ರತ್ನದ ಸಂಕೋಲೆಯಾದಡೆ ತೊಡರಲ್ಲವೇ ?
ರತ್ನದ ಸಂಕೋಲೆಯಾದಡೆ ತೊಡರಲ್ಲವೆ?
ಮುತ್ತಿನ ಬಲೆಯಾದಡೆ ಬಂಧನವಲ್ಲವೆ? ಚಿನ್ನದ ಕತ್ತಿಯಲ್ಲಿ ತಲೆಪೊಯ್ದಡೆ ಸಾಯದಿರ್ಪರೆ? ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ?
ರತ್ನದ ಸಂಕೋಲೆಯಾದಡೆ ತೊಡರಲ್ಲವೇ ?
ರತ್ನ ದ ಬೇಡಿ ಹಾಕಿದರೇನು ಬೇಡಿ ಬೇಡಿಯೇ ತೊಂದರೆಯೇ ಆಗುತ್ತದೆ ಹೊರತು ಓ ನನಗೆ ರತ್ನದ ಬೇಡಿಯಿಂದ ಬಂದಿಸಿದರು ಎನ್ನುವುದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ.ಯಾವ ಬೇಡಿಯಿಂದ ಬಂದಿಸಿದರೂ ಅದರಿಂದ ತೊಂದರೆಯೇ ಅದು ರತ್ನದ್ದು ಬೆಲೆಬಾಳುವಂಥದ್ದು ಎಂಬ ಕಾರಣಕ್ಕೆ ತೊಂದರೆ ಕೊಡುವುದಿಲ್ಲವೇ ? ಹಾಗೆ
ಮುತ್ತಿನ ಬಲೆಯಾದಡೆ ಬಂಧನವಲ್ಲವೇ ?
ಯಾವ ಬಂಧನದಿಂದ ಬಂಧಿಸಿದರೇನು ಅದು ಸುಂದರವಾದ ಮುತ್ತಿನಿಂದ ತಯಾರುಮಾಡಿ ನಮ್ಮನ್ನು ಬಲೆಯಲ್ಲಿ ಕೂಡುಹಾಕಿದರೂ ಬಂಧನ ಬಂಧನವೇ ಓ ನಿನಗೆ ಎಷ್ಟು ಚಂದದ ಮುತ್ತಿನ ಹಾರದಲ್ಲಿ ನಿನ್ನನ್ನು ಬಂಧಿಸಿರುವರು ಎಂದು ತಿಳಿದು ಸಂಭ್ರಮವನ್ನು ವ್ಯಕ್ತಪಡಿಸಲಾಗುತ್ತದೆಯೇ ಬಂಧನ ಬಂಧನವೇ ಅದೇ ರೀತಿ
ಚಿನ್ನದ ಕತ್ತಿಯಲ್ಲಿ ತಲೆಪೊಯ್ದಡೆ ಸಾಯದಿರ್ಪರೆ ?
ಯಾವ ಅಲಗು ಚಿನ್ನದ್ದು ಆದರೇನು? ಚಿನ್ನದ ಕತ್ತಿ
ತುಂಬಾ ಬೆಲೆಯುಳ್ಳದಾಗಿದೆ .
ಇದರಿಂದ ನಿನ್ನ ತಲೆಯನ್ನು ತೆಗೆಯುವೆ ಎಂದು ಹೇಳಿದರೆ ಖುಷಿ ಪಡಲು ಆಗುವುದೇ ? ಆ ಆಯುಧಕ್ಕೆ ಕರುಣೆ ಬರುವುದೇ? ನಮ್ಮನ್ನು ಸಾಯಸದೇ ಬಿಡುವುದೇ? ಚಿನ್ನದ ಕತ್ತಿಯಿಂದ ನಿನ್ನನ್ನು ಸಾಯಿಸುತ್ತೇನೆ ಎಂದರೇನು ?ಅದರಿಂದ ನಾವು ಬದುಕುತ್ತೇವೆಯೇ?
ಚಿನ್ನದ ಕತ್ತಿಯಲ್ಲಿಯೇ ತಲೆಯನ್ನು ಕತ್ತರಿಸಿದರೂ ಆತ ಸಾಯುವನೇ ಹೊರತು ಬದುಕಿ ಉಳಿಯಲಾರ.
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನ ಮರಣ ಬಿಡುವುದೇ ಚೆನ್ನಮಲ್ಲಿಕಾರ್ಜುನಯ್ಯಾ
ಈ ಭೂಮಿಯ ಮೇಲೆ ಹುಟ್ಟಿದವರು ಒಂದಿಲ್ಲೊಂದು ದಿವಸ ಸಾಯಲೇಬೇಕು. ಹುಟ್ಟು ಮತ್ತು ಸಾವು ಇವುಗಳಿಂದ ನಮಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ .
ಯಾವ ಭಜನೆ ಮಾಡಿದರೇನು ಭಗವಂತನನ್ನು ಎಷ್ಟು ಭಕ್ತಿ ಭಾವದಿಂದ ಪೂಜಿಸಿದರೇನು ? ಈ ಲೌಕಿಕ ಬಂಧನದಲ್ಲಿ ಸಿಲುಕಿದ ಭಕ್ತ ಮೋಕ್ಷ ಹೊಂದಲು ಸಾಧ್ಯವೇ? ದೇವರನ್ನು ಕಾಣಲು ಸಾಧ್ಯವೇ ? ಮಾನವ ಹುಟ್ಟು ಸಾವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ? ಒಟ್ಟಿನಲ್ಲಿ ಭಜನೆ ಮತ್ತು ಭಕ್ತಿಗಳು ಒಳ್ಳೆಯ ಹವ್ಯಾಸಗಳಾದರೂ ಕೇವಲ ಭಜನೆಯಲ್ಲಿ ಸಿಲುಕಿದವರಿಗೆ
ಲೌಕಿಕ ಬಂಧನದಲ್ಲಿ ಸಿಲುಕಿದ ಭಕ್ತನಿಗೆ ಮುಕ್ತಿಯನ್ನು ಆತ ಹುಟ್ಟು ಸಾವುಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಎಂಬುದನ್ನು ಅಕ್ಕಮಹಾದೇವಿ ತಮ್ಮ ಒಂದು ವಚನದಲ್ಲಿ ಈ ರೀತಿಯಾಗಿ ಹೇಳಿದ್ದಾರೆ
–ಶ್ರೀಮತಿ ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ