ಕ್ಷಮಯಾ ಧರಿತ್ರಿ
ಸೃಷ್ಠಿಯ ಅಧ್ಭುತ
ಮನಸಿಗೆ ನಿಲುಕದ
ಸೋಜಿಗದ ಸೂಕ್ಷ್ಮ ಜೀವಿ!!
ಮಿನುಗುವ ಸ್ತ್ರೀ ರತ್ನಾ…
ಮಮತೆಯ ಕಡಲು
ಪ್ರೀತಿಯ ಕಣಜ
ದಯಾ ಸಾಗರಿ .
ವಾತ್ಸಲ್ಯದ ನಿಧಿ ಸ್ತ್ರೀ
ಶಾಂತಿಯ ಸ್ವರೂಪಿ
ಕ್ರಾಂತಿಯ ಜ್ಯೋತಿ
ಕ್ಷಮಯಾಧರಿತ್ರಿ
ಮಾತೆ !!ಮಗಳು !ಮಡದಿ!!
ಜೀವನದ ಅವಿಭಾಜ್ಯ ಅಂಗ
ಅವಳೆ ಈ ಜಗದ ಕಣ್ಣು…
ಜಗದ ಮಾಯೇ ಹೆಣ್ಣು
ಕ್ಷಮೆಯ ಧರಿತ್ರಿ
ಮಮತಾ ಮಯಿ
ನಿಮ್ಮ ಮನೆಯ ಮುಂದೆ
ನಿಂತೆವು ಅಣ್ಣದಿರ..
ಕೇಳುವೆವು ಬರೀ ಪ್ರೀತಿ
ನಿನ್ನೆಯದಲ್ಲ ಹೊಸದೇನಲ್ಲ
ಒಂದೇ ಮಾತು.
ನಿಮ್ಮಂತೆಯೇ ನಾನೂ
“ಬದುಕಿ ಬದುಕಲು ಬಿಡಿ”
ನಿಮ್ಮನೆಯ ಮಗಳಾಗಿ
ಇರುವೆವು ನಗುತ್ತಾ
ಅನವರತ ನಿಮ್ಮಂತ
ನಗು ನಗುತ್ತಾ
–ಕವಿತಾ ಮಳಗಿ ಕಲಬುುರ್ಗಿ