ಮಾಜಿ ಸೈನಿಕನಿಗೆ ಅದ್ದೂರಿ ಸ್ವಾಗತ

ಮಸ್ಕಿ : ಲಿಂಗಸುಗೂರು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಗೆಳೆಯರ ಬಳಗ ಹಾಗೂ ಗ್ರಾಮಸ್ಥರಿಂದ ಸೈನ್ಯದಲ್ಲಿ ಸೇವೆ ಸಲ್ಲಿಸಿ ಗ್ರಾಮಕ್ಕೆ ಮರಳಿದ ಶ್ರೀ ವೆಂಕಟೇಶ ಗೋನವಾರ ಅವರನ್ನು ಅದ್ದೂರಿಯಿಂದ ಬರಮಾಡಿಕೊಂಡರು.
ಭಾರತಿಯ ಸೇನೆಯಲ್ಲಿ 17 ವರ್ಷಗಳ ಕಾಲ ತಾಯಿ ಭಾರತ ಮಾತೆಯ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದರು.
ಹೆಮ್ಮೆಯ ವೀರ ಸೇನಾನಿಗೆ ಗ್ರಾಮಸ್ಥರು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಸೇನಾನಿ ವೆಂಕಟೇಶ, ಸಮಾಜ ಸೇವಕ ಲಕ್ಷ್ಮಣ ಮಡಿವಾಳ ಅವರನ್ನು ಸತ್ಕರಿಸಿದರು.
“ದೇಶ ಪ್ರೇಮಿ ಹಾಗೂ ಸಮಾಜ ಸೇವಕನೆಂದು ಗುರುತಿಸಿ. ಪಾಮನಕೆಲ್ಲೂರು ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಿದರು.

Don`t copy text!