ಬಾವಿಗಳೇಕೆ ವೃತ್ತಾಕಾರ?
ಇಂದು ನೀರಿನ ಮೂಲಗಳಾಗಿದ್ದ ಬಾವಿಗಳು ಹಾಳು ಬಿದ್ದಿವೆ.ನೀರು ನಲ್ಲಿಗಳಲ್ಲಿ ಬರುವ ಕಾರಣ ಯಾರೂ ಬಾವಿ ನೀರನ್ನು ಸೇದುತ್ತಿಲ್ಲ,ಇದರ ಜೊತೆಗೆ ದೈಹಿಕವಾಗಿಯೂ ಜನ ಕೆಲಸ ಮಾಡಲು ಇಷ್ಟಪಡುತ್ತಿಲ್ಲ.
ಅಂದ ಹಾಗೆ ನಮ್ಮ ನಿಮ್ಮ ಸುತ್ತ ಮುತ್ತ ಕಂಡುಬರುತ್ತಿರುವ ಬಾವಿಗಳೇಕೆ ವೃತ್ತಾಕಾರದಲ್ಲಿಯೆ ತೆರೆಯಲ್ಪಟ್ಟಿವೆ?
ಕಾರಣ;
ವೈಜ್ಞಾನಿಕವಾಗಿ ಬಾವಿಯಲ್ಲಿ ನೀರು ನಿಂತಾಗ ತ್ರಿಕೋನ, ಚತುಷ್ಕೋನ,ಇನ್ನಾವುದೇ ಕೋನದ ಆಕಾರದಲ್ಲಿ ಬಾವಿ ತೆರೆದು ಅದರಲ್ಲಿ ನೀರು ನಿಂತಾಗ ನೀರಿನ ಸಾಂದ್ರತೆಯ ಒತ್ತಡವು ಮೂಲೆಗಳಲ್ಲಿ ಬಿದ್ದು ಕುಸಿಯುವ ಸಂಭವ ಹೆಚ್ಚೆಚ್ಚಾಗಿ ಕಾಣುವ ಕಾರಣ ಈ ರೀತಿಯ ಕೋನಗಳ ಆಕಾರಗಳಲ್ಲಿ ಬಾವಿ ತೆರೆಯದೇ ವೃತ್ತಾಕಾರದಲ್ಲಿ ಬಾವಿ ತೆರೆಯುತ್ತಿದ್ದರು,ವೃತ್ತಾಕಾರದ ಬಾವಿಯಲ್ಲಿ ನೀರು ಬಂದು ನಿಂತಾಗ ಯಾವುದೆ ಭಾಗಕ್ಕೆ ಹೆಚ್ಚು ಒತ್ತಡ ಬೀಳದೇ ಸಮಪ್ರಮಾಣದಲ್ಲಿ ನೀರಿನ ಬಲ ಇರುವುದರಿಂದ ಬಾವಿಗಳು ವೃತ್ತಾಕಾರದಲ್ಲಿ ನಿರ್ಮಿಸಲ್ಪಟ್ಟ ಸೋಜಿಗದ ಬಟ್ಟಲುಗಳಾಗಿದ್ದಾವೆ.
–ಶಂಕರ್ ಜಿ ಬೆಟಗೇರಿ.
ಉಪನ್ಯಾಸಕರು.
ಹೂವಿನಹಡಗಲಿ.