ಮಸ್ಕಿ : ಕರೊನಾ ವೈರಸ್ ತಡೆಗಟ್ಟುವುದಕ್ಕಾಗಿ ಈದ್ ಮಿಲಾದ್ ಹಬ್ಬವನ್ನು ಪ್ರತಿಯೊಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸಿ ಸರಳ ರೀತಿಯಲ್ಲಿ ಹಬ್ಬವನ್ನು ಆಚರಿಸಬೇಕು ಎಂದು ಸಿಪಿಐ ದೀಪಕ್ ಬೂಸರಡ್ಡಿ ಮನವಿ ಮಾಡಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲ್ಲೆಯಲ್ಲಿ ಬುಧವಾರ ಕರೆದ ಶಾಂತಿ ಸಭೆಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿರುವ ನೀತಿ ನಿಯಮಗಳನ್ನು ಚಾಚು ತಪ್ಪದೇ ಮುಸ್ಲಿಂ ಭಾಂದವರು ಪಾಲಿಸಿ ಸಾಮೂಹಿಕ ಪ್ರಾರ್ಥನೆ ಮಾಡುವಾಗ ದೈಹಿಕ ಅಂತರವನ್ನು ಕಾಯ್ದುಕೊಳ್ಳೇಕು. ಸಾಮೂಹಿಕ ನಮಾಜ ಹಾಗೂ ಝಿಯಾರತ್ ಸಮಯದಲ್ಲಿ ಹೆಚ್ಚು ಜನರು ಒಂದೇಡೆ ಸೇರಬಾರದು ಎಂದು ಮನವಿ ಮಾಡಿದರು.
ಸಮಾಜದ ಹಿರಿಯ ಮುಖಂಡ ಹಾಗೂ ಪತ್ರಕರ್ತ ಅಬ್ದುಲ್ ಅಜೀಜ್ ಮಾತನಾಡಿ ಕೋವಿಡ್ ತಡೆಗಟ್ಟವುದಕ್ಕಾಗಿ ಸರ್ಕಾರದ ಎಲ್ಲಾ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಲೇಬೇಕು. ನಮ್ಮ ಸಮುದಾಯ ಅದನ್ನು ಚಾಚು ತಪ್ಪದೇ ಪಾಲನೆ ಮಾಡುವುದಾಗಿ ಭರವಸೆ ನೀಡಿದರು.
ಪಿಎಸ್‍ಐ ಸಣ್ಣ ವೀರೇಶ ಮಾತನಾಡಿ ಸರ್ಕಾರ ಹೊರಡಿಸಿರುವ ನಿಯಮದಂತೆ ಅ.30ರಂದು ಈದ್ ಹಬ್ವನ್ನು ಆಚರಿಸಿ. ಮಸ್ಕಿ ಪಟ್ಟಣವೂ ಶಾಂತಿ ಸೌಹಾಧಕ್ಕೆ ಹೆಸರಾದ ನಾಡು ಆದ್ದರಿಂದ ಯಾರೂ ಕೂಡ ಸರ್ಕಾರದ ನಿಯಮಗಳನ್ನು ಮೀರಬಾರದು. ಹಬ್ಬಕ್ಕೆ ಬೇಕಾದ ಅಗತ್ಯ ಭದ್ರತೆಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಮುಖಂಡ ಬಸನಗೌಡ ಪೊಲೀಸ್ ಪಾಟೀಲ್, ಮಲ್ಲಯ್ಯ ಬಳ್ಳಾ, ಮಹಾಂತೇಶ ಪಾಟೀಲ್ ಗುಡದೂರ, ಮುಸ್ಲಿಂ ಸಮಾಜದ ಮುಖಂಡರಾದ ಅಬ್ದುಲ್‍ಗನಿಸಾಬ್, ಯಕ್ಬಾಲ್‍ಸಾಬ್, ಉಸ್ಮಾನ್ ಖಾಜಿ, ಶಫಿ, ಮಸೂದ್‍ಪಾಶ, ಆಶೋಕ ಮುರಾರಿ, ಯಾಸೀನ್, ಸಿದ್ದು ಮುರಾರಿ, ಸೇರಿದಂತೆ ಇತರರು ಇದ್ದರು.