ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕೆ 15 ಲಕ್ಷ ರೂ ಮೀಸಲಿಡಲು ಮನವಿ

ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕೆ 15 ಲಕ್ಷ ರೂ ಮೀಸಲಿಡಲು ಮನವಿ

e-ಸುದ್ದಿ ಲಿಂಗಸುಗೂರು

ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕಾಗಿ ಪುರಸಭೆಯ ಬಜೆಟ್ ನಲ್ಲಿ 15 ಲಕ್ಷ ರೂ ಮೀಸಲಿಡುವಂತೆ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಲಿಂಗಸುಗೂರು ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 20ಕ್ಕೂ ಹೆಚ್ಚು ಪತ್ರಕರ್ತರು ಇದ್ದು ಅನೇಕ ಪತ್ರಕರ್ತರು ಆರ್ಥಿಕವಾಗಿ ದುರ್ಬಲರಿದ್ದು ಗಂಭಿರ ಆರೋಗ್ಯ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಅವರ ವೈದ್ಯಕೀಯ ಚಿಕಿತ್ಸೆ ಪಡೆಯಲು ನೆರವಾಗಿ ನಿಟ್ಟಿನಲ್ಲಿ ಆರ್ಥಿಕ ಸಹಾಯ ಒದಗಿಸಬೇಕು.

ಈಗಾಗಲೇ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪುರಸಭೆ ಹಾಗೂ ನಗರಸಭೆಗಳಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕಾಗಿಯೇ ಬಜೆಟ್ ನಲ್ಲಿ ಸಹಾಯಧನ ಮೀಸಲಿಟ್ಟಿರುವ ಉದಾಹರಣೆಗಳಾಗಿವೆ. ಅದರಂತೆ 15 ಲಕ್ಷ ರೂ ವೈದ್ಯಕೀಯ ವೆಚ್ಚ ಸಹಾಯಧನವನ್ನು ಸ್ಥಳೀಯ ಪುರಸಭೆಯ 2022-23 ನೇ ಸಾಲಿನ ಬಜೆಟ್ ನಲ್ಲಿ ಮೀಸಲಿಟ್ಟು ಪತ್ರಕರ್ತರ ನೆರವಿಗೆ ಮುಂದಾಗಬೇಕು ಎಂಬ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವರಾಜ್ ಕೆಂಭಾವಿ, ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಗುಮಾಸ್ತೆ, ಪ್ರಧಾನ ಕಾರ್ಯದರ್ಶಿ ಗುರುರಾಜ ಗೌಡೂರು, ಅಮರೇಶ ಸ್ವಾಮಿ ಬಲ್ಲಟಗಿ, ನಾಗರಾಜ್ ಗೋರೆಬಾಳ, ಬಸವರಾಜ ಈಚನಾಳ, ದುರುಗಪ್ಪ ಹೊಸಮನಿ, ಹನುಮಂತ ಕನ್ನಾಳ, ಯಲ್ಲಪ್ಪ ಸೇರಿದಂತೆ ಇತರರು ಹಾಜರಿದ್ದರು.

Don`t copy text!