ಧಾರವಾಡ

ಧಾರವಾಡ

ಧಾರವಾಡ
ಮಸುಕಿನಲಿ
ಹೀಗೊಂದು ನಡೆ
ರಸ್ತೆ ಬಿಕೊ ಎನ್ನುತ್ತಿದ್ದವು
ಮರ ಗಿಡ ಬಳ್ಳಿಗಳ
ಪೋದರಿನಲಿ
ಹಕ್ಕಿಗಳ ಕಲರವ
ಮಲಗಿದ್ದಾರೆ ಜನರು
ಅಲ್ಲೊಂದು ಇಲ್ಲೊಂದು ರಿಕ್ಷಾ
ರಸ್ತೆಯ ಪಕ್ಕ ಬಿಸಿ ಬಿಸಿ ಕಾಫಿ
ಬಿಪಿ ಶುಗರ್ ಇದ್ದವರ
ದಂಡ ಯಾತ್ರೆ
ಸ್ವೀಟರ ಕುಲಾಯಿ
ಮಂಕಿ ಟೋಪಿ
ದಾರಿಯುದ್ದಕ್ಕೂ ಹರಟೆ
ಚುನಾವಣೆ ಹಬ್ಬ
ಸತ್ತವರ ಸುದ್ಧಿ
ಮನೆಗೆ ಬಂದು
ಕಾಫಿ ಮಾಡಿ ಕೊಡಬೇಕು
ಕುಡಿಯದಿದ್ದರೂ
ಈರುಳ್ಳಿ ತರಕಾರಿ
ಹೆಚ್ಚಬೇಕು ತಡವಾದರೆ
ಸಹಸ್ರ ನಾಮಾವಳಿ
ಕಾಲೇಜಿನಲಿ ಸಹಿ ಮಾಡಬೇಕು
ಪಾಠ ಕಲಿಸುವ ತಯಾರಿ
ಸಂಜೆ ಮತ್ತೆ ತಿರುಗಾಟ
ಧಾರವಾಡ ಚುರುಕು
ಸಾಹಿತ್ಯ ಚರ್ಚೆ ಸಂವಾದ
ಹಲವು ಸಂಘಗಳ ಒಕ್ಕೂಟ
ಕಿತ್ತಾಟ ಕಾದಾಟ ಬಾಡೂಟ
ಸುಡು ಸುಡು ಮಿರ್ಚಿ ಭಜಿ
ಗಿರಿಮಿಟ್ಟನ ಸದ್ದು
ಗಿಳಿವಿಂಡು ಟಿವಿ ಪತ್ರಿಕೆ
ಮನಸಿಗೆ ಮದ್ದು
ಗೀಚಿದರೆ ಕವನ ಭಾವ
ಶಬ್ದ ಸಂಭ್ರಮ
ಮಲಗ ಬೇಕು ತಡವಾಯಿತು
ಬೆಳಗಿನ ನಸುಕುನಲಿ
ಮತ್ತೆ ಸುತ್ತ ಬೇಕು
ಊರು ದಾರಿ ಕೇರಿ

ಸವಿತಾ ಕುಸುಗಲ್ಲ ಧಾರವಾಡ

Don`t copy text!