ವಿಶ್ವ ಕವಿಯ ದಿನ
ಪ್ಯಾಬ್ಲೋ ಪುಷ್ಕಿನ್ ಪಂಪ
ಶೆಲ್ಲಿ ಕೀಟ್ಸ್ ಕಾವ್ಯ ಕಂಪ
ಅಭಿನಂದನೆ ತಮಗೆಲ್ಲ
ಹರಿದ ಭಾವದ ಕಂಪು
ಕನ್ನಡಕೆ ಒಬ್ಬರೇ
ರಸ ಋಷಿ ಕುವೆಂಪು
ಅಂದು ಮುಂಜಾವಿನ ರವಿಕಿರಣ
ಪಕ್ಷಿ ಇಂಚರದ ಮಾಧುರ್ಯ
ಮಳೆಯಲ್ಲಿ ತಪ್ಪನಷ್ಟೇ ತೋಯ್ದು
ಮರ ಬುಡದಲ್ಲಿ ನಿಂತದ್ದು
ಗಾಳಿಯ ಎದುರಿಗೆ
ಮುಗಿಲ ಮುಟ್ಟಿದ ಪಟ
ಓಣಿಕೇರಿಯಲಿ ಲಗೋರಿ
ಹಬ್ಬಕೆ ಪಟಾಕಿ ಸದ್ಧು
ಸಾವಿರ ಮರಗಳನ್ನು ಕಡೆದು
ಹತ್ತು ಸಸಿಗಳನ್ನು ನೆಡುತ್ತೇವೆ .
ಭೂಮಿ ಬಿರಿತಿದೆ
ಬರದ ಅಟ್ಟಹಾಸ ಕುಹುಕುತನ
ಕವಿ ಮಾರುವ ಹಾಗಿಲ್ಲ
ಪ್ರಶಸ್ತಿ ಪುರಸ್ಕಾರ ವಸ್ತುಗಳನ್ನು
ಮನೆಯಲ್ಲಿ ಮಕ್ಕಳು ಬಿಕ್ಕುತ್ತಿವೆ
ಹಸಿವು ಅನಕ್ಷರತೆ ಬಡತನ
ಇಲ್ಲ ಅಕ್ಕಿ ಗಂಜಿ
ನಿಂತಿಲ್ಲ ಕಾರ್ಮಿಕರ ಶೋಷಣೆ.
ಗುಡಿ ಮಸೀದೆ ಚರ್ಚು ವ್ಯವಹಾರ .
ಮುಖವಾಡ ಉದರ ಪೋಷಣೆ .
ಮುಸಂಜೆ ಸಮಯದಲ್ಲಿ
ಕವಿಗೆ ನಮನ ಹೊರಗೆಲ್ಲ ನಗಿಸಿ
ಒಳಗೊಳಗೇ ಅತ್ತ ನಿರಲಾ
ಬಾನಲ್ಲಿ ಹಾರಿದವು ಹಕ್ಕಿ ಬಿಚ್ಚಿ ರೆಕ್ಕಿ
ಹೀಗೊಂದು ಮುಂಜಾವು
ಯಾರಿರದ ಹಾದಿಯಲಿ
ಸದ್ದಿಲ್ಲದೇ ಹೊರಟಿತು
ಕವಿಯ ಹೆಣದ ಪಲ್ಲಕ್ಕಿ .
ಸತ್ಯ ಶೋಧಕ ನಿತ್ಯ ಭಾಷಿಕ
ಸತ್ತು ಹೋದನು
ಮುಖ ಮುಚ್ಚಿ ಮಣ್ಣಿನ ಹೆಂಟೆಯಲಿ
ಇಂದು ವಿಶ್ವ ಕವಿದಿನ
ನೆನೆಯಬೇಕು ಭಾವನೆಗಳ ಯಜಮಾನನನ್ನು
ಹೃದಯ ಸಿರಿವಂತನನ್ನು .
ಕವಿ ಇಲ್ಲವಾದರೂ
ಕಾವ್ಯ ಮೀಟುತ್ತಿದೆ ತಂತಿ.
-ಡಾ.ಶಶಿಕಾಂತ.ಪಟ್ಟಣ ರಾಮದುರ್ಗ