ವಾವ ನೋಡಿ wov ಅಂದೆ….

ಪ್ರವಾಸ ಕಥನ

ವಾವ ನೋಡಿ wov ಅಂದೆ….

ಆಡಲಾಜ್ ವಾವ್ ಅಂದ್ರೆ ಬಾವಿ…. ಇರುವದು ಗುಜರಾತನ ಅಹ್ಮದಾಬಾದ ನಗರದಿಂದ ಸುಮಾರು 17 k.m ಆಡಲಾಜ್ ಎಂಬ ಪ್ರದೇಶದಲ್ಲಿದೆ. ಸ್ಥಳೀಯರು ರೂಡಾಬಾಯಿ ವಾವ ಎನ್ನುತ್ತಾರೆ.
ಜುಲೈ ತಿಂಗಳಲ್ಲಿ ಗುಜರಾತ್ ಪ್ರವಾಸದ booking ಆಗಿತ್ತು. ನಾವು ಹೋಗುವ ದಿನ ಹತ್ತಿರ ಇತ್ತು. ಟಿ. ವಿ ಯಲ್ಲಿ ಗುಜರಾತ್ ನಲ್ಲಿ ಧಾರಾಕಾರ ಮಳೆ ಎಂದು ಎಲ್ಲೆಡೆ ನೀರು ತುoಬಿರುವ ದೃಶ್ಯ ಬಿತ್ತರವಾಗುತ್ತಿತ್ತು. ನೋಡೋಣ cancel ಮಾಡಲು ಆಗಲ್ಲ ಹೋಗೋಣ. ತುಂಬಾ ತೊಂದ್ರೆ ಇದ್ರೆ ವಾಪಸ್ಸು ಬರೋದು ಎಂದುಕೊಂಡ ಹೋದ ನಮಗೆ ಮಳೆರಾಯ 7.8ದಿನ ತೊಂದ್ರೆ ಕೊಡದೆ… ಮೋಡ ಕವಿದ ವಾತಾವರಣದಿಂದ ಅನುಗ್ರಹ ತೋರಿದ.
ನನಗೋ ನೀರು ತುಂಬುವ ಬಾವಿಯನ್ನು ಯಾಕೆ ಇಷ್ಟೊಂದು ಸುಂದರವಾಗಿಸಿದ್ದಾರೆ ಎನ್ನುವ ಕುತೂಹಲ. ಅಂಥ ಮೋಡ ಕವಿದ ವಾತಾವರದಲ್ಲೂ ಬೆವರು.
ಮೊದಲು ಅಂಬೆ ಮಾತಾ ದೇವಸ್ಥಾನ ಇದೆ. ಬೆಳಿಗ್ಗೆ 8ರಿಂದ ಸಾಯಂಕಾಲ 6ವರೆಗೆ ತೆರೆದಿರುತ್ತೆ. ತುಂಬಾ ಬಿಸಿಲಿನ ಕಾರಣ ಬೆಳಿಗ್ಗೆ ಹೋಗುವದು ಉತ್ತಮ.
ಮೆಟ್ಟಲು ಇಳಿಯುತ್ತ ಹೋದಂತೆ ಒಂದಲ್ಲ… ಐದು ಅಂತಸ್ತಿನ ಕಟ್ಟಡ. ಕೆಳಗೆ ಸ್ವಲ್ಪ್ ತಂಪಿನ ಅನುಭವ. .ಅಷ್ಟಭುಜಾಕೃತಿಯ ರಚನೆ. ತೆರೆದ ಛಾವಣಿಯಿಂದಾ ಗಾಳಿ. ಬೆಳಕು ಬರುತ್ತೆ. ತುಂಬಾ ಸುಂದರ. ಕಲ್ಪನೆಗಿಂತ ಅಧಿಕ ಕೆತ್ತನೆ ಯಿಂದಾ ಕೂಡಿತ್ತು.16ಕಂಬಗಳು. ಕಮಾನುಗಳು. ಮಧ್ಯದಲ್ಲಿ ಬಾವಿ. ಅರಮನೆಗೆ ಬಂದವೇನೋ ಅನಿಸುತ್ತೆ. ಕಂಬಗಳು. ಸುತ್ತಲೂ ಆನೆಗಳು. ಎಲೆ. ಬಳ್ಳಿ. ಹೂವುಗಳು. ಹಕ್ಕಿಗಳು… ಪಟೋಲಾ ಸೀರೆಯಲ್ಲಿ ಕಾಣುವ ಚಿತ್ರಗಳು… ಇಲ್ಲಿಯ ಕೆತ್ತನೆಯ ಚಿತ್ರ ಎಂದು ಅರಿತು ಆಶ್ಚರ್ಯವಾಯಿತು. ನೋಡಿ ನಾನು ಉದ್ಗರಿಸಿದ್ದು wov ಎಂದೇ… ಗುಜರಾತ ನಲ್ಲಿ ವಾವ ಎಂದ್ರೆ ಬಾವಿ.
ಹೆಚ್ಚು ಮಳೆ ಬೀಳದ ಪ್ರದೇಶ. ನೀರಿಗಾಗಿ ಇಂಥ ಬಾವಿ ನಿರ್ಮಿಸಿ. ಬಿಸಿಲಿನ ಬೇಗೆಯಿಂದ ದಣಿವು ತಣಿಸಲು ಇಂಥ ಬಾವಿ ನಿರ್ಮಿಸುತ್ತಿದ್ದರಂತೆ. ಇದು ಮೂರು ಪ್ರವೇಶ ದ್ವಾರವನ್ನು ಹೊಂದಿದ…. ಜಯ.. ಮಾದರಿಯ ಮೆಟ್ಟಿಲು ಬಾವಿ. ಇದಕ್ಕೆ ರುಡಾಬಾಯಿ ವಾವ್ ಎನ್ನುವ ಹಿಂದೆಯೂ ದೊಡ್ಡ ಕಥೆಇದೆ.
ತಣ್ಣೀರಿನ ಕಣ್ಣೀರ ಕಥೆ.

ಹದಿನೈದನೇ ಶತಮಾನದಲ್ಲಿ ವ ಘೆಲಾ ವಂಶದ ರಾಣಾ ವೀರಸಿಂಗ್ ಈ ದಂಡೈ ಪ್ರಾಂತ ಅಳುತ್ತಿದ್ದ. ಪ್ರಜೆಗಳ ನೀರಿನ ಭವಣೆ ನೋಡಿ ಈ ಬಾವಿ ಕಟ್ಟಿಸಲು ನಿರ್ಧಾರ ಕೈಗೊಂಡ. ಈ ಯೋಜನೆ ಮುಗಿಯುವ ಮೊದಲೇ ಪಕ್ಕದ ರಾಜ್ಯದ ದೊರೆ ಮಹಮ್ಮೊದ ಬೆಂಗ್ದಾ ದಂಡೆತ್ತಿ ಬಂದ. ಭೀಕರ ಕಾಳಗದಲ್ಲಿ ರಾಣಾ ವೀರಮರಣವನ್ನಪ್ಪಿದ. ರಾಣಾ ನ ಪತ್ನಿ ಸತಿಗೆ ಸಿದ್ಧಳಾದಳು. ಅವಳ ಅಪೂರ್ವ ಸೌಂದರ್ಯಕ್ಕೆ ಮರುಳಾದ ಬೆಗ್ದಾ ಅವಳನ್ನು ತಡೆದ. ಮದುವೆ ಪ್ರಸ್ತಾಪ್ ಮುಂದಿಟ್ಟ. ಬಹಳ್ ಯೋಚಿಸಿ ರುಡಾಬಾಯಿ ಈ ಅಪೂರ್ಣ ಗೊಂಡ ಬಾವಿ ಪೂರ್ಣ ಗೊಳಿಸಿದರೆ ಮದುವೆ ಯಾಗುವದಾಗಿ ಷರತ್ತು ಹಾಕಿದಳು. ಅವಳ ಇಚ್ಛೆ ಯoತೆ ಬಾಗ್ದಾ ಬಾವಿ ಕೆಲಸ ಪೂರ್ಣಗೋಳಿಸಿದ. ರುಡಾಬಾಯಿ ಅದೇ ಬಾವಿಗೆ ಹಾರಿ ಪ್ರಾಣ ಬಿಟ್ಟಳು. ಸಿಟ್ಟಿಗೆದ್ದ ಬಾಗ್ದಾ ಆ ಬಾವಿ ನಿರ್ಮಿಸಿದ ಮೇಸ್ತ್ರಿಗಳನ್ನು ಹತ್ಯೆಗೈದ. ಇವ್ರೆಲ್ಲರ 6ಸಮಾಧಿಗಳು ಅದೇ ಸ್ಥಳದಲ್ಲಿದೆ. ಹಾಗಾಗಿ ಈ ಬಾವಿಯನ್ನು ರುಡಾಬಾಯಿ ವಾವ ಎನ್ನುತ್ತಾರೆ.
ಹಿಂದೂ ಮತ್ತು ಮುಸ್ಲಿಂ ದೊರೆಗಳು ಕಟ್ಟಿಸಿರುವದರಿಂದ.. ಇಂಡೋ ಇಸ್ಲಾಮಿಕ್… ಶೈಲಿಯಲ್ಲಿ ಕೆತ್ತನೆ ಇದೆ. ಮರಳು. ಕಲ್ಲು ಗಳನ್ನು ಬಳಸಿ ಮಾಡಿರುವ ಕಲ್ಲಿನ ಕಲಾತ್ಮಕ್ ಕಂಬ ಗಳ ತುಂಬೆಲ್ಲಾ ಆಕರ್ಷಕ ಕೆತ್ತನೆಗಳಿವೆ. ಬದುಕಿಗೆ ಅತ್ಯಗತ್ಯ ಜೀವಜಲ್ ಎಂದು ಸಂಕೇತಿಸುವ
ಕುಂಭ ಆಮೀಕುಂಭೋರ್.. ಬೇಡಿದನೆಲ್ಲ ನೀಡುವ ಕಲ್ಪವೃಕ್ಷ. ಗೋಡೆಗಳಲ್ಲಿ ಸಾಲಾಗಿ ನಿಂತಿರುವ ಸಾಲಭoಜಿಕೆಯರ ಕೆತ್ತನೆ ಅಪ್ರತಿಮವಾಗಿದೆ.
*World Heritage center ನಡಿ ಗುರುತಿಸಲಾಗಿದೆ.* ವಾವ…. Wov ಆದ ಕಥೆ ಇದು.

 

ಶ್ರೀಮತಿ. ವಿದ್ಯಾ. ಹುಂಡೆಕರ.


ಶರಣೆ ವಿದ್ಯಾ ಹುಂಡೇಕರ್ ಇವರು ಬೆಳಗಾವಿಯ ಉದಯೊನ್ಮುಖ ಲೇಖಕಿ ಭಾರತ ದೇಶದ ಪ್ರತಿ ರಾಜ್ಯ ಕ್ಕೆ ಭೇಟಿ ನೀಡಿ ಅಲ್ಲಿನ ಐತಿಹಾಸಿಕ ಸ್ಥಳಗಳನ್ನು ಶಬ್ದ ಚಿತ್ರಣದಲ್ಲಿ ತಮ್ಮ ಕೆಮೆರಾ ಮೂಲಕ ಸೆರೆ ಹಿಡಿದು ಕ್ಷೇತ್ರ ಪರಿಚಯ ಮತ್ತು ತಮ್ಮ ಪ್ರವಾಸ ಕಥನ ನಮ್ಮೊಂದಿಗೆ ಹಂಚಿಕೊಳ್ಳಲು ವೇದಿಕೆ ಅವರಿಗೆ ಪ್ರತಿ ಬುಧವಾರ ಅವಕಾಶ ನೀಡಿದೆ.

ಸಂಪಾದಕ

Don`t copy text!