ಮನೋಹರ ಮಸ್ಕಿ 60 ರ ಸಂಭ್ರಮ

ನಾವು -ನಮ್ಮವರು

  ಮನೋಹರ ಮಸ್ಕಿ ಹುಟ್ಟಿದ್ದು ಮಸ್ಕಿಯಲ್ಲಿ,
ಸಿಂಧನೂರು ಕರ್ಮಭೂಮಿ ಮಾಡಿಕೊಂಡು ಸಹಕಾರ ಕ್ಷೇತ್ರದ ಮುಖಾಂತರ ಅರಳಿ
ರಾಜ್ಯದ ತುಂಬೆಲ್ಲ ಪರಿಮಳ ಸೂಸುವ ತಂಗಾಳಿ.

ಮನೋಹರ ಮಸ್ಕಿ ಅವರಿಗೆ ಈಗ 60 ರ ಪ್ರಾಯ. 60 ವರ್ಷಕ್ಕೆ ಒಂದು ಯುಗ. 60 ಕ್ಕೆ ಅರಳುವದು ಎಂಬ ಪರಿಕಲ್ಪನೆಯಲ್ಲಿ ಅವರ ಕುಟುಂಬ ವರ್ಗದವದರ ಮತ್ತು ಗೆಳೆಯರ ಬಳಗದಲ್ಲಿ ಹಬ್ಬದ ವಾತವರಣ.


ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣವನ್ನು ಮಸ್ಕಿಯಲ್ಲಿ ಕಲಿತು ಪದವಿಯನ್ನು ಸಿಂಧನೂರಿನಲ್ಲಿ ಮುಗಿಸಿದ್ದಾರೆ.
ನೋಹರ ಮಸ್ಕಿ ಎಬಿವಿಪಿ ಸಂಘಟನೆಯ ಮುಂಚುಣಿ ನಾಯಕನಾಗಿ ಕೆಲ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಮಾಡಿ ವ್ಯಕ್ತಿತ್ವ ರೂಪಿಸಿಕೊಂಡವರು.
ಸಂಘಟನೆಯಲ್ಲಿ ತನ್ನ ಕಿರಿಯರಿಗೆ ಜವಬ್ದಾರಿ ವಹಿಸಿ ಹೊರ ಬಂದು ಸಿಂಧನೂರಿನಲ್ಲಿ ಮುದ್ರಣಾಲಯ ಸ್ಥಾಪಿಸಿ ರಾಯಚೂರು ಸುದ್ದಿಬಿಂಬ ಪತ್ರಿಕೆಯನ್ನು ಹುಟ್ಟು ಹಾಕಿ ಸಣ್ಣದೊಂದು ಸಂಚಲನ ಮೂಡಿಸಿದರು.
ನಂತರ ಜನತಾ ಬಜಾರ ಸ್ಥಾಪಿಸಿ ಶುದ್ಧ ಆಹಾರ ಪದಾರ್ಥಗಳನ್ನು ಜನರಿಗೆ ಪೂರೈಸಿ ಸೈ ಎನಿಸಿಕೊಂಡರು.
ಜನತಾ ಬಜಾರವನ್ನು ತಮ್ಮ ಗೆಳೆಯರಿಗೆ ಬಿಟ್ಟುಕೊಟ್ಟ 1995 ರಲ್ಲಿ ಸುಕೋ ಬ್ಯಾಂಕ್ ( ಸಿಂಧನೂರು ಅರ್ಬನ್ ಕೊಪರೇಟಿವ್ ಬ್ಯಾಂಕ್) ಪ್ರಾರಂಭಿಸಿ ಅಂದಿನ ಹೈದ್ರಾಬಾದ್ ಕರ್ನಾಟಕದ ಮೊದಲ ಅರ್ಬನ್ ಬ್ಯಾಂಕ್ ಎಂಬ ಖ್ಯಾತಿ ಗಳಿಸಿದ್ದು ಇತಿಹಾಸ.
ಮನೋಹರ ಮಸ್ಕಿಯವರು ಯಾವುದೇ ಒಂದೇ ಕೆಲಸ ಮಾಡುವ ಜಾಯಮಾನ ಅವರಿಗೆ ಒಗ್ಗಿಲ್ಲ. 25 ವರ್ಷಗಳ ವರೆಗೆ ಸುಕೋ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡಿ ಅದರಿಂದ ಹೊರಗೆ ಬಂದು 2018 ರಲ್ಲಿ ಬದ್ರಾವತಿಯ ಬಾನಂದೂರಿನಲ್ಲಿ ಮಲೆನಾಡು ನಟ್ಸ್ & ಸ್ಪೈಸಸ್ ಪ್ರಡ್ಯೂಸರ್ ಕಂಪನಿ, ರೈತರ ಉತ್ಪಾದಕ ಕಂಪನಿ ಪ್ರಾರಂಭಿಸಿ ರೈತರು ಕೂಡ ಪ್ರತಿ ಹಂತದಲ್ಲೂ ಲಾಭ ಬರುವಂತೆ ಮಾಡುತ್ತಿದ್ದಾರೆ.
ಸಿಂಧನೂರು ಸಾಕೆನಿಸಿದಾಗ ಏಕಾಏಕಿ ಬೆಂಗಳೂರಿಗೆ ಹೋಗಿ ನೆಲೆ ಕಂಡುಕೊಂಡರು.
ಸಹಕಾರ ಕ್ಷೇತ್ರದ ಹಳೇ ಕಾಯ್ದೆಯಲ್ಲಿ ಸಹಕಾರಿಗಳಿಗೆ ಇದ್ದ ತೊಡುಕುಗಳನ್ನು ಪರಿಹಾರಕ್ಕಾಗಿ ಹೊಸ ಸೌಹಾರ್ದ ಕಾಯ್ದೆ ಜಾರಿಗೆ ತರುವಲ್ಲಿ ಇವರ ಶ್ರಮ ಸಾರ್ಥಕವಾಗಿದೆ.
ಕರ್ನಾಟಕರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿ ಸಹಕಾರ ಕ್ಷೇತ್ರದ ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರ ಕಂಡುಕೊಂಡು ಬಲವರ್ಧನೆ ಮಾಡಿದ್ಧಾರೆ.
ಸಹಕಾರಿಗಳಿಗಾಗಿ ಬೆಂಗಳೂರಿನಲ್ಲಿ ಸಿಫಿನ್ ಸಂಸ್ಥೆ ಯನ್ನು ಸ್ಥಾಪಿಸಿ ಹೊಸ ಪ್ರಯೋಗ ನಾಂದಿ ಹಾಡಿದರು.
ಬಿಜೆಪಿ ಇವರ ಸಂಘಟನಾ ಚಾತುರ್ಯ ಮತ್ತು ಸಹಕಾರ ಕ್ಷೇತ್ರದ ಸಾಧನೆ ಪರಿಗಣಿಸಿ 2006 ರಲ್ಲಿ ಗುಲಬರ್ಗಾ ವಿಭಾಗದ ಪದವಿಧರ ಕ್ಷೇತ್ರದಿಂದ ವಿಧಾನ ಪರಿಷತ್ ಅಭ್ಯರ್ಥಿ ಯಾಗಿಸಿತು. ವಿಧಾನ ಪರಿಷತ್ ಸದಸ್ಯರಾಗಿ 6 ವರ್ಷ ಕೆಲಸ ಮಾಡಿ ರಾಜಕೀಯದಿಂದ ದೂರ ಸರಿದು ಶಿವಮೊಗ್ಗ ಜಿಲ್ಲೆಯ ಬದ್ರಾವತಿ ಬಳಿ ಕೃಷಿಯಲ್ಲಿ ಆಸಕ್ತಿ ತಾಳಿದ್ದಾರೆ.
ಮನೋಹರ ಮಸ್ಕಿ ಕ್ರಿಯಾಶೀಲ ವ್ಯಕ್ತಿ. ಒಂದಲ್ಲ ಒಂದು ಚಟುವಟಿಕೆಲ್ಲಿ ತೊಡಗಿಕೊಂಡವರು. ಇಂದಿನ ಕಲ್ಯಾಣ ಕರ್ನಾಟಕದಲ್ಲಿ ನೂರಾರು ಸಹಕಾರಿ ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳ ಹುಟ್ಟಿಗೆ ಇವರ ಪ್ರೇರಣೆ, ಸಹಕಾರದಿಂದ ಅರಳಿವೆ.
ಮನೋಹರ ಮಸ್ಕಿ ಅವರ ಮಡದಿ ವೇದಾ ಫಾರ್ಮಹೌಸ್ ಪ್ರಾರಭಿಸಿ ಡೈರಿ ನಡೆಸುತ್ತಿದ್ದಾರೆ. ಮಗ ಮೊಹಿತ ಸುಕೋ ಬ್ಯಾಂಕ್ ಜವಬ್ದಾರಿ ಹೊತ್ತಿದ್ದಾರೆ. ‘ಪಂಚಮವೇದ’ ದಲ್ಲಿ ಮನೋಹರ ಕುಟುಂಬ ಸುಖಿ.
ಮನೋಹರ ಮಸ್ಕಿ ಅವರ ತಂದೆ ಡಾ.ಎಂ.ಬಸವರಾಜ ತಾಯಿ ನೀಲಮ್ಮ ಮಸ್ಕಿಯಲ್ಲಿದ್ದರೆ ಅವರ ಅಣ್ಣ ನಾಗರಾಜ ಮಸ್ಕಿ, ರಾಯಚೂರಿನಲ್ಲಿ ವಕೀಲರಾಗಿ ತಾರನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಖ್ಯಾತಿ ಗಳಿಸಿದ್ದಾರೆ.
ಮನೋಹರ ಮಸ್ಕಿ ಅವರ 60 ವರ್ಷದ ಈ ಸಂಭ್ರಮದಲ್ಲಿ ನೂರ್ಕಾಲ ವರ್ಷ ಬಾಳಿ ಎಂಬುದೇ ನಮ್ಮ ಆಶಯ.

3 thoughts on “ಮನೋಹರ ಮಸ್ಕಿ 60 ರ ಸಂಭ್ರಮ

Comments are closed.

Don`t copy text!