ಬದಲಾವಣೆ
ನಡೆದದ್ದೇ ದಾರಿ
ನುಡಿದದ್ದೇ ಶಾಸನ
ಜಾತಿ ಹಣ ಬಲ
ಎಲ್ಲವೂ ಸುಳ್ಳಾದವು
ಜನ ಬಯಸಿದರು
ಬದಲಾವಣೆ
ಸತ್ಯ ನ್ಯಾಯಕ್ಕೆ
ಮತ್ತೆ ಪಟ್ಟ ಕಟ್ಟಿದರು
ಕೈ ಹಿಡಿದರು ರೈತ ಕಾರ್ಮಿಕರು
ಮತ್ತೆ ಎದ್ದು ನಿಂತರು
ಮಹಿಳೆ ಮಕ್ಕಳು
ಸಾಮ್ರಾಜ್ಯ ಇಲ್ಲವಾಯಿತು
ಎಲ್ಲೆಡೆ ಕೂಗು ಕೇಕೆ
ಸಮತೆ ಪ್ರೀತಿ ಗೆದ್ದವು
ಸ್ವಾರ್ಥ ಸೋತು ಮಣ್ಣಯಿತು
ಮಣ್ಣಿನ ಮಕ್ಕಳ ಸಂಭ್ರಮ
ಬಯಸಿದೆ ಭೂಮಿ
ಬದಲಾವಣೆ ಒಳಗೆ ಹೊರಗೆ
–ಶುಭಧಾಯಿನಿ ಮಂಡ್ಯ