ಹಟ್ಟಿಯಲ್ಲಿ ಆಡು ಕಳುವು ಪ್ರಕರಣ ನಾಲ್ವರನ್ನು ಬಂಧಿಸಿದ ಖಾಕಿ ಪಡೆ

ಹಟ್ಟಿಯಲ್ಲಿ ಆಡು ಕಳುವು ಪ್ರಕರಣ ನಾಲ್ವರನ್ನು ಬಂಧಿಸಿದ ಖಾಕಿ ಪಡೆ

 

 e-ಸುದ್ದಿ ಲಿಂಗಸುಗೂರು

ವರದಿ-ವೀರೇಶ ಅಂಗಡಿ, ಗೌಡುರು

ಆಡು ಕಳ್ಳತನ‌ ಪ್ರಕರಣಕ್ಕೆ ಸಂಬಂಧಿಸಿ ದಂತೆ ಹಟ್ಟಿ ಪೊಲೀಸರು ಶನಿವಾರ ನಾಲ್ವರು ಆರೋಪಿ ಗಳನ್ನು ಸಾಕ್ಷಿ ಸಮೇತ ಬಂಧಿಸಿದ್ದಾರೆ.
ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮದ‌ ನಿವಾಸಿಯಾದ ಯಮನೂರು ಎಂಬುವವರು ಕುರಿ ಕಳುವಾಗಿರುವ ಬಗ್ಗೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಮಾರ್ಚ್ 31 ರಂದು ದೂರು ಸಲ್ಲಿಸಿದ್ದರು.

ದೂರು ದಾಖಲಿಸಿಕೊಂಡ ಪೋಲಿಸರು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಟ್ಟಿ ಪೊಲೀಸ್ ಅಧಿಕಾರಿಗಳಾದ ಪಿ.ಐ ಪ್ರಕಾಶ್ ಮಾಳಿ ಹಾಗೂ ಪಿ.ಎಸ್.ಐ ರಾಮಲಿಂಗಪ್ಪ ,ಎ.ಎಸ್‌.ಐ ಶೆಖ್ ರೆಹೆಮಾನ್, ಹಾಗೂ ಸಿಬ್ಬಂದಿಗಳಾದ ಹುಚ್ಚರೆಡ್ಡಿ,ನಾರಾಯಣ, ರಾಮಪ್ಪ,ಬಸವರಾಜ, ಮಾರುತಿ, ನಾಗಾರ್ಜುನ ಅವರ ತಂಡವು ಚುರುಕು ಕಾರ್ಯಚರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗರಾಜ (35), ಹನಮಂತ ರೆಡ್ಡಿ(28), ಗುಂಡಪ್ಪ (32) ಹಾಗೂ ಆಂಜನೇಯ (19) ಎಂಬ ನಾಲ್ಕು ಜನರನ್ನು ಬಂಧಿಸಿದ್ದಾರೆ.

ಬಂಧಿತರಿಂದ 1.5 ಲಕ್ಷ ರೂ.‌ಮೌಲ್ಯದ 13 ಆಡುಗಳು ಹಾಗೂ 1.5 ಲಕ್ಷ ರೂ.‌ಬೆಲೆ ಬಾಳುವ ಆಟೋರಿಕ್ಷಾ‌ ಸೇರಿ ಒಟ್ಟು 3 ಲಕ್ಷ ರೂ.ಮೌಲ್ಯದ ಆಟೋ ಹಾಗು ಆಡುಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೋಲೀಸರ ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ಮೆಚ್ಚಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದದ್ದಾರೆ.

Don`t copy text!