ಗಜ಼ಲ್
ಧರ್ಮದ ಮುಖವಾಡ ಹಾಕಿ ಮೆರೆವ ಬಹುರೂಪಿಗಳು ಇವರು
ಜಾತಿಗಳ ಮೇಲೆತ್ತಿ ಪ್ರತಿಷ್ಠೆಯ ತೋರೋ ಕುರೂಪಿಗಳು ಇವರು
ದಯೆ ಇಲ್ಲದ ದೌರ್ಜನ್ಯ ತೋರುತ ಕೇಕೆ ಹಾಕಿಹರು
ಬಾಂಧವ್ಯ ಮರೆತು ಹೀನಕೃತ್ಯ ಮಾಡುವ ರಕ್ಕಸರೂಪಿಗಳು ಇವರು
ಮಾನವತೆ ಬದಿಗಿಟ್ಟು ಕ್ರೌರ್ಯವನು ಮೊಗೆದು ಎಲ್ಲೆಡೆ ತುಂಬಿಹರು
ಕರುಣೆ ಇಲ್ಲದ ನಿರ್ದಯಿ ನೀಚ ಕಟುಕರೂಪಿಗಳು ಇವರು
ಮತ್ಸರದ ವಿಷವನ್ನು ಸ್ನೇಹದಲಿ ಬೆರೆಸಿ ಮೋಜು ನೋಡಿಹರು
ಮತಾಂಧತೆಯ ಅವಿವೇಕಿಯಾಗಿ ಅಟ್ಟಹಾಸದಿ ನಡೆವ ಪಶುರೂಪಿಗಳು ಇವರು
ಕೊನೆಯನು ಕೇಳುತಿಹಳು ಕರಾಳ ದಿನಗಳಿಗೆ ನೊಂದು ಬೇಗಂ
ಕಾಪಾಡು ಪ್ರಭುವೆ ಜಗದ ಮನುಕುಲವ ಮೂಢರೂಪಿಗಳು ಇವರು
ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ