಲಿ ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟಿವೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಮೂವರು ಶಾಸಕರು, ಬಿಜೆಪಿಯ ಇಬ್ಬರು ಹಾಗೂ ಜೆಡಿಎಸ್‌ನ ಒಬ್ಬರು ಶಾಸಕರು ಇದ್ದಾರೆ. ವಿಧಾನ ಪರಿಷತ್ತಿನ ನಾಲ್ವರು ಸದಸ್ಯರಲ್ಲಿ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಇದ್ದಾರೆ.

ಯಾವ ಉಸಾಬರಿಯೂ ಬೇಡ ಎಂದು ಜೆಡಿಎಸ್‌ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಆಮ್‌ ಆದ್ಮಿ ಪಾರ್ಟಿಯ ಅಭ್ಯರ್ಥಿ ಗೋವಿಂದರಾವ್ ಸೋಮವಂಶಿ ಪ್ರಾಮಾಣಿಕತೆ ಹಾಗೂ ನಿಷ್ಠೆಯ ವಿಷಯ ಪ್ರಸ್ತಾಪಿಸಿ ಮತದಾರರ ಬಳಿ ಮತಯಾಚಿಸಲು ನಿರ್ಧರಿಸಿದ್ದಾರೆ.

ಚುನಾವಣಾ ಕಣದಲ್ಲಿರುವ ಬಿಜೆಪಿಯ ಅಭ್ಯರ್ಥಿಯಾದ ಪ್ರಕಾಶ ಖಂಡ್ರೆ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಭೀಮರಾವ್ ಪಾಟೀಲ ಇಬ್ಬರೂ ಪ್ರಬಲರಾಗಿದ್ದು, ಗೆಲುವಿನ ವಿಶ್ವಾಸದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಪಕ್ಷಗಳ ಮುಖಂಡರು ಪಂಚಾಯಿತಿಗೆ ಚುನಾಯಿತರಾಗಿರುವ ಸದಸ್ಯರ ಬಳಿ ಹೋಗಿ ಪ್ರರಸ್ಪರರಿಗೆ ಪ್ರಬಲ ಸ್ಪರ್ಧೆ ಒಡ್ಡುತ್ತಿದ್ದಾರೆ.

‘ಬಿಜೆಪಿ ಒಂದು ತಿಂಗಳಿಂದ ತಯಾರಿ ನಡೆಸಿದೆ. ಪಂಚಾಯಿತಿ ಚುನಾವಣೆ ನಡೆದ ಸಂದರ್ಭದಲ್ಲೇ ನಮ್ಮ ಪಕ್ಷದವರು ಯಾರು ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಿದ್ದೇವೆ. ಹೀಗಾಗಿ ಪಕ್ಷದ ಅಭ್ಯರ್ಥಿಯ ಗೆಲುವು ಕಷ್ಟವಾಗಲಾರದು’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ನ ದೊಡ್ಡ ಪಡೆ ಇದೆ. ಔರಾದ್ ಹಾಗೂ ಬೀದರ್‌ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪಂಚಾಯಿತಿ ಸದಸ್ಯರು ಇದ್ದಾರೆ. ಔರಾದ್‌ನಲ್ಲಿ ಬಿಜೆಪಿ ಶಾಸಕರಿದ್ದರೂ ಬಹುತೇಕ ಪಂಚಾಯಿತಿಗಳು ಕಾಂಗ್ರೆಸ್‌ ಅಧೀನದಲ್ಲಿವೆ. ಕಾಂಗ್ರೆಸ್‌ ಅಭ್ಯರ್ಥಿ ಜಯ ಸುಲಭವಾಗಲಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ವಿಶ್ವಾಸ ವ್ಯಕ್ತ‍ಪಡಿಸುತ್ತಾರೆ.

ತಾಲ್ಲೂಕು ಮತದಾರರು ಬೀದರ್ ತಾಲ್ಲೂಕು 691 ಭಾಲ್ಕಿ646 ಬಸವಕಲ್ಯಾಣ 606 ಹುಮನಾಬಾದ್‌ 416 ಔರಾದ್ 416 ಹುಲಸೂರ 129 ಕಮಲನಗರ 280 ಚಿಟಗುಪ್ಪ 328

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ಭಾಲ್ಕಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರು ಜೆಡಿಎಸ್ ತೊರೆದು ಮತ್ತೆ ಬಿಜೆಪಿಗೆ ಸೇರ್ಪಗೊಂಡಿದ್ದಾರೆ.

ಬಸವಕಲ್ಯಾಣದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಕಾಶ್ ಖಂಡ್ರೆ ಅವರು ಕಮಲ ಪಾಳಯಕ್ಕೆ ಸೇರ್ಪಡೆಯಾದರು. 2018 ರಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸತ್ತು ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲುಂಡಿದ್ದರು.

1999 ರಿಂದ 2018 ರವರೆಗೂ ಬಿಜೆಪಿಯಲ್ಲಿ ಸಕ್ರೀಯರಾಗಿದ್ದ ಪ್ರಕಾಶ ಖಂಡ್ರೆ ಅವರು 2013 ರಲ್ಲಿ ಭಾಲ್ಕಿ ಮತ್ತು 2016 ರಲ್ಲಿ ಬೀದರ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಈಗ ಮತ್ತೇ ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಎಂಎಲ್ಸಿ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣ..! ಸಿಡಿದೆದ್ದ ಕಾರ್ಯಕರ್ತರೂ..!!–

ಪರಿಷತ್‌ ಫೈಟ್‌ನಲ್ಲಿ ಮೂರು ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿ ಭಾರೀ ಜಿದ್ದಿಗೆ ಇಳಿದಿವೆಯಾದರೂ, ಈ ಚುನಾವಣೆ ಇರುವುದು ಬಿಜೆಪಿಯ ಪ್ರಕಾಶ ಖಂಡ್ರೆ ಮತ್ತು ಕಾಂಗ್ರೆಸ್ ನ ಭೀಮರಾವ್ ಪಾಟೀಲ್ ನಡುವೆಯೇ ಎಂಬುದು ಖಾತ್ರಿಯಾಗಿದೆ.

ಈಗಾಗಲೇ ಈ ಎರಡೂ ಪಕ್ಷಗಳೂ ಅಭ್ಯರ್ಥಿಗಳನ್ನೂ ಕಣಕ್ಕಿಳಿಸಿವೆ. ಆದ್ರೀಗ ಕಾಂಗ್ರೆಸ್‌ನಲ್ಲಿ ಕ್ಯಾಂಡಿಡೇಟ್‌ಗಳ ವಿಚಾರವೇ ಚರ್ಚೆಗೆ ಗ್ರಾಸವಾಗಿದೆ. ಟಿಕೆಟ್ ಹಂಚಿಕೆ ವೇಳೆ ಕುಟುಂಬ ರಾಜಕೀಯ ಮಾಡಿದ್ದಾರೆ ಅಂತಾ ಕಾಂಗ್ರೆಸ್ ನ ಕೈನಲ್ಲಿ ಕಿಡಿ ಹೊತ್ತಿದ್ದೆ.
ಆದ್ರೀಗ ಇದೇ ವೇಳೆ ಕಾಂಗ್ರೆಸ್‌ನಲ್ಲಿ ಪರಿಷತ್‌ ಚುನಾವಣೆ ವಿಚಾರಕ್ಕೆ ಕಿಡಿಯೊಂದು ಹೊತ್ತಿದೆ. ಎಂಎಲ್ಸಿ ಟಿಕೆಟ್ ಹಂಚಿಕೆ ವೇಳೆ ಸ್ವಜನಪಕ್ಷಪಾತ ಮಾಡಲಾಗಿದೆ ಅಂತಾ ಕಾಂಗ್ರೆಸ್ ನ ಕೈ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಕಿಡಿ ಕಾರ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ವಾದ ಪ್ರತಿವಾದ ನಡೆದಿದೆ.

ಹೈಕಮಾಂಡ್ಗೆ ಟ್ಯಾಗ್ ಮಾಡಿ ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ನ ಕೈಪಡೆಯ ಕುಟುಂಬ ರಾಜಕಾರಣ ವಿರುದ್ಧ ಬಿಜೆಪಿ ನಾಯಕರೂ ಕೂಡಾ ಟೀಕೆ ಮಾಡ್ತಿದ್ದಾರೆ.

ಪರಿಷತ್ ಟಿಕೆಟ್ ಹಂಚಿಕೆ ವೇಳೆ ಕಾಂಗ್ರೆಸ್‌ ಪ್ರಭಾವಿ ನಾಯಕರ ಕುಟುಂಬದವರಿಗೆ ಟಿಕೆಟ್ ನೀಡಿದ್ದಾರೆ ಅನ್ನೋದು ಕಾರ್ಯಕರ್ತರ ಅಸಮಾಧಾನ. ಹಾಗಾದ್ರೆ, ಯಾರೆಲ್ಲಾ ನಾಯಕರ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ ಇಲ್ಲಿದೆ ನೋಡಿ ಮಾಹಿತಿ.

ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣ..!–

ಶಾಸಕ ರಾಜಶೇಖರ್ ಹುಮ್ನಾಬಾದ್ ಸಹೋದರ ಭೀಮರಾವ್ ಪಾಟೀಲ್‌ಗೆ ಬೀದರ್ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಇದರಿಂದಾಗಿ ಅಸಮಾದಾನದ ಹೊಗೆ ಹಬ್ಬಿದೆ.

ಇಷ್ಟು ದಿನ ಜೆಡಿಎಸ್‌ ವಿರುದ್ಧ ಕುಟುಂಬ ರಾಜಕೀಯದ ಆರೋಪ ಆಗಾಗ ಕೇಳಿ ಬರ್ತಿತ್ತು. ಇದೀಗ ಕಾಂಗ್ರೆಸ್‌ನಲ್ಲಿ ಸ್ವಜನ ಪಕ್ಷಪಾತದ ಕಿಡಿ ಹೊತ್ತಿಕೊಂಡಿದೆ. ಇದು ಕಾಂಗ್ರೆಸ್ ಪರಿಷತ್‌ ಚುನಾವಣಾ ಫಲಿತಾಂಶಕ್ಕೆ ಹೊಡೆತ ಕೊಡುತ್ತಾ? ಕಾದು ನೋಡಬೇಕು.

ಹೀಗಿರುವದರಿಂದಲೇ ಬಿಜೆಪಿಯ ಪ್ರಕಾಶ ಖಂಡ್ರೆ ಗೆಲುವು ಸುಲಭವಾಗಿದೆ ಎನ್ನುವುದೇ ಬೀದರ್ ವಿಧಾನ ಪರಿಷತ್ ಕ್ಷೇತ್ರದಲ್ಲಿ ಘಾಡವಾಗಿ ಕೇಳಿಬರುತ್ತಿದೆ…!

# ಕೆ.ಶಿವು.ಲಕ್ಕಣ್ಣವರ

Don`t copy text!