ಸುವಿಚಾರ
“ನಮ್ಮ ಬಾಯಿಯನ್ನು ಅರೋಗ್ಯಯುತವಾಗಿಟ್ಟು ಕೊಂಡು ಸಂತಸದಿಂದ ಇರೋಣ “
ಇಂದು ವಿಶ್ವ ಬಾಯಿಯ ಅರೋಗ್ಯ ದಿನ ಮತ್ತು ಅಂತಾರಾಷ್ಟ್ರೀಯ ಸಂತಸದ ದಿನ. ನೋಡಿ ಎರಡೂ ಕೂಡ ಒಂದೇ ದಿನ ಬಂದಿದೆ. ಅರ್ಥವೇನೆಂದರೆ ಬಾಯಿಯ ಸ್ವಚ್ಛತೆಗೆ ಗಮನಕೊಡಬೇಕು ಮತ್ತು ಹಲ್ಲುಗಳು ಬಾಯಿಯ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವುದು.
ಬಾಯಿಯ ಅರೋಗ್ಯ ವೈದ್ಯಕೀಯವಾಗಿ ಸ್ವಚ್ಛತೆಯ ಜೊತೆಗೆ ಮಾತಿನ ಮೇಲೆ ಹಿಡಿತ ಸಮಯ ಸಂದರ್ಭ ನೋಡಿ. ಮಾತು ಆಡಿದರೆ ಮುತ್ತಿನಂತ ಮಾತಾಗಿರಬೇಕು ಎಂಬುದನ್ನು ನೆನಪಿನಲ್ಲಿಟ್ಟು ಕೊಂಡು ಒಳ್ಳೆಯ ಮಾತುಗಳನ್ನು ಆಡುತ್ತಾ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳಿದರೆ ಸಂತಸದಿಂದ ಇರಬಹುದು.
ಅರೋಗ್ಯವಂತರಾಗಿ ಮತ್ತು ಸಂತಸದಿಂದ ಇರೋಣ.
–ಮಾಧುರಿ