ಪುಸ್ತಕ ಪರಿಚಯ:
ಸಿಹಿಯಾಯಿತು ಕಡಲು
(ಕವನ ಸಂಕಲನ)
ಡಾ.ಶಶಿಕಾಂತ .ಆರ್.ಪಟ್ಟಣ
ನಂದಿತ ಪ್ರಕಾಶನ ; ಮೈಸೂರು
ಡಾ. ಶಶಿಕಾಂತ ಪಟ್ಟಣ ಈಗಾಗಲೇ ಕನ್ನಡ ಸಾಹಿತ್ಯ ಲೋಕಕ್ಕೆ ಕವನ ಸಂಕಲನಗಳನ್ನು ನೀಡಿದ್ದು, ‘ಸಿಹಿಯಾಯಿತು ಕಡಲು’ ಅವರ ಹೊಸ ಕವನ ಸಂಕಲನ ತಮ್ಮ ನವಿರಾದ ಕವಿತೆಗಳ ಮೂಲಕ ಕಡಲನ್ನು ಸಿಹಿಯಾಗಿಸಿದ್ದಾರೆ. ಕವನ ಸಂಕಲನವು ೬೭ ಕವಿತೆಗಳನ್ನು ಒಳಗೊಂಡಿದೆ. “ಭಾವವೇ ಪುಷ್ಪ ಪರಿಮಳ, ಹಸಿರುಹುಲ್ಲು ನನ್ನ ಕಾವ್ಯಕ್ಕೆ” ಎಂದು ಹೇಳಿರು. ಕವಿಯ ಹೇಳಿರುವುದನ್ನು ಕವನ ಸಂಕಲನದ ಪ್ರತಿ ಕವನಗಳಲ್ಲಿ ಕಾಣಬಹುದು. ಪ್ರತಿಯೊಂದು ಕವಿತೆಗಳಲ್ಲಿ ಭಾವ, ರಸ, ಮತ್ತು ಪದಗಳು ಕವಿತೆಯ ಶೋಭೆಯನ್ನು ಹೆಚ್ಚಿಸುವೆ
“ಚೆಲುವೆ ನಿನ್ನ ಭಾವಕ್ಕೆ
ಬಸಿರು ಹೊತ್ತು
ನಿತ್ಯ ಹೆತ್ತು ಕೊಡುವೆ ಕವನ”
ಎನ್ನುವ ಸಾಲುಗಳ ಕವಿತೆಗಳಲ್ಲಿ ಭಾವ ಪ್ರದಾನವಾಗಿವೆ. ಎನ್ನುವುದನ್ನು ಕವಿ ಕವನದ ಮೂಲಕವೇ ಓದುಗರ ಭಾವ ಪ್ರಪಂಚವನ್ನು ಕಲ್ಲಕುತ್ತಾನೆ. ಕಾವ್ಯವವು ಭಾವ ಪ್ರಧಾನ ಅಭಿವ್ಯಕ್ತಿ, ಭಾವವೆ ಕಾವ್ಯದ ಹುಟ್ಟಿನ ಬೀಜ ಎನ್ನನುವುದು ಕವಿಯ ಅಭಿಪ್ರಾಯ.
ಗೆಳತಿ: ತನ್ನ ಗೆಳತಿ ಮೌನ ಮಾತನಾಡಿದರೆ ನುಡಿ ಮುತ್ತು ಮತ್ತು ಮಧುರ ಭಾವದವಳು. ಭಾವದ ಕೊರತೆಗಳನ್ನು ತಡೆದು ಮೌಲ್ಯ ಸಂಪುಟವಾದವಳು ಎನ್ನುವ ಕವಿಯ ಸ್ಪಂದನ. ಅವಳು ಎನ್ನುವುದಿಲ್ಲಿ ಎಲ್ಲ ಸಹೃದಯರಿಗೂ ಆಪ್ತವಾಗುತ್ತದೆ.
ಕಣ್ಣು: ವಿರಹದಲ್ಲಿ ಪ್ರೇಯಸಿಯನ್ನು ನೆನೆದು ಕಣ್ಣಂಚಲಿ ಮೂಡಿದ ಹನಿ ಕಡಲ ಸೇರಿ, ಮುತ್ತಾಗಬಹುದಿತ್ತೇನೆ. ಆ ಹನಿ ಇಡಿ ಕಡಲನ್ನು ಸಿಹಿಯಾಗಿಸಿ ನಿಜಪ್ರೇಮದ ಶಕ್ತಿಯನ್ನು ಕವಿ ಸಾರುತ್ತಾನೆ.
ನೀನು ಮೌನ ನಾನು ಮಾತು: ಎನ್ನುವ ಕವನದ ಸಾಲುಗಳಲ್ಲಿ ಇಡೀ ಪ್ರಕೃತಿ ಕಾವ್ಯದ ಭಾಷೆಯಲ್ಲಿ ಮಾತಾಡುತ್ತದೆ. ಇಡಿ ಪ್ರಕೃತಿಯ ಕಾವ್ಯ ಭಾಷೆಯನ್ನು ಅರ್ಥಮಾಡಿಕೊಂಡು ಆಸ್ವಾಧಿಸುವ ಕವಿ ತನ್ನ ಗೆಳತಿಯ ಮೌನವನ್ನು ಅಸಹನೀಯವಾದರೂ ಕಣ ಭಾಷೆಯನ್ನು ಅರ್ಥೈಸಿಕೊಳ್ಳುವ ಸಹೃಯನಾಗುತ್ತಾನೆ.
ಯಾಕೆ ಹೀಗೆ.: ಹೃದಯವನ್ನು ಕದ್ಧ ಗೆಳತಿಗೆ ಪ್ರಶ್ನಿಸುತ್ತ ಅದೆಷ್ಟೋ ಭಾವಗಳಿಗೆ ಹೆರಿಗೆಯಾಗಬೇಕಿತ್ತು. ಕವನ ಕಾವ್ಯಕ್ಕೆ ಹೆಸರಿಡಬೇಕಿತ್ತು ಎಂದು ಪ್ರಶ್ನಿಸುತ್ತ ಭಾವಗಳನ್ನು ಹರಿಬಿಡು ಮಮತೆಯಮಡಿಲಲ್ಲಿ ಕವನಗಳು ಹಬ್ಬಿರಲಿ ಎಂದು ತಿಳಿಹೇಳುವುದು ಹುಸಿ ಮುನಿಸಿನ ಭಾವವು ಎದ್ದು ಕಾಣುತ್ತದೆ.
ವೇದನೆ : ಕವಿಯ ವೇದನೆ ಭಿನ್ನವಾಗಿದೆ.
ಭಾವ ಬಸುರಿಗೆ
ನಿತ್ಯ ಕಾವ್ಯದ ಹೆರಿಗೆ ಬೇನೆ
ಹರುಷ ತಂದಿದೆ ಎಲೇ ಭಾವವೆ
ಇಳಿದು ಬಂದಾ ಪ್ರಸವ ವೇದನೆ ಕಡಿಮೆ ಮಾಡಲು ಸ್ಪೂರ್ತಿ
ಪ್ರೀತಿ ಎಂದು ಹೇಳುವ ಕವಿ.
ಚೆಲುವೆ ಕವನದಲ್ಲಿ ಕಾವ್ಯಕ್ಕೂ ಚೆಲುವೆಗೂ ಹೋಲಿಸಿ ಕವಿ ಕಾವ್ಯ ಕನ್ನಿಕೆಯನ್ನು ಸೃಷ್ಟಿಸಿದ್ದಾರೆ.
ನಿನ್ನ ಕಾವ್ಯ
ನಿನ್ನಷ್ಟೆ ಸುಂದರ
ತಳುಕು ಬಳಕುವ ಸಾಲು
ಪದ ಶಬ್ದಗಳ ಮೈಮಾಟ
ವರ್ಣಿಸುತ್ತ
ಪ್ರೀತಿ ಸ್ನೇಹವನ್ನು ಹೊತ್ತ
ಚೆಲುವೆಯನ್ನೇ ಕಾವ್ಯವಾಗಿಸುತ್ತಾರೆ.
ಪ್ರೀತಿ : ಕವನದಲ್ಲಿ ಪ್ರೀತಿ ಅರಳುವ ಪರಿಯನ್ನು ಭಾವಪ್ರಪಂಚದಲ್ಲಿ ಎಲ್ಲ ಸಂತಸವನ್ನು ಕಂಡು ವಿರಹದಲ್ಲಿಯ ಮಧುರ ನೆನಪಾಗಿ ಕಾಡಿ ಮನಸ್ಸಿಗೆ ಖುಷಿ ನೀಡುವ ಪ್ರೀತಿಯ ಪರಿಭಾಷೆಯೆ ವಿಶಿಷ್ಟ ಎನ್ನುವುದನ್ನು ಸರಳವಾಗಿ ನಿರೂಪಿಸಿದ್ದಾರೆ.
ಹೇಳ ಬೇಕೆಂದಿದ್ದೆ : ಕವನದಲ್ಲಿ ಒಲವಿನ ಭಾಷೆಯಲ್ಲಿ ಪ್ರೇಮ ನಿವೇದಿಸಿಕೊಳ್ಳಬೇಕೆಂದ ಕವಿಯ ಆಸೆ ಸಮಾಧಿ ಸೇರಿರುವ ನೋವನ್ನು ಕವನದಲ್ಲಿ ತೋಡಿಕೊಳ್ಳುತ್ತಾರೆ.
ಮನದ ಕುಲುಮೆಯಲ್ಲಿ
ನಿರಂತರ
ಕಾಯ್ದ ಭಾವಗಳು ತಡಕಾಡುತ್ತವೆ.
ಆದರೆ ಅವಳೆದುರು ನಿವೇದಿಸಿಕೊಳ್ಳುವಾಗ ಮೊದಲ ತಡಬಡಿಕೆ ಸುಂದರವಾಗಿ ವ್ಯಕ್ತವಾಗುತ್ತದೆ.
ಪ್ರಕೃತಿ ಎಲ್ಲಿ ಇದ್ದೆ: ಪ್ರಕೃತಿಯ ಎಲ್ಲ ಬದಲಾವಣೆಯನ್ನು ಕಾವ್ಯದ ವಸ್ತುವಾಗಿ ಮಾಡಿಕೊಂಡು ನಲ್ಲೆಯನ್ನು ಕರೆಯುವ ಕವಿ ಬಾರೆ ಗೆಳತಿ
ಒಲವ ಗೂಡಿಗೆ
ಪ್ರೇಮ ಸವಿ ಸುಖ ಸವಿಯುವ
ನನಗೆ ನೀನು
ನಿನಗೆ ನಾನು
ಹರುಷ ಹಂಚಿ ಬಾಳುವ
ಎನ್ನುವ ಉದಾತ್ತ ಚಿಂತನೆ ಸಾರುತ್ತಾರೆ.
ಕಡಲುಸಿಹಿಯಾಯಿತು : ಸಮುದ್ರಯಾನ ಮಾಡುತ್ತ ಕವಿ ಪ್ರೇಯಸಿಯ ನೆನಪಲ್ಲಿ ಕಣ್ಣು ಹನಿಯೊಡೆಯುತ್ತದೆ. ಉದುರಿದ ಕಣ್ಣಹನಿಯನ್ನು ಪ್ರೇಯಸಿಗೆ ಉಡುಗರೆಯಾಗಿ ಕೊಡ ಬಯಸಿದ ಕವಿಗೆ ಕಣ್ಣಹನಿ ಸಮುದ್ರ ಸೇರುತ್ತದೆ.ಅದು ಮುತ್ತಾಗಬಹುದಿತ್ತೇನೋ ಆದರೆ ಅದು ಇಡಿ ಕಡಲನ್ನು ಸಿಹಿ ಮಾಡುತ್ತದೆ. ಅಂಥ ಶಕ್ತಿ ಪ್ರೀತಿಯ ಕಣ್ಣಿರಿಗಿದೆ ಎಂದು ಕವಿ ವಿಭಿನ್ನವಾಗಿ ಆಲೋಚಿಸುತ್ತಾರೆ.
ನಂದದಿರೇ ಪ್ರೇಮ: ಉರಿಬರಲಿ ಸಿರಿ ಬರಲಿ
ನಂದದಿರೆ ಪ್ರೇಮ
ಎಂದು ಆಶಿಸುವ ಕವಿ ಎರಡು ಹೃದಯಗಳ ಬೆಸೆವ ಕೊಂಡಿಯಾದ ಮೌನ ಮಾತಾಗಿ, ಮಾತು ಪ್ರೀತಿಯ ಮಂತ್ರವಾಗಿ ಪ್ರೇಮ ಕಾವ್ಯ ಹುಟ್ಟುತ್ತದೆ. ಎಂದು ಬರೆಯುತ್ತಾರೆ.
ನಿನ್ನ ಮುಡಿಗೆ : ಸಖಿಯ ಮುಡಿಗೆ ಭಾವಕುಸುವವನ್ನಿಟು ಅಲಂಕರಿಸುವ ಕವಿ ಒಲವಿನ ಭಾವಬದ್ರತೆಯನ್ನು ಕೊಟ್ಟು ಕಾವ್ಯ ಪುಷ್ಪವನ್ನು ಕೈಯೊಳಗಿಟ್ಟು ದುಂಬಿಯಾಗಿ ಪ್ರೀತಿ ಜೇನು ಸವಿಯ ಬೇಕೆಂದ ಕವಿಯ ಕಲ್ಪನೆ ಬಳಸಿದ ಪ್ರತಿಮಗಳು ಅಪ್ರತಿಮ.
ಮುನ್ನುಡಿ: ಕೃತಿಗೆ ಮುನ್ನುಡಿ ಬೆನ್ನುಡಿಯಂತೆ, ಕವಿಗೆ ಗೆಳತಿಯ ಕನಸುಗಳನ್ನು ಮುನ್ನುಡಿಯಾಗಿಸಿ, ಪ್ರೀತಿಯ ರಕ್ಷಾಕವಚದ ಬೆನ್ನುಡಿಯಾಗಿಸಿಕೊಂಡು ಬಾಳುವ ಆಶೆಯ ವಿಶೇಷ.
ಅವಳು: ಹೆಣ್ಣಿನ ಮನದ ಭಾವ ತುಮಲಗಳು ಆಸೆ ಕನಸುಗಳು ಶಬ್ದ ಕುಲುಮೆಯೊಳು ಕನ ಕಾವ್ಯ ರಚಿಸಿ ಸಂಭ್ರಮಪಡುವ ಅವಳ ಒಳಮನವನ್ನು ಅರ್ಥಮಾಡಿಕೊಂಡು ಅವಳನ್ನು ವ್ಯಾಖ್ಯಾನಿಸುತ್ತಾರೆ.
ಶುಭೋದಯ: ಸಂಸಾರ ಸಾಗರದಿ ವಿಷಯ, ನಶೆ ಪಯಣ ಮುಗಿಸಿ ಹೂಮನಸ್ಸಿನಿಂದ, ಒಲುಮೆ ಗೀತೆ ಹಾಡುವ ಮೂಲಕ ದಿನದ ಶುಭಾರಂಬ ಮಾಡಬೇಕೆಂದು ಕವಿಬಯುಸುತ್ತಾನೆ.
ಏಕೆ ಮುಚ್ಚಿಡುವೆ?: ಮನದಲ್ಲಿ ಪ್ರೀತಿಯನು ಅಡಗಿಸದೆ, ಭಾವಗಳನ್ನೆಲ್ಲ ಕಾವ್ಯ ಕಲರವದಿ ಹರವಿ ಬಿಡು. ಅವು ಸ್ನೇಹದ ಅಚ್ಚುಗಳಾಗಿ ಸಿಗಲಿ ಎಂದು ಕವಿ ಬಯಸಿತ್ತಾನೆ.
ಭಾವ ನೀನು: ಭಾವಗಳು ಹೇಗೆ ಕವಿಗೆ ತೊಂದರೆ ಕೊಡುತ್ತವೆ. ಕವಿಯಿಂದ ಏನೆಲ್ಲ ಬಯಸುತ್ತವೆ ಎನ್ನುವುದನ್ನು ವರ್ಣಿಸುತ್ತಾನೆ.
ಮಾರ್ಗ: ಒಂಟಿಯಾಗಿ ನಡೆದ ಗೆಳತಿ ದಿಟ್ಟ ಹೆಜ್ಜೆಯನಟ್ಟು ದೀರ್ಘ ಪಯಣದಲಿ ಸಾಗಿ ಗುರಿ ತಲುಪವಲ್ಲಿ ಬರುವ ಎಡುರು ತೊಡುರುಗಳನ್ನು ದಾಟಿ ಎಲ್ಲಿ ರಾಜಿಮಾಡಿಕೊಳ್ಳದೇ ಭವ್ಯ ಕೋಟೆಯ ಕಟ್ಟಿದ ಗೆಳತಿಯ ಬಗ್ಗೆ ಹೆಮ್ಮೆಯ ಭಾವದ ಕವನ ಮೂಡಿಬಂದಿದೆ.
ಚಿಗುರು ಹೆಮ್ಮರ: ಚಿಗುರು ಹೆಮ್ಮರವಾಗಿ ಬೆಳೆಯಲು ಹೆಗೆಲ್ಲ ಪರೋಪಕಾರಿಯಾಗಿ ತನ್ನ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುತ್ತದೆ ಎನ್ನುವ ವಿವರಣೆಯನ್ನು ನೀಡುತ್ತ ಪರಿಸರ ಕಾಳಜಿಯನ್ನು ಮೆರೆಯುತ್ತಾರೆ.
ನಾನು ಮತ್ತು ಭಾವಗಳು: ಕವಿ ಏಕಾಂಗಿಯಾಗಿ ಒಂಟಿತನವನ್ನು ಅನಂಭಿಸುತ್ತಿಲ್ಲ ಸೂರ್ಯ ಮುಳುಗಿದರೆ ಸಾಕು ಭಾವಗಳೆಲ್ಲ ಯಾಂತ್ರಿಕ ಬದುಕಿನ ಜಂಜಡದಲ್ಲಿ ಅಬ್ಬರದಲ್ಲಿ
“ಕಾರು ಜೀಪಿನ ಚಕ್ರಗಳ
ಕೆಳಗೆ ಸದ್ದಿಲ್ಲದೇ ಮಲಗುತ್ತವೆ”ೆ
ಒಂಟಿತನದ ಬೆಸರವಿಲ್ಲ. ಅವು ರಾತ್ರಿಗೆ ಸಂಗಾತಿಗಳಾಗಿ ಬರುತ್ತದೆ ಭಾವಗಳೊಂದಿಗೆ ಕವಿ ಬದುಕಲು ಇಚ್ಚಿಸುತ್ತಾನೆ. ಬದುಕಿನ ಗದ್ದಲಲಿ ಮನುಷ್ಯ ಒಂಟಿ ಭಾªರಹಿತವಾಗಿ, ಸಂವೇದನಾರಹಿತವಾಗಿ ಕಳೆಯುವ ಒತ್ತಡಗಳ ಅನಾವರಣವನ್ನು ಕವಿತೆ ಮಾಡುತ್ತದೆ.
ಮರಗು ತಂದಿತ: ಮಿರಗಮಳೆ ಇಳೆಯನ್ನು ತಣಿಸಿದರೆ ಧರೆಯ ಸಂಭ್ರಮದಲ್ಲಿ ಪ್ರಾಣಿ, ಪಕ್ಷಿ, ರೈತ ಹೇಗೆ ಭಾಗಿಯಾಗುತ್ತಾರೆ. ಎನ್ನುವುದರ ವರ್ಣನೆ ಮನೋಜ್ಞವಾಗಿದೆ.
ಸೊನೆ ಹತ್ತಿತು ಮಳೆ
ಸಾಣಿ ಹಿಡಿಯಲು ಮುಗಿಲು
ಎನ್ನುವಲ್ಲಿ ಮುಗಿಲು ಸಾಣಿಗೆ ಹಿಡಿದು ತುಂತುರಿನ ಸಂಚನವನ್ನು ಮಾಡುತ್ತಿದೆ ಎನ್ನುವ ರೂಪಕವನ್ನು ಬಳಸುವುದರ ಮೂಲಕ ಪ್ರಕೃತಿಗೂ ಮನುಷ್ಯನ ಕಾರ್ಯಕ್ಕೂ ಸಾರ್ಮಥ್ಯವನ್ನು ಕಲ್ಪಿಸಿ ಕವಿತೆಯ ಸೊಬಗನ್ನು ಹೆಚ್ಚಿಸುತ್ತಾನೆ.
ಏನೆನ್ನಲಿ: ಕವಿಯ ಕಾವ್ಯಕ್ಕೆ ಪ್ರೇರಣೆಯಾದ ಭಾವ ಚೆಲುವೆಗೆ ಏನೆನ್ನಬೇಕೆಂದು ಕವಿ ಪ್ರಶ್ನಿಸುತ್ತಾನೆ.
ಯಾವ ಭಾವದ : ಯಾವ ಘಳಿಗೆ
ಚಿಗುರೊಡೆಯಿತು ತಂಪು ನೆರಳಿನ ಮರವು
ಎನ್ನುವ ಕವಿ ಸ್ನೇಹ, ಪ್ರೇಮ, ಪ್ರೀತಿಯ ಭಾವಗಳು ಹೃದಯ ನೆಲದಲ್ಲಿ ಚಿಗುರೊಡೆದರೆ ಅದು ಸದಾ ತಂಪು ನೀಡುವ ಮರವಿÀದ್ದಂತೆ ಆ ಮರದಿಂದ ಇನ್ನೊಂದು ಪ್ರೀತಿಯ ಸಸಿ ಹುಟ್ಟಲು ಕಾರಣವಾಗುವಂತೆ ಸದಾಶಯವನ್ನೆ ವ್ಯಕ್ತಪಡಿಸುತ್ತಾನೆ.
ಕದ್ದದು: ಮನಕ್ಕೆ ಹತ್ತಿರವಾಗಿ ಗೆಳತಿ ಮನಸ್ಸನ್ನು ಕದ್ದಳೆಂದು ಕವಿ ಭಾವಿಸಿದ್ದರೆ ಅವಳು ಇವರ ಕವನವನ್ನು ಕದ್ದಳೆಂದು ಕವಿ ಆಕ್ಷೇಪಿಸುತ್ತಾನೆ.
ಒಗ್ಗಟ್ಟು: ಒಗಟ್ಟಾಗಿ ಕಾಣುವ ಗೆಳತಿಯನ್ನು ಕವಿ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಬಿಟ್ಟು ನಿನ್ನ ಎದೆಯ ಭಾವ ಶಬ್ದಗಳ ಗಂಟು ಆಗ ಅವಳನ್ನು ಅರ್ಥಮಾಡಿಕೊಳ್ಳಲು ಸುಲಭವೆಂದು ಕವಿ ಆಶಿಸುತ್ತಾನೆ.
ಹೆರಿಗೆ: ಭಾವಕ್ಕೆ ಬಸಿರು ಹೊತ್ತು ನಿತ್ಯಕವನದ ಹೆರೆಗೆಯಾದ ಕವಿ ಕವನವನ್ನು ಅಳುವ ಕುಸಿಗೆ ಶುಭ್ರಭಾವದ ಬಟ್ಟೆಯಿಂದ ಆರೈಕೆಮಾಡು.
ಹಣತೆ: ಭಾವವೆ ಕಾವ್ಯದ ಒಡತಿ ಎನ್ನುವ ಕವಿ ಅವಳ ಕವಿಯ ಗೆಳತಿ ಮಾನವೀಯ ಮೌಲ್ಯಗಳೇ ದೀಪವಾಗಿ ಬೆಳಗಲು ಜ್ಯೋತಿ, ಬುದ್ದಬಸವರ ತತ್ವಚಿಂತನೆಗಳ ತೈಲತುಂಬಿದ ಹಣತೆ.
ಹೀಗೆ ಒಟ್ಟು ಕವಿತೆಗಳು ರಮ್ಯ ಶೈಲಿಯಲ್ಲಿ ಭಾವಪೂರ್ಣವಾಗಿ ಮೂಡಿಬಂದಿವೆ. ಕವಿತೆಯ ಸಾಲುಗಳು ಓದುಗನನ್ನು ಮತ್ತೆ ಮತ್ತೆ ಕಾಡುತ್ತವೆ.
–ಡಾ.ನಿರ್ಮಲಾ ಬಟ್ಟಲ
ಬೆಳಗಾವಿ