ಇತರರ ಬಗ್ಗೆ ಸೌಜನ್ಯವಿರಲಿ

ವ್ಯಕ್ತಿತ್ವ ವಿಕಸನ ಮಾಲೆ

ಇತರರ ಬಗ್ಗೆ ಸೌಜನ್ಯವಿರಲಿ

ಹಣವಿದ್ದರೆ ನಾವು ಎಂಥ ನಾಯಿಯನ್ನು ಬೇಕಾದ್ರೂ ಖರೀದಿಸಬಹುದು . ಆದರೆ ಆ ನಾಯಿ ಬಾಲ ಅಲ್ಲಾಡಿಸೋದು ನಾವು ನೀಡಿರುವ ಹಣಕಲ್ಲ ಅದಕ್ಕೆ ನಾವು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತೇವೋ ಹಾಗೆ ನಾವು ತೋರುವ ಕರುಣೆಗೆ ಮಾತ್ರ.

ಈ ಕರುಣೆ ಎಂಬ ಭಾಷೆ ಕಿವುಡನಿಗೂ ಕೇಳಿಸುತ್ತದೆ. ಕುರುಡನಿಗೂ ಕಾಣಿಸುತ್ತದೆ. ಯಾಕೆಂದರೇ ತಮ್ಮ ನಡವಳಿಕೆಯಲ್ಲಿ ಆ ಕರುಣೆ ಎನ್ನುವುದು ಎದ್ದು ಕಾಣಿಸುತ್ತದೆ.

ಗೆಳೆಯ ಸತ್ತ ನಂತರ ಆತನ ಸಮಾಧಿ ಮೇಲೆ ಹೂ ಗುಚ್ಛ ಇರಿಸುವುದಕ್ಕಿಂತ ಆತ ಬದುಕಿದ್ದಾಗ ಅವನ ಬಗ್ಗೆ ಕರುಣೆ ತೋರಿಸಿ  ಎನ್ನುವ ಮಾತು ನಾವು ನೀವೆಲ್ಲ ಎಷ್ಟು ಸರ್ತಿ ಕೇಳಿದ್ದೇವೆ.

ನೀವು ಇನ್ನೊಬ್ಬರ ಮೇಲೆ ಕರುಣೆ ತೋರಿಸಿ ಅಥವಾ ಇತರರು ನಿಮ್ಮ ಮೇಲೆ ಕರುಣೆ ತೋರಲಿ ಒಟ್ಟಿನಲ್ಲಿ ಕರುಣೆ ಎಂಬುದು ನಮ್ಮಲ್ಲಿ ಚೇತುಹಾರಿ ಭಾವನೆ ಮೂಡಿಸುತ್ತದೆ .

ನಮ್ಮ ಮೃದು ಮಾತಿನಿಂದ ನಾಲಿಗೆಗೆ ಇದು ಎಂದು ಘಾಸಿ ಮಾಡುವುದಿಲ್ಲ. ಹೌದು! ಯಾವುದೇ ಸಂಬಂಧದಲ್ಲಿ ನಮ್ಮ ಮಾತಿನಲ್ಲಿ ಮುಖ್ಯ ಇನ್ನೊಬ್ಬರ ಮನ ನೋಯಿಸದೆ ಇರುವದು.

ಮನುಷ್ಯನಲ್ಲಿ ಔದಾರ್ಯ ಇರಬೇಕು ಇದು ಭಾವನಾತ್ಮಕ ಪ್ರಭುದ್ಧತೆಯ ಲಕ್ಷಣ . ಈ ಉದಾರಿಯಾಗುವುದೆಂದರೆ ಚಿಂತನಶೀಲವಾಗಿರುವುದು.

ಸ್ವಾರ್ಥಿಗಳು ಕನಸಿನಲ್ಲಿ ಯೋಚಿಸದಷ್ಟು ಶ್ರೀಮಂತಿಕೆಯನ್ನು ಉದಾರಿಗಳೆ ಅನುಭವಿಸುತ್ತಾರಂತೆ. ಇತರರ ಭಾವನೆಗಳ ಬಗ್ಗೆ ಸಂವೇದನಶೀಲರಾಗಿರಿ ಯಾಕೆ ಅಂದರೆ ಈ ಸ್ವಾರ್ಥ ತನ್ನ ಮೇಲೆ ತಾನೆ ಸೇಡು ತೀರಿಸಿಕೊಳ್ಳುತ್ತದೆ.

ನಾವು ಎಲ್ಲಿಯವರೆಗೆ ಪ್ರಜ್ಞಾವಂತರಾಗಿರುವುದಿಲ್ಲವೋ ಅಲ್ಲಿಯವರೆಗೆ ನಮ್ಮಲ್ಲಿ ಪ್ರಬುದ್ಧತೆ ಬರಲು ಸಾಧ್ಯವಿಲ್ಲ . ಅದರಲ್ಲೂ ಸಂಬಂಧಗಳ ವಿಷಯದಲ್ಲಿ ನಾವೆಲ್ಲ ತಪ್ಪು ಮಾಡೇ ಮಾಡುತ್ತೇವೆ ಇದು ಸಹಜ. ಹಲವು ಬಾರಿ ನಾವು ಪರರ ಅವಶ್ಯಕತೆಗಳ ಬಗ್ಗೆ ಉದಾಸೀನ ತಾಳುತ್ತೇವೆ. ಕೆಲವೊಮ್ಮೆ ನಮಗೆ ಆತ್ಮೀಯರಾಗಿರುವವರ ವಿಷಯದಲ್ಲಿ ಕೂಡ ಹಾಗೆ ಮಾಡುತ್ತೇವೆ . ಇದು ನಿರಾಶೆ ಮತ್ತು ಪ್ರತಿರೋಧರಕ್ಕೆ ದಾರಿ ಮಾಡಿಕೊಳ್ಳುತ್ತದೆ. ನಿರಾಶೆ ಹೋಗಲಾಡಿಸುವ ಮಾರ್ಗ ಎಂದರೆ ಇತರರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು.

ಜನ ಪರಿಪೂರ್ಣರಾಗಿರುವುದರಿಂದ ಸಂಬಂಧಗಳು ಬೆಳೆಯುವುದಿಲ್ಲ ಅವು ಬೆಳೆಯುವುದು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದರಿಂದ

ಕೆಲವರು ಒಳ್ಳೆಯವರಾಗಿರುವುದಕ್ಕಿಂತ ಪರರ ವಿಷಯದಲ್ಲಿ ಮಮತಾ ಮಾಯಿಗಳಾಗಿರುತ್ತಾರೆ. ಪರರ ಬಗ್ಗೆ ನೀವು ಮಮತೆ ತೋರಿದರೆ ಅದು ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಮೂಡಲು ಕೂಡ ನೆರವಾಗುತ್ತದೆ.

ಕೆಲವರಂತು ಸಂಬಂಧ ಮತ್ತು ಮಮತೆಯನ್ನು ಹಣದಲ್ಲಿ ತೂಗಿ ನೋಡುತ್ತಾರೆ . ಹಣಕ್ಕಿಂತ ಮುಖ್ಯವಾದುದು ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು ಎನ್ನುವದು ಮರೆಯುತ್ತಾರೆ.

ಇನ್ನೊಬ್ಬರು ನಮ್ಮನ್ನು ಅರ್ಥ ಮಾಡಿಕೊಳ್ಳುವಂತೆ ಮಾಡುವ ಸುಲಭ ಉಪಾಯ ಎಂದರೆ ನಾವು ಅವರನ್ನು ಅರ್ಥ ಮಾಡಿಕೊಳ್ಳುವುದು. ಇಬ್ಬರ ನಡುವಿನ ನೈಜ ಸಂಹನದ ತಳಹದಿಯೇ ಮಮತಾಮಹಯಗಳಾಗಿರುವುದು.

ನಮ್ರತೆ ಇಲ್ಲದ ವಿಶ್ವಾಸ ದುರಹಂಕಾರಕ್ಕೆ ಏಡೆ ಮಾಡಿಕೊಡುತ್ತದೆ . ಅದಕ್ಕಾಗಿ ಈ ನಮ್ರತೆ ಎನ್ನುವುದು ಪ್ರಜ್ಞಾವಂತರ ಚಿನ್ಹೆ.

ಇತರ ಬಗ್ಗೆ ನಮ್ಮಲ್ಲಿ ಸೌಜನ್ಯ ಇದ್ದಲ್ಲಿ ಎಂಥ ಬಾಗಿಲು ಬೇಕಾದರೂ ತೆಗೆದುಕೊಳ್ಳುತ್ತದೆ ಅಷ್ಟೇನೂ ಬುದ್ಧಿವಂತನಲ್ಲದ ಸೌಜನ್ಯಶೀಲ ವ್ಯಕ್ತಿ ಸೌಜನ್ಯವಿಲ್ಲದ ಬುದ್ಧಿವಂತನಿಗಿಂತ ಜೀವನದಲ್ಲಿ ಮುಂದೆ ಬರುತ್ತಾನೆ .

ಜೀವನದಲ್ಲಿ ಚಿಕ್ಕ ಪುಟ್ಟ ವಿಷಯಗಳು ದೊಡ್ಡ ಬದಲಾವಣೆ ಮಾಡಿಬಿಡುತ್ತವೆ.

ಆನೆ ನೋಡಿ ಎಷ್ಟೊಂದು ದೊಡ್ಡ ಆಕಾರದಿರುತ್ತದೆ . ಅದು ಎಂದಾದರೂ ನಮಗೆ ಹಾನಿ ಮಾಡಿದೆಯೇ ?? ಅದೇ

ಸೊಳ್ಳೆ ನೋಡಿ, ಎಲ್ಲರಿಗೂ ಕಚ್ಚಿರುತ್ತದೆ . ಇಂತಹ ಚಿಕ್ಕಪುಟ್ಟ ಕಿರಿಕಿರಿಗಳೇ ನಮ್ಮ ಸಹನೆಯನ್ನು ಪರೀಕ್ಷಿಸುತ್ತದೆ .

ಚಿಕ್ಕಪುಟ್ಟ ತ್ಯಾಗಗಳ ಮೇಲೆ ಸೌಜನ್ಯ ಎಂಬುದು ನಿಂತಿರುತ್ತದೆ. ಈ ಸೌಜನ್ಯ ಎಂಬುದು ಆಳವಾದ ನೈತಿಕ ತೆಯಿಂದ ಹುಟ್ಟುವಂಥದ್ದು. ಇದರಿಂದ ನಾವು ಕಳೆದುಕೊಳ್ಳದಾದರೂ ಏನಿದೆ?

ನಾವು ಮಮತಾಮಯಿಯಾಗಿ ಸೌಜನ್ಯದಿಂದ ಇರುವುದು ಒಂದು ಬೆಚ್ಚಗಿನ ನಗೆ.

ನಾವು ಬೇರೆಯವರಿಗೆ ಹೇಳುವಂತಹ ಧನ್ಯವಾದಗಳು thanks ಇದೊಂದು ಚಿಕ್ಕ ಶಬ್ದವಾದರೂ ಇದರಿಂದ ಲಾಭವೇ ಹೆಚ್ಚು.

ಸಾಧ್ಯವಾದಷ್ಟು ಈ ಸೌಜನ್ಯದ ಬೀಜ ಏಕೆ ಬಿತ್ತಬಾರದು.?

ನಮ್ಮಲ್ಲಿ ಈ ಸೌಜನ್ಯ ಇದ್ದಾಗ ಈ ಶಿಷ್ಟಾಚಾರ ತಾನಾಗಿಯೇ ಬರುತ್ತದೆ . ಸೌಜನ್ಯ ಮತ್ತು ಶಿಷ್ಟಾಚಾರಗಳಿಗೆ ಪರಸ್ಪರ ಒಂದು ದೊಡ್ಡ ಸಂಬಂಧವಿದೆ.

ಹೊರಗಿನವರ ಜೊತೆಗೆ ಮಾತ್ರವಲ್ಲ ಮನೆಯೊಳಗೂ ಶಿಷ್ಟಾಚಾರ ತುಂಬಾ ಮುಖ್ಯ. ಇನ್ನೊಬ್ಬರ ಮಾತಿಗೆ ಬೆಲೆ ಕೊಡುವುದು ಇದು ಒಂದು ಒಳ್ಳೆಯ ಶಿಷ್ಟಾಚಾರ . ಸೌಜನ್ಯದ ನಡೆತೆಯಿಂದ ಆತ್ಮ ತೃಪ್ತಿ ಮಾತ್ರವಲ್ಲದೆ ಇನ್ನು ಅನೇಕ ಪ್ರಯೋಜನಗಳಾಗುತ್ತವೆ.

ಕೆಲವರಂತೂ ಸೌಜನ್ಯ ಬೆಳೆಸಿಕೊಳ್ಳುವುದಿಲ್ಲ , ಅದು ಅವರಲ್ಲಿದ್ದ ಸೊಕ್ಕು ಎದ್ದು ತೋರಿಸುತ್ತದೆ. ಯಾಕೆ ಹೀಗೆ ಅಂತ ನನಗೆ ಅಚ್ಚರಿಯಾಗುತ್ತದೆ.

ಯಾಕೆಂದರೆ ಕೆಲವರ ಮಾತಲ್ಲಿ ಕಠೋರ ಶಬ್ದಗಳ ಪ್ರಯೋಗವೇ ಜಾಸ್ತಿ . ಅಂತವರ ಸೌಜನ್ಯ ರಹಿತ ನಡವಳಿಕೆಯಿಂದ ಎದುರಿನವರ ಮನಕ್ಕೆ ಎಷ್ಟೊಂದು ಘಾಸಿಯಾಗುತ್ತದೆ.
ಎಂಬುದು ಅವರಿಗೆ ಅರಿವೇ ಇರುವುದಿಲ್ಲ. ಅಂತವರು ಬಹುಜನರಿಂದ ತಿರಸ್ಕರಿಸುತ್ತಾರೆ.

ಅದಕ್ಕಾಗಿಯೇ ಹಿರಿಯರು ಹೇಳುವರು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸೌಜನ್ಯ ಕಲಿಸಬೇಕು. ಒಮ್ಮೆ ಕಲಿತ ಸೌಜನ್ಯ ಜೀವನ ಪರ್ಯಂತ ಜೊತೆಗಿರುತ್ತದೆ. ಸಹನೆ ಮತ್ತು ಮಮತೆ ಇದು ನಮ್ಮನ್ನು ಸದೃಢರಾಗಿ ಇರಲು ಬೆಳೆಸುತ್ತದೆ .

ಈ please , sorry , thank you, ಎಂಬ ಪದಗಳು ಒಬ್ಬ ಮನುಷ್ಯನಿಗೆ ಎಂತಹ ಗೌರವ ತಂದು ಕೊಡುತ್ತದೆ ಅಲ್ಲವೇ ?

ನೆನಪಿಡಿ ನಾವು ಎಲ್ಲಿಯವರೆಗೆ ಸೌಜನ್ಯ ತೋರುವುದಿಲ್ಲವೋ ಅಲ್ಲಿಯವರೆಗೆ ಈ ಸೌಜನ್ಯ ನಮ್ಮಲ್ಲಿಗೆ ಬರಲಾರದು . ಅದಕ್ಕೆ ಸಾಧ್ಯವಾದಷ್ಟು ಬಾರಿ ಮುಗಿದ ಕೈ ಬಾಗಿದ ತಲೆಯಿಂದ ಸೌಜನ್ಯ ಇಂದ ಇರುವುದನ್ನ ಕಲಿಯೋಣ

ಮೃದುತನ ಎನ್ನುವುದು ಈ ಸೌಜನ್ಯದ ಗುರುತು , ಸೌಜನ್ಯ ಎನ್ನುವುದು ಮೃದುತನದ ಪರ್ಯಾಯ ಹೆಸರು. ಇದು ಕೇವಲ ವ್ಯಕ್ತಿಗತವಾಗಲ್ಲದೆ ಸಂಪೂರ್ಣ ಸಮಾಜಕ್ಕೆ ದೊಡ್ಡ ಪ್ರತಿಫಲ ನೀಡುವಂಥದ್ದು.

ಮುಂದುವರೆಯುತ್ತದೆ….

ಮೇನಕಾ ಪಾಟೀಲ್

Don`t copy text!