ಮಸ್ಕಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ವೇದಿಕೆ(ಯುವ ಸೈನ)ದ ಮಸ್ಕಿ ತಾಲೂಕು ಘಟಕದ ಉಪಾಧ್ಯಕ್ಷರನ್ನಾಗಿ ಮಹಿಬೂಬ್‍ಪಾಷ ಕುಷ್ಟಗಿ ಇವರನ್ನು ತಾಲೂಕು ಅಧ್ಯಕ್ಷ ಬಸವರಾಜ.ಡಿ. ಉದ್ಬಾಳ ನೇಮಕ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ವಿರೇಶ ಮೋಚಿ, ಮಸ್ಕಿ ನಗರ ಘಟಕದ ಅಧ್ಯಕ್ಷ ಮೌನೇಶ.ಬಿ.ಮುರಾರಿ, ಸಹಕಾರ್ಯದರ್ಶಿ ಹನುಮಂತ ಚಿಕ್ಕಕಡಬೂರು, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಚಾಂದ್‍ಪಾಷ ಹಾಲಾಪೂರು, ಸಂಘಟನಾ ಕಾರ್ಯದರ್ಶಿಯನ್ನಾಗಿ ಖಾಜಾಸಾಬ್ ಇವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ನಾಡುನುಡಿ ನೆಲ ಜಲದ ಬಗ್ಗೆ ಕಾಪಾಡಬೇಕು ಹಾಗೂ ಅನ್ಯಾಯವಾದಾಗ ಹೋರಾಟ ಮಾಡಲು ಬದ್ಧರಾಗಿರಬೇಕು ಎಂದು ತಾಲೂಕು ಅಧ್ಯಕ್ಷ ಬಸವರಾಜ.ಡಿ.ಉದ್ಬಾಳ ತಿಳಿಸಿದ್ದಾರೆ.