ಸೈಕಲ್ ಜಾಥಾದ ಮೂಲಕ ಪರಿಸರ ಜಾಗೃತಿ ಮೂಡಿಸುತ್ತ ಸಾಗಿದ ಮುತ್ತಣ್ಣ ತಿರ್ಲಾಪುರ

ಸೈಕಲ್ ಜಾಥಾದ ಮೂಲಕ ಪರಿಸರ ಜಾಗೃತಿ ಮೂಡಿಸುತ್ತ ಸಾಗಿದ ಮುತ್ತಣ್ಣ ತಿರ್ಲಾಪುರ

e-ಸುದ್ದಿ ಲಿಂಗಸುಗೂರು

ವರದಿ – ವೀರೇಶ ಅಂಗಡಿ ಗೌಡುರು

ಗದಗ ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟ್ಟಿ ಮೂಲದವರಾದ ಮುತ್ತಣ್ಣ ತಿರ್ಲಾಪುರ ಅವರ ಪರಿಸರದ ಬಗ್ಗೆ ಅಪಾರ ಕಾಳಜಿಯುಳ್ಳ ಆಧುನಿಕ ಪರಿಸರ ಪ್ರೇಮಿಯಾಗಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಅವರ ಪರಿಸರ ಕಾಳಜಿ ಎಂತವರನ್ನು ನಿಬ್ಬೆರಗಾಗುವಂತೆ ಮಾಡುತ್ತದೆ.

ಅವರ ಈ ಸೈಕಲ್ ಜಾತಕ್ಕೆ ಮಾರ್ಚ್ 29 ರಂದು ಗದಗ ಜಿಲ್ಲೆಯ ರೋಣ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಚಾಲನೆ ನೀಡಿದ್ದು ಕರ್ಕಿಕಟ್ಟಿಯಿಂದ ಹಿಡಿದು ಬಿಸಿಲು ನಾಡು ಯಾದಗಿರಿಯವರೆಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದ್ದು ರವಿವಾರ ಸಂಜೆ ಲಿಂಗಸುಗೂರು ಸಮೀಪದ ಹೊನ್ನಳ್ಳಿಯ ಮೂಲಕ ಹಾದು ಹೋಗುವಾಗ ಹೊನ್ನಳ್ಳಿ ಗ್ರಾಮಸ್ಥರು ಸ್ವಾಗತಿಸಿ ಬಿಳ್ಕೊಟ್ಟರು.

ರೋಣ ತಾಲೂಕಿನಿಂದ ಯಾದಗಿರಿಯವರೆಗೆ ಸುಮಾರು 230 ಕಿ.ಮಿ ಸೈಕಲ್ ಪ್ರಯಾಣ ನಿಜಕ್ಕೂ ಅಚ್ಚರಿ.ಮೈ ತುಂಬಾ ಅವರು ತೊಟ್ಟಿರುವ ಹಸಿರು ಬಟ್ಟೆಯ ಮೇಲೆ ಪರಿಸರ ಜಾಗೃತಿ ಸಂದೇಶದ ಸಾಲುಗಳು ಹಾಗೂ ಸೈಕಲ್ ಮುಂದೆ ಕಟ್ಟಿರುವ ರಾಷ್ಟ್ರ ಧ್ವಜ ನೋಡುಗರ ಕಣ್ಮನ ಸೆಳೆಯುತ್ತವೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಪರಿಸರ ಜಾಗೃತಿಗೆ ಸಂಬಂಧಿಸಿದ ಕರಪತ್ರಗಳನ್ನು ನೀಡಿದರು. ಪರಿಸರ ಸಂರಕ್ಷಣೆ, ಗಿಡಮರಗಳನ್ನು ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.ಕರೋನಾ ಸಂದಿಗ್ಧ ಸ್ಥಿತಿಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಸಾವು ನೋವುಗಳು ಸಂಭವಿಸಿದ್ದು ನಮ್ಮೆಲ್ಲರಿಗೂ ಎಚ್ಚರಿಕೆಯ ಸಂದೇಶ. ಆದ ಕಾರಣ ಪರಿಸರ ಪರಿವಾರ ರಕ್ಷಣೆ,ಪೋಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಪರಿಸರ ಉಳಿಸಿ , ಪರಿಸರ ಬೆಳೆಸಿ , ಹಸಿರೇ ಉಸಿರು ಜನರಿಂದ ಜನರಿಗೋಸ್ಕರ ಈ ಜಾಗೃತಿ ಅಭಿಯಾನ ಸೈಕಲ್ ಯಾತ್ರೆ-

-ಮುತ್ತಣ್ಣ ಚನಬಸಪ್ಪ ತಿರ್ಲಾಪುರ ಕರ್ಕಿ ಹಟ್ಟಿ -ಪರಿಸರ ಪ್ರೇಮಿ

ಇಂತಹ ಬಿರು ಬಿಸಿಲಿನಲ್ಲಿಯೂ ಸಹ ಇಳಿವಯಸ್ಸಿನ ಮುತ್ತಣ್ಣ ನವರ ಪರಿಸರ ಸೈಕಲ್ ಜಾಗೃತಿ ನಮ್ಮೆಲ್ಲರಿಗೂ ಮಾದರಿ-

-ಮಲ್ಲಿಕಾರ್ಜುನ ಪೇರಿ ಹೊನ್ನಳ್ಳಿ ಗ್ರಾಮಸ್ಥರು

Don`t copy text!