ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತರಿಂದ ಮನವಿ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತರಿಂದ ಮನವಿ.

e -ಸುದ್ದಿ ಲಿಂಗಸುಗೂರು

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರ ಸಂಘ (ಸಿಐಟಿಯು ) ಲಿಂಗಸುಗೂರು ತಾಲೂಕು ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಮ್ಮ ಕಾರನೂರು ರವರಿಗೆ ಮನವಿ ಸಲ್ಲಿಸಿದರು.

ಅಂಗನವಾಡಿ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವಹಿಸುವುದನ್ನು ವಿರೋಧಿಸಿ ಹಾಗೂ ಬೆಂಗಳೂರಿನಲ್ಲಿ ಇದೇ ತಿಂಗಳು 4 ರಿಂದ ನಡೆಯಲಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುವ ಕುರಿತು ಹಾಗೂ ಸ್ಥಳೀಯ ಹಲವಾರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.

ರಾಜ್ಯ ಸರ್ಕಾರವು ಅಂಗನವಾಡಿ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೀಡುವ ಕುರಿತು ನಿರ್ಧರಿಸಿದ್ದು ಇದರಿಂದಾಗಿ ಐ.ಸಿ.ಡಿ.ಎಸ್ ಯೋಜನೆಗೆ ಹಾಗೂ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕರಿಗೆ ತೊಂದರೆಯಾಗುತ್ತದೆ . ಮುಂದಿನ ಬಜೆಟ್ ನಲ್ಲಿ ಅಂಗನವಾಡಿ ನೌಕರರ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಾರ್ಚ್ 4 ರಿಂದ ಬೆಂಗಳೂರಿನ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಕಾರಣ ಲಿಂಗಸುಗೂರು ತಾಲೂಕು ಅಂಗನವಾಡಿ ಶಿಕ್ಷಕಿಯರು 4 ರಿಂದ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.

ಅಂಗನವಾಡಿ ನೌಕರರ ಇತರ ಬೇಡಿಕೆಗಳು. ಅಂಗನವಾಡಿ ಕೇಂದ್ರಗಳಿಗೆ ನೀಡುವಂತೆ ಮೊಟ್ಟೆ ಹಣವನ್ನು ಬಾಲವಿಕಾಸ ಸಮಿತಿಗೆ ಜಮಾ ಮಾಡಬೇಕು ಹೊಸಪೇಟೆ ಗುತ್ತಿಗೆದಾರರನ್ನು ರದ್ದುಪಡಿಸಬೇಕು, 2010 ರಲ್ಲಿ ಶ್ರೀ ಶಕ್ತಿ ಭವನ ಹಾಗೂ 2005ರಲ್ಲಿ ಬಾಲಭವನ ಮಂಜೂರಾಗಿದ್ದು ತಕ್ಷಣ ಕೆಲಸ ಪ್ರಾರಂಭಿಸಬೇಕು. ಆಟಿಕೆ ಸಾಮಾನುಗಳನ್ನು ಇಲಾಖೆಯಿಂದಲೇ ಅಂಗನವಾಡಿ ಕೇಂದ್ರಗಳಿಗೆ ನೇರವಾಗಿ ತಲುಪಿಸಲು ವ್ಯವಸ್ಥೆ ಕಲ್ಪಿಸಬೇಕು. ಇಲಾಖೆ ನಿಯಮಾನುಸಾರ ಮೇಲ್ವಿಚಾರಕಿಯರ ವರ್ಗಾವಣೆ ಮಾಡಬೇಕು ಹಾಗೂ ಖಾಲಿ ಇರುವ ಅಂಗನವಾಡಿ ಶಿಕ್ಷಕರ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕು. ಸೇವಾ ಜೇಷ್ಠತೆ ಆಧಾರದ ಮೇಲೆ ವೇತನ ಪದ್ಧತಿ ಜಾರಿಯಾಗಬೇಕು. ಅಂಗನವಾಡಿ ಕೇಂದ್ರಗಳನ್ನು ಎಲ್.ಕೆ.ಜಿ -ಯು.ಕೆ.ಜಿ ಕೇಂದ್ರಗಳಾಗಿ ಮಾರ್ಪಡಿಸಿ ಪೂರ್ವ ಪ್ರಾಥಮಿಕ ಶಾಲೆಗಳಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ನ ಗೌರವ ಅಧ್ಯಕ್ಷ ಶೇಕ್ಷಾ ಖಾದ್ರಿ, ಅಧ್ಯಕ್ಷೆ ಲಕ್ಷ್ಮೀ ನಗನೂರು, ಕಾರ್ಯದರ್ಶಿ ಮಹೇಶ್ವರಿ ಸೇರಿದಂತೆ ಹಲವಾರು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

Don`t copy text!