ಮಸ್ಕಿ: ವಿದ್ಯುತ್ ವೈರ್ ಕಳ್ಳತನ, ಕುಡಿಯುವ ನೀರಿಗಾಗಿ ಜನರು ಪರದಾಟ
e-ಸುದ್ದಿ ಮಸ್ಕಿ
ಮಸ್ಕಿ: ಪಟ್ಟಣದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವುದಕ್ಕಾಗಿ ಪುರಸಭೆ ಸಿಬ್ಬಂದಿಗಳು ಶ್ರಮಿಸುದ್ದಾರೆ. ಆದರೆ ನೀರು ಸರಬರಾಜಿಗಾಗಿ ಅಳವಡಿಸಿದ್ದ ವಿದ್ಯುತ್ ವೈರನ್ನೇ ಖದೀಮರು ಕಳ್ಳತನ ಮಾಡಿದ್ದು, ಇದರಿಂದ ಸಾರ್ವಜನಿಕರು ನೀರಿಲ್ಲದೇ ತೊಂದರೆ ಪಡುವಂತಾಗಿದೆ.
ಪಟ್ಟಣದ ಬಳಗಾನೂರು ಮಾರ್ಗದಲ್ಲಿರುವ ಕುಡಿಯುವ ನೀರಿನ ಕೆರೆಯ ಪಕ್ಕದಲ್ಲಿ ಹಾದು ಹೋಗಿರುವ ತುಂಗಭದ್ರಾ ಎಡನಾಲೆಯಿಂದ ಪುರಸಭೆ ವ್ಯಾಪ್ಯಿಯ ೨೩ ವಾರ್ಡಗಳಿಗೆ ಮೋಟಾರ್‌ಗಳನ್ನು ಅಳವಡಿಸಿ ನೀರು ಸಂಗ್ರಹಿಸಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲಾ ವಾರ್ಡಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಆದರೆ ಇತ್ತಿಚೀಗೆ ಭಾನುವಾರ ರಾತ್ರಿ ಖದೀಮರು ನಾಲೆಯಿಂದ ನೀರು ಸರಬರಾಜಿಗಾಗಿ ಅಳವಡಿಸಿದ್ದ ವಿದ್ಯುತ್ ಕೇಬಲ್‌ನ್ನೇ ಕಳ್ಳತನ ಮಾಡಿಕೊಂಡು ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕೇಬಲ್ ಕಳ್ಳತವಾಗಿದ್ದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ಸಾರ್ವಜನಿಕರು ನೀರಿಲ್ಲದೇ ತೊಂದರೆ ಅನುಭವಿಬೇಕಾಗಿದೆ.
ಸಿಬ್ಬಂದಿಗಳಿಗೆ ಸಂಕಟ: ಪುರಸಭೆ ವ್ಯಾಪ್ತಿಯಲ್ಲಿ ಮೂವತೈದು ಸಾವಿರಕ್ಕೂ ಅಧಿಕ ಜನಸಂಖ್ಯೆ ವಾಸಿಸುತ್ತಿದ್ದು ಪ್ರತಿಯೊಂದು ವಾರ್ಡಗಳಿಗೆ ನೀರು ಸರಬರಾಜು ಮಾಡುವುದು ಪುರಸಭೆ ಹೊಣೆಯಾಗಿದ್ದು ನೀರು ಪೂರೈಸಲು ಸಿಬ್ಬಂದಿ ಪರದಾಡುತ್ತಿದ್ದಾರೆ.
ಒತ್ತಾಯ: ಪಟ್ಟಣದ ಜನರಿಗೆ ಕುಡಿಯವ ನೀರಿಗಾಗಿ ಪುರಸಭೆಯವರು ಅಳವಡಿಸಿರುವ ಮೊಟಾರ್‌ಗಳ ಸುರಕ್ಷತೆ ಕಾಪಾಡಿ ಕಳ್ಳತನವಾಗದಂತೆ ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.