14 ನೇ ಶರಣತ್ತತ್ವ ಕಮ್ಮಟ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರಿಂದ ಚಾಲನೆ

14 ನೇ ಶರಣತ್ತತ್ವ ಕಮ್ಮಟ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರಿಂದ ಚಾಲನೆ

e-ಸುದ್ದಿ ಲಿಂಗಸುಗೂರು

ಲಿಂಗೈಕ್ಯ ಶರಣೆ ಪುಟ್ಟಮ್ಮ ಲಿಂಗೈಕ್ಯ ಶರಣ ಬಸವರಾಜಪ್ಪ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ (ರಿ) ಹಾಗೂ ಬಸವ ಬಳಗ (ರಿ) ದಾವಣಗೆರೆ ಇವರು ಲಿಂಗಸುಗೂರಿನ ಚಿತ್ತರಗಿ ವಿಜಯಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ಆಯೋಜಿಸಿದ 14 ನೇ ಶರಣತ್ತತ್ವ ಕಮ್ಮಟ ಕಾರ್ಯಕ್ರಮದ ಷಟಸ್ಥಲ ಧ್ವಜಾರೋಹಣ ದಾವಣಗೆರೆಯ ಬಸವ ಬಳಗದ ಶರಣ ವಿ. ಸಿದ್ದರಾಮಣ್ಣನವರು ನೆರವೇರಿಸಿದರು.

ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿವಿಧ ಮಠಗಳ ಶರಣರು ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ಟಿ‌.ರುದ್ರಪ್ಪನವರು ರಾಜ್ಯದ 13 ಕಡೆಗಳಲ್ಲಿ ಬೆಂಗಳೂರು,ಮೈಸೂರು, ಧಾರವಾಡ, ಹುನುಗುಂದ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶರಣತ್ತತ್ವ ಕಮ್ಮಟಗಳು ಅರ್ಥ ಪೂರ್ಣವಾಗಿ ಯಶಸ್ವಿಯಾಗಿ ಜರುಗಿದ್ದು ಲಿಂಗಸುಗೂರಿನ ವಿಜಯಮಹಾಂತೇಶ್ವರ ಮಠದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ 14 ನೇ ಕಾರ್ಯಕ್ರಮವಾಗಿದ್ದು ಕಾರ್ಯಕ್ರಮದ ಯಶಸ್ವಿಗೆ ಶರಣ ಬಂಧುಗಳ ಸಹಕಾರ ಬಹಳ ಮುಖ್ಯ ಎಂದು ಹೇಳಿದರು.

ನಂತರ 14 ನೇ ಶರಣತ್ತತ್ವ ಕಮ್ಮಟ ಕಾರ್ಯಕ್ರಮದ ಅನುಭಾವವನ್ನು ಕುರಿತು ಮಾತನಾಡಿದ ಶರಣ ಶ್ರೀ ಡಾ.ಶಶಿಕಾಂತ ಕಾಡ್ಲೂರು ಬಸವತತ್ವ ಹಾಗೂ ಶರಣರ ಕುರಿತು ಸಮಗ್ರವಾಗಿ ವಿವರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಮ.ನಿ.ಪ್ರ ಗುರುಮಹಾಂತಸ್ವಾಮಿಗಳು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಲಕಲ್ ಇವರು ವಹಿಸಿದ್ದರು. ಅದೇ ರೀತಿಯಾಗಿ ಪೂಜ್ಯ ಶ್ರೀ ಮ.ನಿ.ಪ್ರ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪ ಲಿಂಗಸುಗೂರು, ಪೂಜ್ಯ ಶ್ರೀ ಮ‌.ನಿ.ಪ್ರ ಡಾ.ಬಸವಲಿಂಗ ಮಹಾಸ್ವಾಮಿಗಳು, ಶ್ರೀ ವಿಜಯ ಮಹಾಂತೇಶ್ವರ ತೀರ್ಥ ಶಿರೂರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಚ್ಚಪ್ಪ ಮಾಸ್ಟರ್ ಅಧ್ಯಕ್ಷರು ಬಸವ ಬಳಗ ದಾವಣಗೆರೆ ರವರು ವಹಿಸಿದ್ದರು.

ಅನುಭಾವವನ್ನು ಡಾ. ಶಶಿಕಾಂತ್ ಕಾಡ್ಲೂರು ಶರಣ ನಾಗರಾಜ್ ತಿಪ್ಪಣ್ಣ ಪ್ರೇಮ್ ಸಿಂಗ್ ಸೇರಿದಂತೆ ಅಪಾರ ಶರಣ ಬಂಧುಗಳು ಭಾಗವಹಿಸಿದ್ದರು.ವಚನ ಸಂಗೀತ ಕಾರ್ಯಕ್ರಮವನ್ನು ದಾವಣಗೆರೆಯ ಬಸಾಪುರದ ಸಂಗೀತ ಕಲಾಲೋಕ ತಂಡದಂದಿ ನಡಸಿಕೊಡಲಾಯಿತು.

Don`t copy text!