ಹೆಣ್ಣಿನ ಮಹಿಮೆ.
ಹೆಣ್ಣು ಒಲಿದರೆ ನಾರಿ
ಹೆಣ್ಣು ಮುನಿದರೆ ಮಾರಿ
ಹೆಣ್ಣಿನಿಂದಲೇ ಈ ಜೀವನವೆಲ್ಲ
ಹೆಣ್ಣಿನಿಂದಲೇ ಈ ಬಾಳೆಲ್ಲ.
ಹೆಣ್ಣು ತಾಯಾಗಿ ಬಂದು
ಮಗಳಾಗಿ ಹುಟ್ಟಿ
ಸೋದರಿಯಾಗಿ ಬೆಳೆದು
ಕೊಟ್ಟ ಮನೆಗೆ ಬೆಳಕಾಗಿ
ಬಾಳುವಳು
ಕೊಟ್ಟ ಮನೆಯಲ್ಲಿ ಎಲ್ಲರೂ ತನ್ನವರೆನುತ
ಅತ್ತೆ ಮಾವಂದಿರ ಸೇವೆಯ ಮಾಡುತ
ಹುಟ್ಟಿದ ಮನೆಗೂ ಕೊಟ್ಟ ಮನೆಗೂ
ಹೆಸರು ತರುವಳು ಹೆಣ್ಣು
ಪ್ರಕೃತಿಯೇ ಹೆಣ್ಣು
ಹೆಣ್ಣೇ ಪ್ರಕೃತಿ ಆಗಿಹಳು
ಸೃಷ್ಟಿ ಸ್ಥಿತಿ ಲಯಕ್ಕೆಲ್ಲ
ಪ್ರಕೃತಿಯೇ ಕಾರಣವಾಗುವಂತೆ
ಹೆಣ್ಣೇ ಎಲ್ಲಕೂ ಕಾರಣ ವಾಗುವಳು
ಕಾರ್ಯೇಶು ದಾಸಿ ಭೂಜೇಶು ಮಾತ
ರೂಪೇಶು ಲಕ್ಷ್ಮಿ ಸಲಹೇಶು ಮಂತ್ರಿ
ಕ್ಷಮಯಾ ಧರಿತ್ರಿ ಶಯನೇಶು ರಂಭಾ
ಎನುವಂತೆ ಎಲ್ಲವೂ ತಾನೇ ಆಗಿಹಳು
ಹೆಣ್ಣಿನ ಹೃದಯ ಹೂವಿನಂತೆ ಕೋಮಲ
ಮನಸು ಬೆಣ್ಣೆಯಂತೆ ಮೃದು
ಸಹನಾ ಮೂರ್ತಿ ಯವಳು
ಸ್ವಾಭಿಮಾನಕ್ಕೆ ಧಕ್ಕೆ ಯಾದರೆ
ರಣಚಂಡಿಯಾಗುವಳು
ಅಂತೆಯೇ ಹೆಣ್ಣು ಹೆಣ್ಣಲ್ಲ
ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸಾಕ್ಷಾತ್
ಕಪಿಲ ಸಿದ್ದ ಮಲೈಯನೆಂದು
ನಮ್ಮ ಶರಣರು ಹೇಳಿಹರು
ಹೆಣ್ಣಿದ್ದ ರೆ ಈ ಜಗವೆಲ್ಲ
ಹೆಣ್ಣಿಲ್ಲ ದಿದ್ದರೆ ಈ ಜಗವೇ ಇಲ್ಲ.
–ಮೀನಾಕ್ಷಿ ವೀ.ತಳಂಗೆ ಸೋಲಾಪುರ