ಹೊಳೆಹೊನ್ನೂರು ಕಾಲೇಜಿಗೆ ನ್ಯಾಕ್ ಕಮೀಟಿಯಿಂದ ಬಿ.ಪ್ಲಸ್ ಗ್ರೇಡ್ ಪ್ರಧಾನ
e-ಸುದ್ದಿ ಶಿವಮೊಗ್ಗ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಳೆಹೊನ್ನೂರು,ಭದ್ರಾವತಿ ತಾಲ್ಲೂಕು,ಶಿವಮೊಗ್ಗ ಜಿಲ್ಲೆಯ ಸದರಿ ಕಾಲೇಜು ಮೂರನೆ ಹಂತದ ನ್ಯಾಕ್ ಪ್ರಕ್ರಿಯೆಗೆ ಒಳಪಟ್ಟು ದಿನಾಂಕ 8,9 ಮಾರ್ಚ್ 2022ರಂದು ಪೀರ್ ಸಮಿತಿಯು ಕಾಲೇಜಿಗೆ ಬೇಟಿ ನೀಡಿ ಪರಿಶೀಲನೆ ಮತ್ತು ಮೌಲ್ಯಮಾಪನ ಮಾಡಿ ಬಿ ಪ್ಲಸ್ ಶ್ರೇಣಿಯನ್ನು ನೀಡಿದೆ ಎಂದು ಪ್ರಾಚಾರ್ಯ ಡಾ.ಎಚ್.ಎಸ್ ವಿರೂಪಾಕ್ಷಪ್ಪ ತಿಳಿಸಿದರು.
ವಿದ್ಯಾರ್ಥಿಗಳಿಗೆ ಶಿಸ್ತು ಬದ್ದ ಅಧ್ಯಯನ, ಸಮಗ್ರ ವಿಷಯದ ಮನವರಿಕೆ, ಪ್ರಸಕ್ತ ಕಾಲದ ಶೈಕ್ಷಣಿಕ ಸವಾಲುಗಳನ್ನು ಹಿಮ್ಮೆಟ್ಟಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವಲ್ಲಿ ಕಾಲೇಜಿನ ಉಪನ್ಯಾಸ ವರ್ಗ ಹಗಲಿರುಳು ಶ್ರಮಿಸಿದ ಪ್ರತಿಫಲವಾಗಿ ನಮ್ಮ ಕಾಲೇಜಿಗೆ ನ್ಯಾಕ್ ತಂಡದಿಂದ ಬಿ ಪ್ಲಸ್ ಶ್ರೇಣಿ ಸಿಕ್ಕಿದೆ ಎಂದು ಡಾ.ಎಚ್.ಎಸ್ ವಿರೂಪಾಕ್ಷಪ್ಪ ಅಭಿಮಾನದಿಂದ ತಿಳಿಸಿದ್ದಾರೆ.
ಉಪನ್ಯಾಸಕರಾದ ರಾಜಪ್ಪ, ಮಂಜಪ್ಪ, ಶಿವಕುಮಾರ, ಸತೀಶ ಕುಮಾರ, ಡಾ.ಸಹನಾ, ಡಾ.ರೋಹನ್ ಡಿ, ಡಾ.ರಾಜು ನಾಯ್ಕ್, ಅಶ್ವಿನಿ, ಗಣೇಶ, ಡಾ.ಆಸ್ಮ ಮೇಲಿನಮನಿ, ಡಾ.ಸಂಗೀತಾ ಬಗಲಿ, ಕುಮಾರ, ಬಾರ್ಗವಿ, ಮಹದೇವ ಹಾಗೂ ವಿದ್ಯಾರ್ಥಿಗಳು ಇದ್ದರು.