ವಿಧಾನ ಸಭೆ ಅಧಿವೇಶನ ಕಲಾಪ ಕೇವಲ ಚರ್ಚೆಗೆ ಮಾತ್ರ ಸಿಮಿತವಾಗದಿರಲಿ

ವಿಧಾನ ಸಭೆ ಅಧಿವೇಶನ ಕಲಾಪ ಕೇವಲ ಚರ್ಚೆಗೆ ಮಾತ್ರ ಸಿಮಿತವಾಗದಿರಲಿ

ಬಹು ದಿನಗಳ ನಂತರ ಉತ್ತರ ಕರ್ನಾಟಕ ಭಾಗದ ಬೆಳಗಾವಿಯ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆದಿಯುತ್ತಿರುವದು ತುಂಬಾ ಒಳ್ಳೆಯದೇ ಆದರೆ ಅದು ಕೇವಲ ಚರ್ಚೆ, ವಿಮರ್ಶೆಗಳಿಗೆ ಮಾತ್ರ ಸಿಮಿತ ಆಗದಿರಲಿ ಎಂಬುದು ನಮ್ಮ ಆಶಯ.

ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಇದುವರೆಗೂ ನಿರಿಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಎಂಬುದು ಮರಿಚಿಕೆಯಾಗಿದೆ. ಈ ಭಾಗದ ಯುವ ಸಮೂಹ ಉದ್ಯೋಗವನ್ನು ಅರಸಿ ಕುಟುಂಬ ತೊರೆದೂ ಬೆಂಗಳೂರು,ಮಂಗಳೂರು, ಮೈಸೂರು,ಪೂನಾ, ಗೋವಾದಂತ ಮಹಾನಗರಗಳಿಗೆ ವಲಸೆ ಹೋಗುವುದು ನಿರಂತರವಾಗಿ ನಡೆಯುತ್ತಲೇ ಇದೆ. ಐ.ಟಿ -ಬಿ.ಟಿ ಯಂತಹ ಬಹುದೊಡ್ಡ ಕಂಪನಿಗಳು ಕೇವಲ ಬೆಂಗಳೂರಿನಂತಹ ಮಹಾನಗರಗಳಿಗೆ ಸೀಮಿತವಾಗಿದ್ದು ವಿಪರ್ಯಾಸವೇ ಸರಿ.

ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂದಿಗೂ ಕೂಡ ಕಾರ್ಖಾನೆಗಳ ಸಂಖ್ಯೆ ಅತಿ ವಿರಳವಾಗಿವೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಜನರು ತಮ್ಮ ಬದುಕನ್ನು ಸಾಗಿಸಲು ಈ ಭಾಗದಿಂದ ಕುಟುಂಬ ಸಮೇತ ಮಹಾನಗರಗಳ ಕಡೆ ಮುಖ ಮಾಡುತ್ತಿರುವದು ತುಂಬಾ ಸೂಚನಿಯ ಸಂಗತಿ. ಬಡವರೂ ತಮ್ಮ ಜೀವನ ನಡೆಸುವುದು ದುಸ್ತರ ಹಿಗಿರುವಾಗ ಮಕ್ಕಳಿಗೆ ಉನ್ನತ ಶಿಕ್ಷಣ ಕೋಡಿಸಲು ಸಾಧ್ಯವಾಗದ ಸ್ಥಿತಿಯೂ ನಿರ್ಮಾಣವಾಗಿದೆ. ಲಕ್ಷಾಂತರ ಮಕ್ಕಳು ಪ್ರೌಢ ಶಿಕ್ಷಣ ಪಡೆಯುಷ್ಟರಲ್ಲಿಯೇ ಬಡತನ ಅವರ ದಿಕ್ಕನ್ನೆ ಬದಲಾಯಿಸಿ ಶಿಕ್ಷಣದಿಂದ ವಂಚಿತರಾಗುಂತೆ ಮಾಡುತ್ತಿದೆ.

ನಮ್ಮನ್ನಾಳುವ ಸರ್ಕಾರಗಳು ಇತ್ತಿಚೆಗೆ ನಡೆದ ನೀತಿ ಆಯೋಗದ ‘ಬಹು ಆಯಾಮದ ಬಡತನ ಸೂಚ್ಯಂಕ ವರದಿ ಪ್ರಕಾರ ನಮ್ಮ ಭಾಗದ ಜಿಲ್ಲೆಗಳೇ ಕಡುಬಡ ಜಿಲ್ಲೆಗಳಾಗಿವೆ . ಅದರಲ್ಲಿ ಯಾದಗಿರಿ ಮೋದಲನೇ ಸ್ಥಾನದಲ್ಲಿದ್ದರೆ, ರಾಯಚೂರು ಎರಡನೇಯ ಸ್ಥಾನದಲ್ಲಿ ಇದೆ . ನಮ್ಮನ್ನಾಳುವ ಸರ್ಕಾರಗಳು ಈ ವಿಷಯದ ಬಗ್ಗೆ ಗಂಭೀರ ಚಿಂತನೆ ಮಾಡುವ ಅವಶ್ಯಕತೆ ಇದೆ. ಇದಕ್ಕೆ ಮೂಲ ಕಾರಣಿಕರ್ತರು ಯಾರು? ಜನಪ್ರತಿನಿಧಿಗಳಾ, ಅಧಿಕಾರಿಗಳಾ,ಪ್ರಜೆಗಳಾ ಇಲ್ಲವೇ ಮತ್ತೆನೂ ಎಂಬುದನ್ನು ನಾವೆಲ್ಲರೂ ಅವಲೋಕಿಸಬೇಕಾದ ಸಂಗತಿ. ಇದುವರೆಗೂ ಆಳ್ವಿಕೆ ಮಾಡುತ್ತಾ ಬಂದಿರುವ ಪ್ರತಿಯೊಂದು ಸರ್ಕಾರಗಳು ನಮ್ಮ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿವೆ . ನಮ್ಮ ಭಾಗಕ್ಕೂ ಬೆಂಗಳೂರು ಭಾಗಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಮನಗಾಣಬಹುದು. ಇದಕ್ಕೆ ಮೂಲ ಕಾರಣ ಏನು ಎಂಬುದರ ಕುರಿತು ಹಲವಾರು ಆಯಾಮಗಳಿಂದ ನಾವು ಸೂಕ್ಷ್ಮವಾಗಿ ಅವಲೋಕಿಸಬೇಕಾಗುತ್ತದೆ. ನಮ್ಮ ಭಾಗದಲ್ಲಿ ಇಂದಿಗೂ ಶಿಕ್ಷಣ, ಆರೋಗ್ಯ,ಕೃಷಿ ಉದ್ಯೋಗ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಗಣನಿಯವಾಗಿ ಹಿಂದೂಳಿದಿದ್ದೆವೆ .

ಪ್ರತಿ ವರ್ಷ ಜನಸಾಮಾನ್ಯರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ವಿಧಾನಸಭಾ ಅಧಿವೇಶಗಳು ನಡೆಯುತ್ತಲೇ ಬಂದಿವೆ. ಅಧಿವೇಶನದಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆಗಳು ,ವಿಮರ್ಶೆಗಳು ನಡೆಯುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ ಕೆಲವೊಂದು ವಿಷಯಗಳು ಇಂದಿಗೂ ಕೇವಲ ಚೆರ್ಚೆ, ವಿಮರ್ಶೆ ಗೆ ಮಾತ್ರ ಸಿಮಿತವಾಗಿದ್ದು ಕಾರ್ಯ ರೂಪಕ್ಕೆ ಬರುವಲ್ಲಿ ತುಂಬಾ ವಿಳಂಬವಾಗುತ್ತಿರುವದು ವಿಪರ್ಯಾಸವೇ ಸರಿ.

ನಮ್ಮ ರಾಜ್ಯದ ಕೇವಲ ಕೇಲವೆ ಕೇಲವು ಬೆರಳೆಣಿಕೆಯಷ್ಟು ರಾಜಕಾರಣಿಗಳನ್ನು ಹೂರತುಪಡಿಸಿ ಬಹುತೇಕ ರಾಜಕಾರಣೀಗಳು ತಮ್ಮ ಕ್ಷೇತ್ರಗಳಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ದಯಮಾಡಿ ರಾಜ್ಯದ ಜನಪ್ರತಿನಿಧಿಗಳು ನಮ್ಮ ಕಲ್ಯಾಣ ಕರ್ನಾಟಕ ಭಾಗವನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಕಲ್ಯಾಣ ಬದಿಗಿರಿಸಿ ಜನಸಾಮಾನ್ಯರ ಕಲ್ಯಾಣಕ್ಕೆ ಮುಂದಾಗಬೇಕಾಗಿದೆ.

ವೀರೇಶ ಅಂಗಡಿ ಗೌಡುರು

Don`t copy text!