ಹಚ್ಚಹಸಿರಿನ ಗುಡ್ಡದಲ್ಲಿ ಕಂಗೊಳಿಸುತ್ತಿರುವ ಗವಿಸಿದ್ದೇಶ್ವರ

ನೋಡೋಣ ಬಾರ ದೇಗುಲ

ಹಚ್ಚಹಸಿರಿನ ಗುಡ್ಡದಲ್ಲಿ ಕಂಗೊಳಿಸುತ್ತಿರುವ ಗವಿಸಿದ್ದೇಶ್ವರ

e-ಸುದ್ದಿ ಮಸ್ಕಿ

ವರದಿ -ವೀರೇಶ ಸೌದ್ರಿ ಮಸ್ಕಿ

ಪ್ರಾಚೀನ ಪರಂಪರೆಯ ಐತಿಹಾಸಿಕ ತಾಣಗಳನ್ನು ಹೊಂದಿರುವ ಹಚ್ಚ ಹಸಿರಿನ ಗುಡ್ಡದಲ್ಲಿ ಕಂಗೊಳಿಸುವ ಹೂವಿನಬಾವಿ ಗವಿಸಿದ್ದೇಶ್ವರ ದೇವಸ್ಥಾನ ಪ್ರೇಕ್ಷಣೀಯ ಸ್ಥಳವು ಹೌದು. ಹಾಗೇಯೇ ಸುತ್ತಮೂತ್ತಲಿನ ಹತ್ತಾರು ಊರುಗಳಿಗೆ ಆರಾಧ್ಯ ದೈವವು ಹೌದು.
ಗವಿಸಿದ್ದೇಶ್ವರ ದೇವಸ್ಥಾನ ಇರುವ ಪ್ರದೇಶದ ಸುತ್ತಲೂ ಗುಡ್ಡಗಾಡು. ನಿಸರ್ಗ ನಿರ್ಮಿತ ಹಚ್ಚಹಸಿರಿನ ವಾತವಾರಣದಿಂದ ಸದಾ ಕಂಗೊಳಿಸುತ್ತದೆ. ಹೂವಿನಬಾವಿ ಗ್ರಾಮದ ಸುತ್ತ ಸುಮಾರು ೬೦೦ ಎಕರೆಗಿಂತಲೂ ವಿಶಾಲವಾದ ಹಸಿರು ಬೆಟ್ಟವಿದೆ. ಬೆಟ್ಟದ ಮೇಲೆ ಗವಿಸಿದ್ದೇಶ್ವರ ದೇವಸ್ಥಾನವಿದ್ದು ಜನಾಕರ್ಷಣೆಯ ಸ್ಥಳವಾಗಿದ್ದು ಪುರಾತನ ಇತಿಹಾಸವನ್ನು ಹೊಂದಿದೆ. ಸುತ್ತಮೂತ್ತಲಿನ ಪ್ರದೇಶವೆಲ್ಲ ಹಸಿರಿನ ಪರಿಸರ ತುಂಬಿಕೊAಡು ಪ್ರವಾಸಿ ತಾಣವಾಗಿದೆ. ಈ ಬೆಟ್ಟಕ್ಕೆ ಸರ್ಕಾರ ಆಧುನಿಕ ಸ್ಪರ್ಶ ನೀಡಿ ಮತ್ತಷ್ಟು ಸುಂದರಗೊಳಿಮಸ್ ಅಭಿವೃದ್ದಿ ಪಡಿಸಿದರೆ ನಿತ್ಯವೂ ಸಾವಿರಾರು ಜನ ಬಂದು ಹೋಗುವ ಪ್ರವಾಸಿ ತಾಣವನ್ನಾಗಿ ಮಾಡಬಹುದಾಗಿದೆ.
ಹಿನ್ನಲೆ ಃ ಸತ್ಯ ಹರಿಶ್ಚಂದ್ರನ ತಂದೆ ತ್ರಿಶಂಕು ಮಹಾರಾಜನ ಕಾಲದಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ. ದೇವಸ್ಥಾನದ ಗರ್ಭಗುಡಿಯಿಂದ ಮೇಲಭಾಗದಲ್ಲಿ ತ್ರೀಕೋನಾಕಾರದಲ್ಲಿ ಬಂಡೆಗಳನ್ನು ಜೋಡಿಸಿ ದೇವಸ್ಥಾನ ನಿರ್ಮಿಸಲಾಗಿದೆ. ಹೊಸ ವರ್ಷ ಯುಗಾದಿಯಂದು ಸರ‍್ಯರಷ್ಮಿ ಕಿರಣ ಶಿವಲಿಂಗದ ಮೇಲೆ ಸ್ಪರ್ಶ ಮಾಡುವದನ್ನು ಗ್ರಾಮಸ್ಥರಲ್ಲದೆ ಸುತ್ತಮೂತ್ತಲಿನ ಭಕ್ತರು ನೋಡಿ ಕಣ್ಣು ತುಂಬಿಕೊಳ್ಳತ್ತಾರೆ.


ಶ್ರವಾಣ ಮಾಸದ ಕಡೆ ಸೋಮವಾರ ಗವಿಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಗಂಗಾಜಲ ಇರುವ ವಕ್ತುಂಬಾವಿ ಇದ್ದು, ವರ್ಷಪೂರ್ತಿ ಹನ್ನೇರಡು ತಿಂಗಳು ಸದಾ ಸಿಹಿ ನೀರು ಇರುತ್ತದೆ. ಇದು ವರೆಗೂ ಈ ಬಾವಿಯಲ್ಲಿನ ನೀರು ಬತ್ತಿಲ್ಲ. ಯಂತಹ ಬರಗಾಲ ಬಂದರೂ ಸಹ ಈ ಬಾವಿಯಲ್ಲಿ ಗಂಗೆ ಎಲ್ಲರ ಮನ ತಣಿಸುತ್ತಿದ್ದಾಳೆ. ಇಲ್ಲಿನ ಗಂಗಾಜಲ ವಿಶಿಷ್ಠ. ರೈತರು ಸೋಮವಾರ ದಿವಸ ಗಂಗಾಜಲ ತೆಗೆದುಕೊಂಡು ಹೋಗಿ ಹೊಲದಲ್ಲಿರುವ ಬೆಳೆಗಳಿಗೆ ಸಿಂಪಡಿಸಿದರೆ ಹುಳದ ಬಾಧೆ ತಗಲುವುದಿಲ್ಲ ಎಂಬ ನಂಬಿಕೆಯಿಂದ ರೈತರು ತಮ್ಮ ಹೊಲಗಳಿಗೆ ತೆಗೆದುಕೊಂಡು ಹೋಗಿ ಸಿಂಪರಣೆ ಮಡುತ್ತಾರೆ.


ಹೂವಿನಬಾವಿ ಗ್ರಾಮದ ಬಹುಸಂಖ್ಯಾತರು ವ್ಯಾಪಾರಕ್ಕಾಗಿ ಹಳ್ಳಿಯನ್ನು ತೊರೆದು ಮಸ್ಕಿ ಪಟ್ಟಣದಲ್ಲಿ ವಾಸವಾಗಿದ್ದಾರೆ. ಆದರೂ ತಮ್ಮ ಊರಿನ ಪ್ರೀತಿಯನ್ನು ಕಳೆದುಕೊಂಡಿಲ್ಲ. ಪ್ರತಿವರ್ಷ ಜಾತ್ರೆಗೆ ಗ್ರಾಮದ ಎಲ್ಲರೂ ಒಟ್ಟಾಗಿ ಸೇರುತ್ತಾರೆ. ಸೌಹಾರ್ದಯುತವಾಗಿ ಜಾತ್ರೆ ಮಾಡುತ್ತಾರೆ. ವಿಶೇಷವಾಗಿ ಹೂವಿನಬಾವಿ ಗ್ರಾಮದವರು ಬೇರೆ ಬೇರೆ ಕಡೆ ತಮ್ಮ ಬದಕು ಕಟ್ಟಕೊಳ್ಳಲು ಹೋಗಿದ್ದರೂ ಸಹ ಗವಿಸಿದ್ದೇಶನ ನಾಮಸ್ಮರಣೆ ಬಿಟ್ಟಿಲ್ಲ. ತಮ್ಮ ತಮ್ಮ ಅಂಗಡಿ ವ್ಯವಹಾರಗಳನ್ನು ಗವಿಸಿದ್ದೇಶ್ವರನ ಹೆಸರಿನಲ್ಲಿ ಪ್ರಾರಂಭಿಸುವ ಮೂಲಕ ಗವಿಸಿದ್ದೇಶ್ವರನ ಕೃಪೆಗೆ ಪಾತ್ರರಾಗಿದ್ದಾರೆ.
ಕಣ್ಣು ಕೊಟ್ಟ ಕಣ್ಣಪ್ಪ ಃ ಗವಿಸಿದ್ದೇಶ್ವರ ದೇವಸ್ಥಾನ ಪೂಜೆ ಮಾಡುವ ಪ್ಮಜಾರಿಯ ಮಗನಿಗೆ ಏಕಾಏಕಿ ಕಣ್ಣು ಕಾಣದೆ ಕುರಾಡನಾಗುತ್ತಾನೆ. ಅನೇಕ ಕಡೆ ಕಣ್ಣಿನ ಬಗ್ಗೆ ಚಿಕಿತ್ಸೆ ಕೊಡಿಸಿದರು ಕಣ್ಣು ಬರುವುದಿಲ್ಲ. ಆಗ ಪೂಜಾರಿ ಗವಿಸಿದ್ದೇಶನಲ್ಲಿ ಬೇಡಿಕೊಂಡು ನಾನು ನಿನಗೆ ನಿಷ್ಠೆಯಿಂದ ಪೂಜೆ ಸಲ್ಲಿಸಿದ್ದರೆ ನನ್ನ ಮಗನ ಕಣ್ಣು ಕೊಟ್ಟು ನನ್ನ ಪಾಲಿನ ಕಣ್ಣಪ್ಪನಾಗು ಎಂದು ಬೇಡಿಕೊಳ್ಳುತ್ತಾನೆ. ಮಗನಿಗೆ ವಕ್ತುಂಬಾವಿಯಿ ತೀರ್ಥ ಕುಡಿಸಿ ಕಣ್ಣಿಗೆ ಸಿಂಪರಣೆ ಮಾಡಿಸುತ್ತಾನೆ. ವಾರದೊಳಗಾಗಿ ಮಗನಿಗೆ ಕಣ್ಣು ಬಂದಿವೆ ಎಂದು ಹಿಂದೆ ನಡೆದುಹೋದ ಪವಾಡದ ಬಗ್ಗೆ ನಮ್ಮ ಹಿರಿಯರು ನಮಗೆ ಹೇಳುತ್ತಿದ್ದರು ಎಂದು ಗ್ರಾಮದ ಹಿರಿಯರಾದ ವೆಂಕನಗೌಡ ಪೊಲೀಸ್ ಪಾಟೀಲ ಹಳೆಯ ಘಟನೆಯನ್ನು ಮೆಲಕು ಹಾಕಿದರು.

ಬ್ರಿಜ್, ಕಲ್ಯಾಣ ಮಂಟಪದ ಅವಶ್ಯಕತೆ ಃ ಬೆಟ್ಟದ ಮೇಲಿರುವ ಗವಿಸಿದ್ದೇಶ್ವರ ದರ್ಶನಕ್ಕೆ ಹೋಗಬೇಕಾದರೆ ಹುವಿನಬಾವಿ ಗ್ರಾಮದ ಮುಂದೆ ಹರಿಯುವ ಹಳ್ಳ ದಾಡಿಕೊಂಡು ಬೆಟ್ಟಕ್ಕೆ ಹೋಗಬೇಕು. ಹಾಗಾಗಿ ಹಳ್ಳಕ್ಕೆ ಬ್ರಿಜ್ ನಿರ್ಮಿಸುವದು ಅವಶ್ಯಕವಾಗಿದೆ. ಸಾವಿರಾರು ಜನ ಮದುವೆಗಾಗಿ ಈ ದೇವಸ್ಥಾನವನ್ನು ಅವಲಂಭಿಸಿದ್ದು ಕಲ್ಯಾಣ ಮಂಟಪವಿಲ್ಲ. ದೇವಸ್ಥಾನದ ಮುಂಬಾಗದಲ್ಲಿ ಸಾವಿರಾರು ರೂ.ಖರ್ಚು ಮಾಡಿ ಪೆಂಡಾಲ ಹಾಕಿ ಮುದುವೆ ಮಾಡುತ್ತಿರುವುದರಿಂದ ಅನಗತ್ಯವಾಗಿ ವೆಚ್ಚ ಮಾಡಬೇಕಾದ ಪರಸ್ಥಿತಿ ಇದೆ. ಅದರ ಬದಲಿಗೆ ಕಲ್ಯಾಣ ಮಂಟಪ ನಿರ್ಮಿಸಿದರೆ ಖರ್ಚು ಕಡಿಮೆಯಾಗಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಇಲ್ಲಿನ ಜನರು ಅಭಿಪ್ರಾಯಪಡುತ್ತಾರೆ.
ನೂತನ ಮಸ್ಕಿ ತಾಲೂಕು ಐತಿಹಾಸಿಕವಾಗಿ ಪ್ರಸಿದ್ದಿ ಪಡೆದಿದೆ. ಈ ತಾಲೂಕಿನಲ್ಲಿ ಬರುವ ಕೆಲವು ತಾಣಗಳನ್ನು ಅಭಿವೃದ್ದಿ ಪಡಿಸಿದರೆ ಪ್ರವಾಸಿ ತಾಣಗಳಾಗಿ ಪರಿವರ್ತಿಸಬಹುದು. ಅವುಗಳಲ್ಲಿ ಮಸ್ಕಿಯ ಅಶೋಕನ ಶಾಸನ ಪ್ರದೇಶ, ಮಲ್ಲಿಕಾರ್ಜುನ ಬೆಟ್ಟ್, ೧೧ ಹನುಮಂತ ದೇವಲಾಗಳು, ಹೂವಿನಬಾವಿ ಗವಿಸಿದ್ದೇಶ್ವರ ಬೆಟ್ಟ, ಸಂತೆಕೆಲ್ಲೂರು ಕೃಷಿಕೃಷಿ ಘನಮಠೇಶ್ವರ ಗದ್ದುಗೆ ಪ್ರದೇಶ, ಬುದ್ದಿನ್ನಿ ಕಣ್ವಮಠ, ಮೆದಕಿನಾಳ ಚನ್ನಮಲ್ಲ ಶಿವಯೋಗಿಗಳ ತಪೋಭೂಮಿ, ತಲೇಖಾನ ಗ್ರಾಮದಲ್ಲಿರುವ ವೀರಭದ್ರೇಶ್ವರ ಪುರಾತನ ದೇವಾಲಯದ ಜಿರ್ಣೋದ್ಧಾರ ಹಾಗೂ ಕುಮಾರರಾಮನ ಐಕ್ಯಸ್ಥಳ ಅಭಿವೃದ್ದಿ, ಮಸ್ಕಿ ಜಲಾಶಯ ಹೀಗೆ ಹತ್ತಾರು ಕಡೆ ಮೂಲಭುತ ಸೌಕರ್ಯಗಳನ್ನು ಒದಗಿಸಿ ಪ್ರವಾಸಿ ತಾಣವನ್ನಾಗಿ ಮಾಡಿದರೆ ಈ ಭಾಗ ಮತ್ತಷ್ಟು ಅಭಿವೃದ್ದಿ ಆಗುವುದರಲ್ಲಿ ಸಂಶಯವಿಲ್ಲ.

ಸುಂದರ ನಿಸರ್ಗ ನಿರ್ಮಿತ ತಾಣವಾಗಿರುವ ಗವಿಸಿದ್ದೇಶ್ವರ ಬೆಟ್ಟಕ್ಕೆ ಹೋಗಲು ಹಳ್ಳಕ್ಕೆ ಬ್ರಿಜ್, ಮದುವೆ ಕಾರ್ಯಕ್ಕಾಗಿ ಕಲ್ಯಾಣ ಮಂಟಪ, ಶುದ್ದ ಕುಡಿಯುವ ನೀರಿನ ಘಟಕ, ಸಾರ್ವಜನಿಕರು ತಂಗಲು ತಂಗುದಾಣ, ವಸತಿ ನಿಲಯಗಳನ್ನು ಸರ್ಕಾರ ನಿರ್ಮಿಸಿದರೆ ಇದೊಂದು ಐತಿಹಾಸಿಕ ಪ್ರವಾಸಿ ತಾಣವಾಗಿ ಮಾರ್ಪಡುತ್ತದೆ.
-ವೆಂಕಟರಡ್ಡೆಪ್ಪ ಹುವಿನಬಾವಿ, ವರ್ತಕರು ಮಸ್ಕಿ

Don`t copy text!