ಅಯ್ಯಾ ನಿಮ್ಮ ಮಹಾವ್ರತಿಗಳನಗಲಿ ಬದುಕಲಾರೆನು

ಅಯ್ಯಾ ನಿಮ್ಮ
ಮಹಾವ್ರತಿಗಳನಗಲಿ ಬದುಕಲಾರೆನು
ಶಿವಧೋ ಶಿವಧೋ ಕಂಗಳ ಅಶ್ರುಗಳಲ್ಲಿ ಮುಂದುಗಾಣೆನು 
ಲಿಂಗಸಂಗಿಗಳನಗಲಿ ನಾನೆಂತು ಬದುಕುವೆ 
ಕೂಡಲಸಂಗಮದೇವಾ

ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಬದುಕಬೇಕಾದರೆ ಆತನಿಗೆ ಸಂಘ ಅತಿ ಮುಖ್ಯವಾದಂತಹದು. ಸಮಾಜವನ್ನು ಮತ್ತು ಸಂಗವನ್ನು ಬಿಟ್ಟು ವ್ಯಕ್ತಿ ಬದುಕಲಾರ. ಒಂದು ವೇಳೆ ಹಾಗೆ ಬದುಕಿದರೆ ಆತನು ಪಶುವಿನಂತೆ ಆಗುವನು. ಒಳ್ಳೆಯ ಉತ್ತಮ ವ್ಯಕ್ತಿತ್ವ ಬೆಳೆಯಬೇಕಾದರೆ ಉತ್ತಮರ ಶರಣರ ಸಂಘ ಆ ವ್ಯಕ್ತಿಗೆ ಅವಶ್ಯವಾದದ್ದು. ಶರಣರ ಮಾರ್ಗದರ್ಶನ ಮೌಲ್ಯಗಳು ಇವೆಲ್ಲವುಗಳು ಬದುಕಿಗೆ ಪೂರಕ. ಅಂತರಂಗದ ಪರುಶುದ್ದ ಭಾವದಿಂದ ಎಲ್ಲರನ್ನೂ ಅಪ್ಪಿಕೊಂಡ 12ನೇ ಶತಮಾನದ ಬಸವಣ್ಣ ನಮಗೆ ಅನುಕರಣೀಯನಾಗುತ್ತಾರೆ.

12ನೆಯ ಶತಮಾನದಲ್ಲಿ ಅಣ್ಣ ಬಸವಣ್ಣನವರ ಸಂಗದಿಂದ ಕ್ರಾಂತಿಯನ್ನೇ ಎಬ್ಬಿಸಿದರು.
ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಸಂಗ ಅತಿ ಅವಶ್ಯ. ಮನುಷ್ಯ-ಮನುಷ್ಯರ ನಡುವೆ ಮಾನವೀಯತೆ ಹೃದಯ ವೈಶಾಲ್ಯತೆ ಯು ಸಂಘದಿಂದಲೇ ಜಾತಿ ,ಕುಲ, ಲಿಂಗ ಬೇಧ ಗಳಿಂದ ಹೊರತಾದ ಸಂಗ ಅಜ್ಞಾನ ,ಕಂದಾಚಾರ ಜಾತಿ ಸಂಕರಗಳನ್ನು ಓಡಿಸಿ ಉಪದೇಶ ವಿಡಂಬನೆ ಮುಂತಾದವುಗಳನ್ನು ಸಂಘಟನಾ ಶಕ್ತಿಯ ಜೊತೆಗೆ ಪರಿವರ್ತನೆಗೆ ಶ್ರಮಿಸಿದ ಸಂಕಲ್ಪ ಬಲವು ಅತ್ಯಂತ ಗಮನಾರ್ಹವಾದದ್ದು.

ಅಯ್ಯಾ ನಿಮ್ಮ ಮಹಾವ್ರತಿಗಳನಗಲಿ ಬದುಕಲಾರೆನು

ಶರಣರು ಪರಧನ ಪರಸತಿ ವ್ಯಾಮೋಹ ಗಳಿಂದ ಸದಾ ದೂರವಿದ್ದು,ಪರಶಿವನನ್ನೇ ನಂಬಿ ಬದುಕಿದ ಮಹಾವ್ರತಿಗಳು.
ಇಂಥ ಶರಣರನ್ನು ಬಿಟ್ಟು ಬದುಕುವುದು ನನಗೆ ಸಾಧ್ಯವಾಗಲಾರದು.
ಆ ಶಿವನಿಗೆ ಅಂದರೆ ನಾನು ನಂಬಿದ ದೇವರಿಗೆ ನಾನು ಬೇಡವಾದ ಮೇಲೆ ನನಗೇತಕೆ ಬದುಕು ಎನ್ನುವ ಸೂಕ್ಷ್ಮನಿರ್ಧಾರಕ್ಕೆ ಬರುತ್ತಾರೆ. .ಎಕದೇವೋಪಾಸಕರದ ಶರಣರು ತಮ್ಮ ಮನವನ್ನು ಭಗವಂತನಿಗೆ ಅರ್ಪಿಸುವ ನಿರ್ಧಾರಕ್ಕೆಬರುತ್ತಾರೆ.
ಶರಣರ ನಡೆ ಚೆನ್ನ ಅವರ ನುಡಿ ಚೆನ್ನ ಅಂತಹ ಶರಣರ ಸಂಗ ಬದುಕಿಗೆ ಆನಂದ .

ಶಿವಧೋ ಶಿವಧೋ ಕಂಗಳ ಅಶ್ರುಗಳಲ್ಲಿ ಮುಂದುಗಾಣೆನು

ಶಿವಶರಣರ ಅಗುಲುವಿಕೆಯ ದುಃಖದಿಂದ ಕಣ್ಣಲ್ಲಿ ನೀರು ತುಂಬಿ ದಾರಿ ಕಾಣದಂತಾಗಿದೆ .ಅಂದರೆ ಸತ್ಯ ಶುದ್ಧ ಮಾರ್ಗವು ಗೋಚರಿಸದಂತಾಗಿದೆ .
ಅಜ್ಞಾನ ಅಂಧಕಾರದಿಂದ ತುಂಬಿದ ಈ ಜಗತ್ತಿನಲ್ಲಿ ಮುಂದೆ ಸಾಗುವುದು ಎಂತು ಎಂಬ ಅರಿವು ಅಂದರೆ ಸತ್ಯ ಶುದ್ಧ ಮಾರ್ಗವು ಗೋಚರಿಸದಂತಾಗಿದೆ

ಲಿಂಗ ಸಂಗಿಗಳನಗಲಿ ನಾನೆಂತು ಬದುಕುವೆ ಕೂಡಲಸಂಗಮದೇವ

ಅಂಗದಿಂದೆ ಲಿಂಗ ಸುಖ ಲಿಂಗದಿಂದ ಅಂಗ ಸುಖ.ಆ ಅಂಗಲಿಂಗ ಸಂಗಸುಖದಿಂದೆ ಪರಮಸುಖ ದೊರೆಕೊಂಬುದು ನೋಡಾ ಆ ಅಂಗ ಲಿಂಗ ಸಂಗ ಪರಮರಸೈಕ್ಯವನು ಕೂಡಲ ಚೆನ್ನ ನಿಮ್ಮ ಶರಣನಾದ ಮಹಾ ಲಿಂಗಕ್ಯ
ಬಲ್ಲನಲ್ಲದೆ ಉಳಿದವರೆತ್ತ ಬಲ್ಲರಯ್ಯ?

ಅಂಗವೇ ಲಿಂಗ ಲಿಂಗವೆ ಅಂಗವೆಂದರಿದ ಬಳಿಕ ನಮ್ಮ ಕೂಡಲ ಚೆನ್ನಸಂಗಮದೇವ ರು ಅಲ್ಲಿ ಹೆರಹಿಂಗದಿರ್ಪ ಕಾಣಿರೋ

ಲಿಂಗ ಭಕ್ತನ ಬಹಿರಂಗದಲ್ಲಿ ಅಂತರಂಗದಲ್ಲಿ ಸರ್ವಾಂಗದಲ್ಲಿ ಅಖಂಡ ಜ್ಯೋತಿರ್ಮಯ ಲಿಂಗ ನೆಲೆಗೊಂಡಿವುದು ಅಖಂಡಿತ ಪೂಜೆಯನ್ನು ಕೈಕೊಂಡು ಭಕ್ತನ ಸರ್ವಾಂಗದಲ್ಲಿ ಲಿಂಗಮುಖವಾಗಿ ಬರುವ ಸರ್ವ ವಿಷಯ ಪದಾರ್ಥ ವನ್ನು ಆತನ ದೇಹ ಇಂದ್ರಿಯ ಕರಣಗಳ ಪರಿಯಾಣ ಎಡೆಬಟ್ಟಲುಗಳಲ್ಲಿ ಎಡೆಮಾಡಿಸಿಕೊಂಡು ಲಿಂಗ ತಾನು ಉಂಡು ಲಿಂಗ ಕಾಯನಾದ ಭಕ್ತನ ಅಂಗಾಂಗದಲ್ಲಿ ಲಿಂಗ ಪ್ರಸಾದ ಕರುಣಿಸಿ ಕರುಣ ಪ್ರಸಾದದ ಅನಂತ ಸುಖಾನುಭಾವದಲ್ಲಿ ಲಿಂಗ ಭಕ್ತನನ್ನು ಇರಿಸಿಕೊಂಡು ಭಕ್ತ ಲಿಂಗ ಇರುವಂತೆ ಮಾನವ ಭಕ್ತ ಲಿಂಗ ದೇವನಲ್ಲಿ ಸತ್ತು ಲಿಂಗಾಂಗನಾಗಿ ಬದುಕಿ ಇರುವುದು

ಅಂಗದ ಕಳೆಯಲೊಂದು ಲಿಂಗವ ಕಂಡೆ ಲಿಂಗದ ಕಳೆಯಲೊಂದು ಅಂಗವ ಕಂಡೆ ನೋಡಿರಿ ಇಲ್ಲೇ ಇದಾನೆ ಶಿವನ ಬಲ್ಲದೆ ಇರಿಸಿಕೊಳ್ಳಿ

.ಶರಣರು ಲಿಂಗ ಸಂಗಿಗಳು .ಲಿಂಗ ಸ್ವರೂಪಿಗಳು ಅವರನ್ನು ಅಗಲಿ ಬದುಕಲಾರೆನು .

.ಎಂಬ ಬಸವಣ್ಣನವರ ಮಾತು ಸಾಧಕನ
ಸಾಧನೆಗೆ ಶರಣರ ಸಂಗ ಮುಖ್ಯ ಎಂಬುದನ್ನು ಈ ವಚನವು ತಿಳಿಸುತ್ತದೆ.

-ಪ್ರೊ -ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ

Don`t copy text!