ಪ್ರವಾಸ ಕಥನ ಸರಣಿ ಲೇಖನ
ಉಜ್ಜಯನಿ ಮಹಾಕಾಳೇಶ್ವರ.
ಕ್ಷಿಪ್ರಾ ನದಿಯ ತಟದಲ್ಲಿರುವ ಪ್ರಾಚೀನ ಪ್ರಾoತ. ಇದು ಮಧ್ಯ ಪ್ರದೇಶದಲ್ಲಿದೆ. ದ್ವಾದಶ ಜ್ಯೋತಿಲಿಂಗ ಗಳಲ್ಲಿ ಒಂದು. ಇಲ್ಲಿ ಪೂಜೆ ಸಲ್ಲಿಸಿದರೆ ಅಪಮೃತ್ಯು ಭಯ ನಿವಾರಣೆ ಯಾಗಿ. ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆ.
ಸಮುದ್ರ ಮಥನ ಸಮಯದಲ್ಲಿ ಅಮೃತದ ಕೆಲವು ಹನಿ ಭೂಮಿ ಮೇಲೆ ಬಿದ್ದವು. ಅಂತಹ ಒಂದು ಹನಿ ಬಿದ್ದ ಜಾಗವೇ ಉಜ್ಜಯನಿ. ಇದು ಭಾರತದ ನಾಭಿ ಪ್ರದೇಶದಲ್ಲಿದೆ. ಮಂತ್ರ. ತಂತ್ರ ವಿದ್ಯೆಗಳಿಗೆ ಹೆಸರುವಾಸಿ. ಈ ದೇವಸ್ಥಾನದ ಪೀಠ ದಕ್ಷಿಣ ದಿಕ್ಕಿಗೆ ಮುಖ ಮಾಡಿದೆ.
ಭಸ್ಮ ಪ್ರಿಯ ಶಿವ. ಹೀಗಾಗಿ ನಿತ್ಯ ಶಿವನಿಗೆ ಭಸ್ಮಾರತಿ.
ಪ್ರಾತಃ 4ಗಂಟೆಗೆ ಭಸ್ಮಾರತಿ ಪ್ರಾರಂಭವಾಗುತ್ತದೆ.ಚಿತಾ ಭಸ್ಮದಿಂದ ಹಾಗೂ ಬೆರಣಿಯನು ಸುಟ್ಟ ಭಸ್ಮದಿಂದ ಭಸ್ಮಾರತಿ ಮಾಡಲಾಗುತ್ತದೆ. ಇದು ಇಲ್ಲಿನ ವಿಶೇಷ ಪೂಜೆ. ಇದನ್ನು ನೋಡಲು ಮೊದಲೇ ಟಿಕೆಟ್ ಕಾಯ್ದರಿಸಬೇಕು. Online ಕೂಡ ಟಿಕೆಟ್ ಲಭ್ಯ.ನಂತರ 7ಗಂಟೆಯಿಂದ 12ಗಂಟೆಯವರೆಗೆ ಜಲಾಭಿಷೇಕ ಹಾಗೂ ಕ್ಷಿರಾಭಿಷೇಕ ನಡೆಯುತ್ತೆ.
ಆಗ ಕೂಡ ಡೈರೆಕ್ಟ್ ದರ್ಶನ ಟಿಕೆಟ್ ಪಡೆದು ನಾವೇ ಮುಟ್ಟಿ ಶಿವನಿಗೆ ಅಭಿಷೇಕ ಮಾಡಬಹುದು. ಇದು ಕೂಡ online ಟಿಕೆಟ್ ಲಭ್ಯ. ಉಳಿದಂತೆ ದೂರದಿಂದಲೇ ದರ್ಶನ ಪಡೆಯಬೇಕಾಗುತ್ತದೆ. ಏಳು ದಿನ ಏಳು ವಿಧದ ಅಲಂಕಾರ ಮಾಡುತ್ತಾರೆ. ದತ್ತೂರಿ ಹೂವು. ಕಾಯಿ. ಬಿಲ್ವ ಪತ್ರೆ. ಎಕ್ಕೆ ಹೂವಿನಿಂದ ಶಿವನನ್ನು ಪೂಜಿಸುತ್ತಾರೆ.
ಶಿವನ ಹಿಂದೆ ಮೇಲೆ ಪಾರ್ವತಿ ದೇವಿ. ಬಲಗಡೆ ಗಣೇಶನ ವಿಗ್ರಹವಿದೆ.
12 ವರ್ಷಕ್ಕೊಮ್ಮೆ ಕುಂಭ ಮೇಳ ನಡೆಯುತ್ತದೆ.ಕ್ಷಿಪ್ರಾ ನದಿಯಲ್ಲಿ ಮಿಂದರೆ ಮೋಕ್ಷ ಎನ್ನುವ ಪ್ರತೀತಿ.
ಕಾಳ ಭೈರವ ಕ್ಷೇತ್ರ ಪಾಲಕ. ಇಲ್ಲಿ ನೈವೇದ್ಯ ರೂಪದಲ್ಲಿ ಸಾರಾಯಿ ಅರ್ಪಿಸುತ್ತಾರೆ.
ಇಲ್ಲಿರುವ ಸಾಂದೀಪನಿ ಆಶ್ರಮದಲ್ಲಿ ಸಾಂದೀಪನಿ ಗುರುಗಳ ಹತ್ತಿರ ಕೃಷ್ಣ. ಬಲರಾಮರು ವಿದ್ಯಾಭ್ಯಾಸ ಪಡೆದಿದ್ದಾರಂತೆ. ಕ್ಷಿಪ್ರಾ ನದಿ ದಂಡೆಯಲ್ಲಿ ಅಘೋರ ವಿದ್ಯೆಯ ಪ್ರಾಪ್ತಿಗಾಗಿ ಅನೇಕ ತಾಂತ್ರಿಕ. ಮಾಂತ್ರಿಕರು ಸಾಧನೆ ಮಾಡುತ್ತಿರುತ್ತಾರೆ.
ರಾಜಾ ವಿಕ್ರಮಾದಿತ್ಯ ಆಳಿದ ರಾಜ್ಯ. ರಾಜಾ ವಿಕ್ರಮಾಧಿತ್ಯನ ಕುಲದೈವ ಹರಸಿದ್ಧಿ ಮಾತಾ ಅನ್ನಪೂರ್ಣೇಶ್ವರಿ ಶಕ್ತಿ ಪೀಠ. ಕಾಡುಗೆoಪು ಕೇವಲ ಮುಖ ಮಾತ್ರ ಇರುವ ಮೂರ್ತಿ. ಶಿವನು ಸತಿದೇಹವನ್ನು ಹೊತ್ತು ಒಯ್ಯುವಾಗ ಆಕೆಯ ಮೊಣಕೈ ಭಾಗ ಈ ಪ್ರದೇಶದಲ್ಲಿ ಬಿತ್ತು. ಹಾಗಾಗಿ ಇಲ್ಲಿ ಮೊಣ ಕೈ ಜೊತೆ ಮುಖ ಪೂಜಿಸಲಾಗುತ್ತೆ. ಈ ದೇವಿಯ ಆಶೀರ್ವಾದದಿಂದಲೇ ವಿಕ್ರಮಾಧಿತ್ಯನ ಸೇವೆಗೆ 64 ಯೋಗಿನಿಯರು ಇದ್ದರು ಎನ್ನಲಾಗುತ್ತದೆ. ವಿಕ್ರಮಾಧಿತ್ಯ ದೀಪಕರಾಗದಿಂದ ಹಾಡಿ ದೀಪ ಹೊತ್ತಿಸುತ್ತಿದ್ದನಂತೆ. ಈಗಲೂ ನಿತ್ಯ ಸಂಜೆ ದೀಪಸ್ತoಬಕ್ಕೆ ದೀಪ ಹಚ್ಚಿ ದೇವಿಗೆ ಮಂಗಾಳರುತಿ ಮಾಡುತ್ತಾರೆ. ಆ ದೃಶ್ಯ ನೋಡಿಯೇ ಅನುಭವಿಸಬೇಕು ತುಂಬಾ ರಮಣೀಯ. ಭಕ್ತಿ ಪ್ರಧಾನವಾಗಿರುತ್ತದೆ.
ಮಂಗಳ ನಾಥ ದೇವಸ್ಥಾನ ಕೂಡ ಪ್ರಸಿದ್ಧಿ. ಗಡ ಕಾಳಿಕಾ ದೇವಿ ಕಾಳಿದಾಸನ ಆರಾಧ್ಯ ಕಾಳಿಕಾ ದೇವಿ.ಚಿಂತಾಮಣಿ ಗಣೇಶ. ಕುಂಭ ಮೇಳ ನಡೆಯುವ ರಾಜ ಘಾಟ. Rss ನವರು ಪ್ರತಿಷ್ಠಾಪಿಸಿದ ಭಾರತಮಾತಾ ದೇವಸ್ಥಾನ ನೋಡಿಕೊಂಡು ಇಂಡೋರ ಹೋಗಿ ಅಲ್ಲಿಂದ ಓಂಕಾರೇಶ್ವರಕ್ಕೆ ಪ್ರಯಾಣ ಬೆಳೆಸಿದೆವು.
✍️ಶ್ರೀಮತಿ. ವಿದ್ಯಾ. ಹುಂಡೇಕರ.