ಗಜಲ್
ಹೊರಗಿಟ್ಟು ಹೃದಯ ಅಳುಕಿಲ್ಲದೆ ನಗುತ್ತಿರುವೆ ಚೆಲುವೆ
ಗಂಡ -ಮಕ್ಕಳ ಒಡಗೂಡಿ ಬಾಳುತ್ತಿರುವೆ ಚೆಲುವೆ
ಶಸ್ತ್ರ ಚಿಕಿತ್ಸೆಯಿಂದ ತೆಗೆದಿಟ್ಟು ಕೃತ್ರಿಮ ಹೃದಯ ಬ್ಯಾಗಿನಲ್ಲಿ
ಬಚ್ಚಿಟ್ಟು ನೋವನ್ನು ನಲಿಯುತ್ತಿರುವೆ ಚೆಲುವೆ
ವಿಷ-ಜಂತು, ವೈರಸ್ ಹಾವಳಿಯಲ್ಲಿ ದಣಿದಿವೆ ಜೀವ
ಬಲು ಜಾಣ್ಮೆಯಲ್ಲಿ ನೀನು ಸಲಹುತ್ತಿರುವೆ ಚೆಲುವೆ
ಎಂತಹ ಕಾಳಜಿ ಭಾರ ಹೊರುವ ತಾಳ್ಮೆ ನಿನ್ನದು
ಅಂಗ ಕವಚ ಇಲ್ಲದೇ ರಕ್ಷಿಸುತ್ತಿರುವೆ ಚೆಲುವೆ
ಸಲ್ವಾ ಹುಸೇನ್ ಳನ್ನು ನೋಡಿ ಕಲಿಯಬೇಕಾಗಿದೆ ಬಹಳ
“ಮಾಜಾ” ಹೃದಯದ ತುಡಿತ ನೋಡಿ ನೋಯುತ್ತಿರುವೆ ಚೆಲುವೆ
ಮಾಜಾನ್ ಮಸ್ಕಿ